ಮೌಲ್ಯವಿಲ್ಲದ ಶಿಕ್ಷಣ ಅಪಾಯಕಾರಿ

ವಿಜಯವಾಣಿ ಸುದ್ದಿಜಾಲ ಕಮಲನಗರ
ಪ್ರಸ್ತುತ ಚಾರಿತ್ರ್ಯ ನಿರ್ಮಿಸುವ ಹಾಗೂ ಸಮಾಜಕ್ಕೆ ಉಪಯೋಗವಾಗುವ ಮೌಲ್ಯಾಧಾರಿತ ಶಿಕ್ಷಣ ಅಗತ್ಯವಿದೆ. ಮೌಲ್ಯವಿಲ್ಲದ ಶಿಕ್ಷಣ ಅಪಾಯಕಾರಿ ಎಂದು ಭಾಲ್ಕಿ ಹಿರೇಮಠದ ಪೂಜ್ಯ ಗುರುಬಸವ ಪಟ್ಟದ್ದೇವರು ಹೇಳಿದರು.

ಠಾಣಾಕುಶನೂರ ಗ್ರಾಮದ ಸರಸ್ವತಿ ವಿದ್ಯಾಮಂದಿರ ಶಾಲೆ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಆಶೀರ್ವಚನ ನೀಡಿ, ಸಂಸ್ಕಾರವಿಲ್ಲದ ಶಿಕ್ಷಣ, ಸಮಾಜಕ್ಕೆ ಉಪಯೋಗವಾಗದ ಜ್ಞಾನ ಹಾಗೂ ಸಂಪತ್ತು ತೃಣಕ್ಕೆ ಸಮಾನ. ಜಾಗತೀಕರಣ ಹಾಗೂ ಪಾಶ್ಚಿಮಾತ್ಯ ಸಂಸ್ಕೃತಿಯ ದಾಳಿಯಿಂದ ಮಕ್ಕಳಲ್ಲಿ ನೈತಿಕ ಮೌಲ್ಯ ಕುಸಿಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಚಿಂತಕ ಉಮೇಶ ದುಬಲಗುಂಡೆ ಮಾತನಾಡಿ, ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆಯಲ್ಲಿ ದೇಸಿ ಸಂಸ್ಕೃತಿಯನ್ನು ಮರೆಯಬಾರದು ಎಂದು ಹೇಳಿದರು.

ಮುಖಂಡ ರಾಮಶೆಟ್ಟಿ ಪನ್ನಾಳೆ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಧನರಾಜ ಒಡೆಯರ್, ಮಾದಪ್ಪ ಜೀಗರ್ೆ, ಮಹಾಂತೇಶ ನಾಗಶೆಟ್ಟಿ, ಮುಖಂಡ ಶಿವಕುಮಾರ ಸಜ್ಜನಶೆಟ್ಟಿ, ಶಿವಶರಣಪ್ಪ ವಲ್ಲೆಪುರೆ, ಶಿವಾಜಿರಾವ ಪಾಟೀಲ್, ಸತೀಶ ಜೀರ್ಗೆ, ಚೇತನ ಕಪ್ಪಿಕೇರೆ, ಸಂಗೀತಾ ಶೇರಿಕಾರ, ಸೂರ್ಯಕಾಂತ ಬಿರಾದಾರ, ರಾಜಕುಮಾರ ಹಂಬಲಪುರೆ ಇತರರಿದ್ದರು.

ಮುಖ್ಯಗುರು ಲಕ್ಷ್ಮಿಕಾಂತ ಅಚ್ಚಿಗಾವೆ ಸ್ವಾಗತಿಸಿದರು. ನವನಾಥ ವಂದಿಸಿದರು. ಮಾದಪ್ಪ ಪಿಟ್ರೆ ನಿರೂಪಣೆ ಮಾಡಿದರು. ಯಾದವರಾವ ಮಹಾರಾಜ ಹೋಳಗೆ ಅವರಿಗೆ ವಿಶ್ವಭಾರತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.