ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ

ತಾಳಿಕೋಟೆ: ಪುರಸಭೆ ಸದಸ್ಯರ ಆಯ್ಕೆಗಾಗಿ ಮೇ 29 ರಂದು ನಡೆಯಲಿರುವ ಚುನಾವಣೆ ನಿಮಿತ್ತ ವಾರ್ಡ್ ನಂ.3 ರಲ್ಲಿ ಬಿಜೆಪಿ ಅಭ್ಯರ್ಥಿ ವಾಸುದೇವ ಹೆಬಸೂರ ಪರ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಮತದಾರರ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.

ನಂತರ ಶಾಸಕರು ಮಾತನಾಡಿ, ಪಟ್ಟಣದ ಅಭಿವೃದ್ಧಿಯಲ್ಲಿ ಸ್ಥಳೀಯ ಪುರಸಭೆಯ ಪಾತ್ರ ಪ್ರಮುಖವಾಗಿದೆ. ಸುವ್ಯವಸ್ಥಿತ ಆಡಳಿತಕ್ಕೆ ಮತದಾರರು ಬಿಜೆಪಿ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಬೇಕು. ತಾಳಿಕೋಟೆಯನ್ನು ಜಿಲ್ಲೆಯಲ್ಲಿಯೇ ಒಂದು ಮಾದರಿ ಪಟ್ಟಣವನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ವಾರ್ಡ್ ನಂ. 3 ರ ಅಭ್ಯರ್ಥಿ ವಾಸುದೇವ ಹೆಬಸೂರ ಅವರನ್ನು ಮತದಾರರು ಬೆಂಬಲಿಸಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ದೇಶದಲ್ಲಿ ಮೋದಿ ಅವರ ಅಲೆಗೆ ಕಾಂಗ್ರೆಸ್ ಧೂಳಿಪಟವಾಗಿದೆ. ಶೀಘ್ರ ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದರು.

ಅಭ್ಯರ್ಥಿ ವಾಸುದೇವ ಹೆಬಸೂರ, ಮುಖಂಡರಾದ ರಾಜು ಗುಂಡಕನಾಳ, ರಾಜು ಸೋಂಡೂರ, ಕಾಶಿನಾಥ ಮುರಾಳ, ರವಿ ತಾಳಪಲ್ಲೆ, ರಾಘವೇಂದ್ರ ಚವಾಣ್, ಪ್ರಕಾಶ ನಿಡಗುಂದಿ, ರಾಜು ಪತ್ತಾರ, ಮಂಜುನಾಥ ಶೆಟ್ಟಿ, ನಾರಾಯಣ ಸುಬೇದಾರ, ಬಾಬು ಕಾರ್ಜೋಳ, ಎಂ.ಆರ್. ಪಾಟೀಲ, ಶಂಕರಲಿಂಗ ಚಕ್ರಸಾಲಿ, ಎ.ಬಿ. ಬಿರಾದಾರ, ರಾಜಶೇಖರ ಹಿರೇಮಠ ಇತರರು ಇದ್ದರು.

Leave a Reply

Your email address will not be published. Required fields are marked *