ನಕಲಿ ದಾಖಲೆ ತಯಾರಿಸುತ್ತಿದ್ದ ಆರೋಪಿಗೆ ಪೊಲೀಸ್ ಕಸ್ಟಡಿ

ಪುತ್ತೂರು: ಗ್ರಾಮ ಪಂಚಾಯಿತಿ ಹಾಗೂ ನಗರಸಭೆಯ ನಕಲಿ ದಾಖಲೆ ಸಿದ್ಧಪಡಿಸಿ ನೀಡುತ್ತಿದ್ದ ಆರೋಪದಲ್ಲಿ ಬಂಧಿತನಾಗಿರುವ ಕಬಕ ಗ್ರಾಮದ ಪೆರುವತ್ತೋಡಿ ನಿವಾಸಿ ವಿಶ್ವನಾಥ(40) ಎಂಬಾತನನ್ನು ಪುತ್ತೂರು ನಗರ ಪೊಲೀಸರು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಪುತ್ತೂರು-ಉಪ್ಪಿನಂಗಡಿ ರಸ್ತೆಯ ಪಡೀಲು ಎಂ.ಎಸ್.ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿದ್ದ ಬಿ.ಬಿ ಇಲೆಕ್ಟ್ರಿಕ್ ಮತ್ತು ಪ್ಲಂಬಿಂಗ್ ಅಂಗಡಿಯಲ್ಲಿ ವಿಶ್ವನಾಥ ನಕಲಿ ದಾಖಲೆ ಸಿದ್ಧಪಡಿಸುತ್ತಿದ್ದು, ದಂಧೆ ನಡೆಸುತ್ತಿದ್ದ ಕಾಲಾವಧಿ, ವಸ್ತುಗಳನ್ನು ಪೂರೈಸುತ್ತಿದ್ದವರು, ಶಾಮೀಲಾಗಿರುವವರ ಬಗ್ಗೆ ತನಿಖೆ ನಡೆಯುತ್ತಿದೆ. ಪತ್ತೆ ಸವಾಲು: ನಕಲಿ ದಾಖಲೆಗಳಿಗೆ ಪಾವತಿಸಬೇಕಾಗಿದ್ದ ಹಣವನ್ನು … Continue reading ನಕಲಿ ದಾಖಲೆ ತಯಾರಿಸುತ್ತಿದ್ದ ಆರೋಪಿಗೆ ಪೊಲೀಸ್ ಕಸ್ಟಡಿ