ಕೋವಿಡ್​ 19 ಲಾಕ್​ಡೌನ್​ ಕೃಪೆ; ವಾರಾಣಸಿ, ಹರಿದ್ವಾರದಲ್ಲಿ ಗಂಗೆ ಸ್ನಾನ ಯೋಗ್ಯ

blank

ನವದೆಹಲಿ: ಲಾಕ್​ಡೌನ್​ನಿಂದಾಗಿ ದೇಶಾದ್ಯಂತ ಕೈಗಾರಿಕೆಗಳು ಮತ್ತು ಕಾರ್ಖಾನೆಗಳು ಸ್ಥಗಿತಗೊಂಡಿವೆ. ಹೀಗಾಗಿ ಅವುಗಳ ವಿಷಕಾರಿ ರಾಸಾಯನಿಕಗಳ ಉಗುಳುವಿಕೆ ಕೂಡ ಸ್ಥಗಿತವಾಗಿ ವಾತಾವರಣ ಸ್ವಚ್ಛವಾಗುತ್ತಿದೆ. ವಾತಾವರಣ ಅಷ್ಟೇ ಅಲ್ಲ, ಅವುಗಳಿಂದಾಗಿ ದೇಶದ ಪ್ರಮುಖ ನದಿಗಳಿಗೆ ಸೇರ್ಪಡೆಯಾಗುತ್ತಿದ್ದ ಅಪಾಯಕಾರಿ ತ್ಯಾಜ್ಯಗಳ ಬಿಡುಗಡೆಯೂ ನಿಂತಿರುವುದರಿಂದ, ಅತ್ಯಂತ ಅಶುದ್ಧವೆನಿಸಿದ್ದ ಗಂಗಾ ನದಿ ಸೇರಿ ಬಹುತೇಕ ನದಿಗಳು ಸ್ವಚ್ಛವಾಗಿವೆ. ಕೆಲದಿನಗಳ ಹಿಂದೆ ಆ ನದಿಗಳ ನೀರು ಕುಡಿಯಲು ಸಹ ಯೋಗ್ಯವಲ್ಲ ಎನ್ನಲಾಗುತ್ತಿತ್ತು. ಆದರೀಗ ಅವುಗಳ ನೀರು ಸ್ನಾನ, ಪಾನ ಯೋಗ್ಯ ಎನಿಸಿವೆ.

ವಾರಾಣಸಿ ಹಾಗೂ ಹರಿದ್ವಾರದಲ್ಲಿ ಹರಿಯುವ ಗಂಗಾ ನದಿ ಸ್ವಚ್ಛಗೊಳಿಸಲು ಕೇಂದ್ರ ಸರ್ಕಾರಗಳು ನದಿಯಲ್ಲಿ ಹರಿದ ನೀರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು ಖರ್ಚು ಮಾಡಿದ್ದವು. ಆದರೂ ಅವುಗಳು ಸ್ವಚ್ಛವಾಗಿರಲಿಲ್ಲ. ಆದರೆ ಇದೀಗ ಕೋವಿಡ್​ 19 ಕೃಪೆಯಿಂದ ಲಾಕ್​ಡೌನ್​ ಘೋಷಣೆಯಾಗಿರುವ ಕಾರಣ, ಗಂಗಾ ನದಿ ಸ್ವಚ್ಛವಾಗಿದ್ದು, ನದಿ ನೀರು ಕುಡಿಯಲು ಯೋಗ್ಯವಾಗಿದೆ ಎಂದು ಪರಿಸರ ವಿಜ್ಞಾನಿಗಳು ಹೇಳಿದ್ದಾರೆ.

ಲಾಕ್​ಡೌನ್​ನಿಂದಾಗಿ ನದಿಯ ತಟದಲ್ಲಿರುವ ಕೈಗಾರಿಕೆಗಳು ಸ್ಥಗಿತವಾಗಿವೆ. ಹಾಗಾಗಿ ಅವುಗಳ ತ್ಯಾಜ್ಯ ನದಿಗೆ ಸೇರ್ಪಡೆಗೊಳ್ಳುವುದು ಕಡಿಮೆಯಾಗಿದೆ. ಧರ್ಮಶಾಲೆಗಳು, ಹೋಟೆಲ್​ಗಳು ಮತ್ತು ವಸತಿಗೃಹಗಳಿಂದ ಹರಿಯುತ್ತಿದ್ದ ಒಳಚರಂಡಿ ನೀರು ಕೂಡ ನದಿಗೆ ಸೇರ್ಪಡೆಗೊಳ್ಳುವುದು ನಿಂತಿದೆ.ಹೀಗಾಗಿ ಹರಿದ್ವಾರದಲ್ಲಿ ಗಂಗೆ ಭಾಗಶಃ ಶುದ್ಧವಾಗಿದ್ದಾಳೆ ಎಂದು ಪರಿಸರ ವಿಜ್ಞಾನಿ ಮತ್ತು ಗುರುಕುಲ್ ಕಾಂಗ್ರಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಬಿ.ಡಿ. ಜೋಶಿ ತಿಳಿಸಿದ್ದಾರೆ. ‘

ಪ್ರತಿದಿನ ಗಂಗಾ ನದಿ ತಟದಲ್ಲಿ ಸ್ನಾನ ಮಾಡಿ ಬಟ್ಟೆ ಒಗೆಯುತ್ತಿದ್ದ ಹಾಗೂ ತ್ಯಾಜ್ಯ ಎಸೆಯುತ್ತಿದ್ದ ಸಾವಿರಾರು ಜನರು ಈಗ ದಿಗ್ಬಂಧನದಲ್ಲಿದ್ದಾರೆ. ಹೀಗಾಗಿ ನೀರು ಸಂಪೂರ್ಣ ತಿಳಿಯಾಗಿ ಹರಿಯುತ್ತಿದೆ. ಕೆಲವೆಡೆ ಮೀನುಗಳು ಸೇರಿ ನದಿ ತಟದಲ್ಲಿನ ಕಲ್ಲುಗಳು ಸಹ ಮೇಲಿಂದಲೇ ಕಾಣುತ್ತವೆ. ಹರಿದ್ವಾರದಲ್ಲಿ ಗಂಗೆಗೆ ಸೇರುತ್ತಿದ್ದ ಕಲುಷಿತ ನೀರಿನ ಪ್ರಮಾಣ ಶೇ.50ಕ್ಕಿಂತ ಹೆಚ್ಚು ಕಡಿಮೆಯಾಗಿದೆ ಎಂದು ಜೋಶಿ ತಿಳಿಸಿದ್ದಾರೆ.

ಉತ್ತರಾಖಂಡ ಹಾಗೂ ನದಿ ಹರಿಯುವ ಇನ್ನಿತರ ಕಡೆಗಳಲ್ಲೂ ಗಂಗೆ ಶುದ್ಧವಾಗಿದ್ದು, ಅಗತ್ಯ ಶುದ್ಧಿಕರಣದ ಬಳಿಕ ಕುಡಿಯಲು ಈ ನೀರು ಯೋಗ್ಯವಾಗಿದೆ ಎಂದು ಪಿಸಿಬಿಯ ಮುಖ್ಯ ವೈಜ್ಞಾನಿಕ ಅಧಿಕಾರಿ ಎಸ್​ಎಸ್ ಪಾಲ್ ಮಾಹಿತಿ ನೀಡಿದ್ದಾರೆ.

ಹಲವು ದಶಕಗಳ ಬಳಿಕ ಗಂಗಾ ನದಿ ನೀರು ಇಷ್ಟು ತಿಳಿಯಾಗಿರುವುದನ್ನು ಕಂಡು ಸ್ಥಳೀಯರು ಕೂಡ ಸಂತಸಗೊಂಡಿದ್ದಾರೆ. ಲಾಕ್​ಡೌನ್​ನಿಂದಾಗಿ ಪ್ರಕೃತಿಯ ಮೇಲೆ ಇಷ್ಟೊಂದು ಸಕಾರಾತ್ಮಕ ಪ್ರಭಾವ ಉಂಟಾಗುತ್ತದೆ ಎಂದು ನೀರಿಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.

ಸ್ನಾನಕ್ಕೂ ಯೋಗ್ಯವಾಗಿರಲಿಲ್ಲ: ಕೆಲ ತಿಂಗಳ ಹಿಂದೆ ಗಂಗಾ ನದಿ ನೀರು ಸ್ನಾನಕ್ಕೂ ಯೋಗ್ಯವಲ್ಲ ಎಂದು ವರದಿಯಾಗಿತ್ತು. ವಾರಾಣಸಿಯಲ್ಲಿ ಹೆಣಗಳನ್ನು ನದಿಯಲ್ಲಿ ತೇಲಿ ಬಿಡುತ್ತಿದ್ದ ಕಾರಣ ಈ ನೀರು ಸ್ನಾನ ಮಾಡಲೂ ಯೋಗ್ಯವಾಗಿರಲಿಲ್ಲ. ಹೀಗೆಂದು ಅನೇಕ ಜಾಗತಿಕ ಸಂಸ್ಥೆಗಳು ಎಚ್ಚರಿಕೆ ನೀಡಿದ್ದವು. ಅಂತ್ಯಕ್ರಿಯೆ ಬಳಿಕ ನದಿಯಲ್ಲಿ ವಿಸರ್ಜಿಸಲಾಗುವ ಬಿದಿರು, ಹೂವು, ಬಟ್ಟೆಗಳಿಂದಾಗಿ ಅಸಹ್ಯ ವಾತಾವರಣ ಉಂಟಾಗಿತ್ತು. ಬಳಿಕ ಕೇಂದ್ರ ಸರ್ಕಾರ ಕೈಗೊಂಡ ನಮಾಮಿ ಗಂಗಾ ಶುದ್ಧಿಕರಣ ಯೋಜನೆಯಿಂದಾಗಿ ಗಂಗೆ ಹಂತಹಂತವಾಗಿ ಶುದ್ಧವಾಗುತ್ತಿದ್ದಾಳೆ. ಆದರೂ ಈ ಪರಿಯ ಶುದ್ಧತೆ ಕಾಣುಸುವುದು ದುಸ್ಸಾಧ್ಯ ಎನ್ನಲಾಗಿದೆ.

Share This Article

ಈ ಕಾಯಿಲೆಯಿಂದ ಬಳಲುತ್ತಿರುವವರು ಸಿಹಿ ಗೆಣಸಿನಿಂದ ದೂರವಿರಿ; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಸಿಹಿ ಗೆಣಸು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ರುಚಿಕರವಾದ ಸಿಹಿಗೆಣಸನ್ನು ಶೀತ ಋತುವಿನಲ್ಲಿ ಕಂಡುಬರುವ ಬೇರು ತರಕಾರಿ…

ಗಿಡಗಳನ್ನು ಹಸಿರಾಗಿಡಲು ಕಡಲೆಕಾಯಿ ಸಿಪ್ಪೆ ಪ್ರಯೋಜನಕಾರಿ; ಇಲ್ಲಿದೆ ಬಳಸುವ ವಿಧಾನ | Tips

ಚಳಿಗಾಲದಲ್ಲಿ ಸಸ್ಯಗಳಿಗೆ ಹೆಚ್ಚಿನ ಕಾಳಜಿ ಬೇಕು. ಏಕೆಂದರೆ ತಂಪಾದ ಗಾಳಿ ಮತ್ತು ಇಬ್ಬನಿಯಿಂದ ತೇವಾಂಶವು ಹೆಚ್ಚಾಗುವುದರಿಂದ…

Kurukshetra | ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ರಣಭೂಮಿಗೆ ದ್ರೌಪದಿಯನ್ನು ಶ್ರೀಕೃಷ್ಣ ಕರೆತಂದಿದ್ದೇಕೆ; ಪರಮಾತ್ಮ ಹೇಳಿದ್ದೇನು?

ಕುರುಕ್ಷೇತ್ರ(Kurukshetra) ಯುದ್ಧದಲ್ಲಿ ಎಲ್ಲಾರೂ ಮರಣ ಹೊಂದಲು ಕಾರಣ ಪಾಂಡವರಲ್ಲ ದ್ರೌಪದಿಯ ಕಣ್ಣೀರು. ಕುರುಕ್ಷೇತ್ರ ಯುದ್ಧ ಮುಗಿದ…