ಭೂತನಘಾಟಿಯಲ್ಲಿ ಆನೆ ಸಂಚಾರದ ಮುನ್ನೆಚ್ಚರಿಕೆ ಫ್ಲೆಕ್ಸ್ ಅಳವಡಿಕೆ

ತರೀಕೆರೆ: ಸಂತವೇರಿ ಸಮೀಪದ ಭೂತನಘಾಟಿ ರಸ್ತೆ ತಿರುವುಗಳಲ್ಲಿ ಕೆಲವು ದಿನಗಳಿಂದ ಒಂಟಿ ಸಲಗದ ಉಪಟಳ ಹೆಚ್ಚಾಗಿರುವುದರಿಂದ ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳು ವಾಹನ ಸವಾರರಿಗೆ ಜಾಗೃತಿ ಮೂಡಿಸುವ ಕಾರ್ಯಕೈಗೊಂಡಿದೆ.

ಕೆಲವು ದಿನಗಳ ಹಿಂದೆ ಒಂಟಿ ಸಲಗ ವಾಹನಗಳನ್ನು ಅಡ್ಡಗಟ್ಟಿ ಉಪಟಳ ನೀಡುತ್ತಿತ್ತು. ಭೂತನಘಾಟಿ ಪ್ರದೇಶ ವ್ಯಾಪ್ತಿ ಹಾದು ಹೋಗಿರುವ ರಸ್ತೆಯಲ್ಲಿ ಆನೆ ಸಂಚರಿಸುವುದರಿಂದ ವಾಹನ ಸವಾರರು ಜಾಗರೂಕತೆಯಿಂದ ವಾಹನ ಚಲಾಯಿಸಬೇಕೆಂದು ಮುನ್ನೆಚ್ಚರಿಕೆಯ ಫ್ಲೆಕ್ಸ್ ಅನ್ನು ರಸ್ತೆ ಬದಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಅಳವಡಿಸಿದ್ದಾರೆ.