Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

5 ಸಾವಿರ ಎಕರೆ ಜಮೀನು ಜಲಾವೃತ

Wednesday, 11.07.2018, 7:54 PM       No Comments

ತಾಳಗುಪ್ಪ: ಕಳೆದೊಂದು ವಾರದಿಂದ ಎಡಬಿಡದೆ ಸುರಿಯುತ್ತಿರುವ ಬಿರುಸಿನ ಮಳೆ ಬುಧವಾವೂ ಮುಂದುವರಿದಿದ್ದು, ಸುತ್ತಮುತ್ತಲಿನ ಪ್ರದೇಶಗಳು ಜಲಾವೃತವಾಗಿವೆ.

ತಾಳಗುಪ್ಪ ಹೋಬಳಿಯಲ್ಲಿ ಅಂದಾಜು 5 ಸಾವಿರ ಎಕರೆ ಭತ್ತದ ಗದ್ದೆಗಳಿಗೆ ನೆರೆ ಆವರಿಸಿದೆ. ಕನ್ನಹೊಳೆ ಹಾಗೂ ಕಣಸೆ ಹೊಳೆ ಸೇತುವೆಗೆ ನೀರು ತಾಗತ್ತಿದ್ದು ಯಾವುದೇ ಕ್ಷಣದಲ್ಲಿ ಸೇತುವೆಯ ಮೇಲೆ ನೀರು ಉಕ್ಕಬಹುದು. ಇದೇ ರೀತಿ ಮಳೆ ಮುಂದುವರಿದರೆ ಬೀಸನಗದ್ದೆ ದ್ವೀಪವಾಗುವ ಸಾಧ್ಯತೆ ಇದ್ದು, ಮುಂಜಾಗರೂಕತೆ ಕ್ರಮವಾಗಿ ತಾಲೂಕು ಆಡಳಿತ ದೋಣಿ ತಂದಿರಿಸಿಕೊಂಡಿದೆ.

ತಾಳಗುಪ್ಪ ಹೋಬಳಿಯಲ್ಲಿ ಕಳೆದ 84 ತಾಸಿನ ಅವಧಿಯಲ್ಲಿ 361 ಮಿಮೀ ಮಳೆಯಾಗಿದೆ. ಈ ವರ್ಷ ಜೂನ್, ಜುಲೈ ತಿಂಗಳಲ್ಲಿ 1217 ಮಿಮೀ ಮಳೆಯಾಗಿದ್ದು, ಕಳೆದ ವರ್ಷ ಈ ಅವಧಿಯಲ್ಲಿ 756 ಮಿಮೀ ಮಳೆ ಸುರಿದಿದೆ. ಈ ವರ್ಷ 461 ಮಿಮೀ ಹೆಚ್ಚು ಮಳೆ ಬಿದ್ದಿದೆ.

ನೆರೆ ಆವೃತ ಪ್ರದೇಶ: ಬೇಸಿಗೆಯಲ್ಲಿ ಸಣ್ಣ ಹರಿವಾಗಿ ಕಾಣುವ ಮಾವಿನಹೊಳೆ, ಕಣಸೆ ಹೊಳೆ, ಕನ್ನ ಹೊಳೆ, ವರದಾನದಿ ಮಳೆಗಾಲದಲ್ಲಿ ಅಪಾರ ಪ್ರಮಾಣದ ನೀರನ್ನು ತನ್ನ ಒಡಲಲ್ಲಿ ತುಂಬಿ ಹರಿಯುತ್ತವೆ. ಸತತ ಮಳೆಯಾದಾಗ ಹೊಳೆಯ ಪಾತ್ರ ಕಿರಿದಾಗಿ ನೀರು ದಡ ಜಮೀನುಗಳಿಗೆ ಉಕ್ಕುತ್ತದೆ. ನಾಲ್ಕೂ ಹೊಳೆಗಳ ಉಕ್ಕಿದ ನೀರು ಒಂದಕ್ಕೊಂದು ಸೇರಿ ಅಪಾರ ಪ್ರಮಾಣದ ಕೃಷಿ ಭೂಮಿಯನ್ನು ಮುಳುಗಿಸುತ್ತವೆ. ತಟ್ಟೆಗುಂಡಿ, ಯಲಕುಂದ್ಲಿ, ನೆಲ್ಲೂರು, ಸುರಗುಪ್ಪೆ, ಬರದಳ್ಳಿ, ಅತ್ತಿಸಾಲು, ಬೀಸನಗದ್ದೆ, ತಡಗಳಲೆ, ಸುಳ್ಳೂರು, ಹಾರೆಗೊಪ್ಪ, ಕೆಲುವೆ, ಮಂಡಗಳಲೆ, ಗಡೆಮನೆ ಮೊದಲಾದ ಹಲವು ಗ್ರಾಮಗಳ ಸಾವಿರಾರು ಎಕರೆ ಕೃಷಿ ಜಮೀನು ನೀರಿನಲ್ಲಿ ಮುಳುಗುತ್ತದೆ.

30-35 ವರ್ಷಗಳ ಹಿಂದೆ ಈ ಹಳ್ಳಿಗಳು ಮಳೆಗಾಲದಲ್ಲಿ ನೆರೆ ಆವರಿಸಿ ಹೊರಗಿನ ಸಂಪರ್ಕ ಕಳೆದುಕೊಳ್ಳುತ್ತಿದ್ದವು. ಕಾಗೋಡು ತಿಮ್ಮಪ್ಪನವರ ಅಧಿಕಾರಾವಧಿಯಲ್ಲಿ ಕನ್ನಹೊಳೆ, ಅತ್ತಿಸಾಲು, ಕಣಸೆ ಹೊಳೆ, ವರದಾ ಹೊಳೆ, ಹೊಂಕೇರಿ ಹೊಳೆಗಳಿಗೆ ಸೇತುವೆ ನಿರ್ವಣಗೊಂಡು ಸಂಪರ್ಕ ಸಾಧ್ಯವಾಗಿದೆ.

ಬೀಸನಗದ್ದೆ ದ್ವೀಪ: ನಾಲ್ಕು ಹೊಳೆಗಳು ಒಂದಕ್ಕೊಂದು ಬೆಸೆದು ಸೃಷ್ಟಿಸುವ ನೆರೆಯಲ್ಲಿ ಬೀಸನಗದ್ದೆ ದ್ವೀಪವಾಗುತ್ತದೆ. ಈ ಗ್ರಾಮದಲ್ಲಿ 26 ಮನೆಗಳಿವೆ. ತಡಗಳಲೆ, ಕೆಜಿ ಕೊಪ್ಪ ಗ್ರಾಮದ ಕೃಷಿ ಜಮೀನುಗಳಿವೆ. ಪ್ರತಿ ವರ್ಷ ಮಳೆಗಾಲದ ಕಾಯಂ ಸಮಸ್ಯೆ ಇದಾಗಿದ್ದು, ತಾಲೂಕು ಆಡಳಿತ ಕೆಲದಿನ ದೋಣಿ ಸಂಪರ್ಕ ಕಲ್ಪಿಸುವುದೂ, ಜನಪ್ರತಿನಿಧಿಗಳು ನೆರೆ ಸಮೀಕ್ಷೆಗೆ ಬರುವುದೂ ಮಾಮೂಲಿಯಾಗಿದೆ. ಈ ಹಿನ್ನೆಲೆಯಲ್ಲಿ ಕಾಗೋಡು ತಿಮ್ಮಪ್ಪ ಬೀಸನಗದ್ದೆಯನ್ನು ಹೊಳೆಯ ಈಚೆಗಿನ ಭಾಗಕ್ಕೆ ಸ್ಥಳಾಂತರಿಸುವ ಇರಾದೆ ವ್ಯಕ್ತಪಡಿಸಿದ್ದರೂ ಗ್ರಾಮಸ್ಥರು ಒಪ್ಪಿರಲಿಲ್ಲ. ಸೈದೂರು ಗ್ರಾಮ ಪಂಚಾಯಿತಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬೀಸನಗದ್ದೆಯಿಂದ ತಡಗಳಲೆ ದಡದವರೆಗೆ ಬಂಡು ಹೊಯ್ಯುವ ಕಾಮಗಾರಿ ಸ್ವಲ್ಪ ಮಟ್ಟಿಗೆ ನಡೆಸಿದ್ದು, ಇದರಿಂದ ಬೀಸನಗದ್ದೆ ಜಲಾವೃತವಾಗುವ ಸಾಧ್ಯತೆ ಕಡಿಮೆಯಾಗಿದೆ.

 

 

Leave a Reply

Your email address will not be published. Required fields are marked *

Back To Top