ಭದ್ರಾ ನಾಲೆ ಬಿದ್ದು ಬೆಂಗಳೂರಿನ ಯುವಕ ಸಾವು

ತರೀಕೆರೆ: ತಾಲೂಕಿನ ಎಂ.ಸಿ.ಹಳ್ಳಿ ಸಮೀಪದ ಭದ್ರಾ ಬಲದಂಡೆ ನಾಲೆಯಲ್ಲಿ ಬುಧವಾರ ಯುವಕ ನೀರುಪಾಲಾಗಿದ್ದಾನೆ. ಬೆಂಗಳೂರು ಮೂಲದ ಅಕ್ಷಯ್ (24) ಮೃತ ದುರ್ದೈವಿ. ಬೆಳಗ್ಗೆ 8.45ಕ್ಕೆ ಬೆಂಗಳೂರಿನಿಂದ ಭದ್ರಾವತಿಗೆ ಹೋಗುವ ಮಾರ್ಗದ ಬಲದಂಡೆ ನಾಲೆಯಲ್ಲಿ ಬೈಕ್ ತೊಳೆಯುತ್ತಿದ್ದ. ನಂತರ ನಾಲೆ ಬದಿಯ ಇಳಿಜಾರು ಜಾಗದಲ್ಲಿ ಜಾರಿ ನಾಲೆಗೆ ಬೀಳುತ್ತಿದ್ದಂತೆ ಪಕ್ಕದಲ್ಲೇ ಬಟ್ಟೆ ಒಗೆಯುತ್ತಿದ್ದ ಮಹಿಳೆಯರು ಆತನನ್ನು ರಕ್ಷಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ. ಮಾಹಿತಿ ತಿಳಿದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಯುವಕನಿಗೆ ಹುಡುಕಾಟ ನಡೆಸಿದರೂ ಪತ್ತೆಯಾಗಲಿಲ್ಲ.