ಇಂದು ವಿವಿಧೆಡೆ ಯೋಗ ದಿನಾಚರಣೆ


ವಿಜಯವಾಣಿ ಸುದ್ದಿಜಾಲ ಹಾಸನ
5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ವಿಜಯವಾಣಿ ದಿನಪತ್ರಿಕೆ ಹಾಗೂ ದಿಗ್ವಿಜಯ ನ್ಯೂಸ್ ಚಾನಲ್ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜೂನ್ 21ರಂದು ಹಾಸನ ನಗರ ಸೇರಿದಂತೆ ವಿವಿಧೆಡೆ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
ನಗರದ ಮಹಾರಾಜ ಉದ್ಯಾನದಲ್ಲಿರುವ ವಿವೇಕಾನಂದ ಯೋಗ ಶಿಕ್ಷಣ ಶಾಲೆಯಲ್ಲಿ ಬೆಳಗ್ಗೆ 6 ರಿಂದ 7ರವರೆಗೆ ಯೋಗ ದಿನ ನಡೆಯಲಿದ್ದು, ಯೋಗ ಗುರು ಎಚ್.ಬಿ. ರಮೇಶ್ ಭಾಗವಹಿಸುತ್ತಾರೆ. ಪತಂಜಲಿ ಯೋಗ ಪರಿವಾರದ ಸಹಕಾರದೊಂದಿಗೆ ಬೆಳಗ್ಗೆ 7 ರಿಂದ 8ರವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಯೋಗ ದಿನ ಏರ್ಪಡಿಸಲಾಗಿದೆ.
ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಮುಂಭಾಗ ಚೇತನ ಯೋಗ ಬಳಗ ಸಹಕಾರ (ಬೆಳಗ್ಗೆ 7 ರಿಂದ 8), ಸಕಲೇಶಪುರದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಯೋಗಚೇತನ ಟ್ರಸ್ಟ್ ಸಹಯೋಗದಲ್ಲಿ ಕಾರ್ಯಕ್ರಮ ನೆರವೇರಲಿದೆ. ಹೊಳೆನರಸೀಪುರದಲ್ಲಿ ಪತಂಜಲಿ ಯೋಗ ಪರಿವಾರದ ಪದಾಧಿಕಾರಿಗಳು ಪಾಲ್ಗೊಳ್ಳುತ್ತಾರೆ. ಚನ್ನರಾಯಪಟ್ಟಣದ ಹೊಯ್ಸಳ ವಿದ್ಯಾಸಂಸ್ಥೆ, ಭೂಮಿ ಉಳಿಸಿ ಆಂದೋಲನ ಹಾಗೂ ಪ್ರತಿಮಾ ಹೆಜ್ಜೆ ಗುರುತು ಸಹಯೋಗದಲ್ಲಿ ತಾಲೂಕು ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಯುತ್ತದೆ. ಅರಸೀಕೆರೆಯ ಹೊಯ್ಸಳೇಶ್ವರ ಕಾಲೇಜು ಆವರಣದಲ್ಲಿ ಯೋಗಾಭ್ಯಾಸ ನಡೆಯುವುದು. ಬೇಲೂರಿನಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ, ಸೇವಾ ಭಾರತಿ ರಾಘವೇಂದ್ರ ಯೋಗ ಕೇಂದ್ರ ಪದಾಧಿಕಾರಿಗಳು ಬೆಳಗ್ಗೆ 7ರಿಂದ ಚನ್ನಕೇಶವಸ್ವಾಮಿ ದೇವಾಲಯ ಆವರಣದಲ್ಲಿ ಭಾಗವಹಿಸುತ್ತಾರೆ.

Leave a Reply

Your email address will not be published. Required fields are marked *