Friday, 16th November 2018  

Vijayavani

Breaking News

ಆಪರೇಷನ್ ಗುಹೆ ಯಶಸ್ವಿ

Wednesday, 11.07.2018, 3:04 AM       No Comments

ಎರಡು ವಾರಕ್ಕೂ ಹೆಚ್ಚು ಕಾಲ ಗುಹೆಯೊಳಗೆ ಸಿಲುಕಿದ್ದ ‘ವೈಲ್ಡ್ ಬೋರ್ ’ ಫುಟ್ಬಾಲ್ ತಂಡದ 12 ಬಾಲಕರು ಮತ್ತು ಒಬ್ಬ ತರಬೇತುದಾರನನ್ನು ಯಶಸ್ವಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಹೊರಕ್ಕೆ ಕರೆತರಲಾಗಿದೆ. 18 ದಿನಗಳಿಂದ ಗುಹೆಯೊಳಗೆ ಇದ್ದ ಮಕ್ಕಳು ಪ್ರಾಣಾಪಾಯವಿಲ್ಲದೆ ಹೊರಕ್ಕೆ ಬರಲಿ ಎಂದು ಪ್ರಾರ್ಥಿಸುತ್ತಿದ್ದ ಪಾಲಕರು ಮತ್ತು ಥಾಯ್ಲೆಂಡ್ ಜನತೆ ಸಂಭ್ರಮದಲ್ಲಿ ಮುಳುಗಿದ್ದಾರೆ. ಕಾರ್ಯಾಚರಣೆಯ ಕೊನೆಯ ದಿನವಾದ ಮಂಗಳವಾರ ಬೆಳಗ್ಗೆ 11 ಗಂಟೆಗೆ 19 ಡೈವರ್ಸ್ ಗುಹೆಯೊಳಗೆ ಪ್ರವೇಶಿಸಿದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ 9ನೇ ಬಾಲಕನನ್ನು ಗುಹೆಯಿಂದ ಹೊರಕ್ಕೆ ಕರೆತರಲಾಯಿತು.

ವಿದ್ಯಮಾನದ ಹಾದಿ

# ಜೂ.23 – ಬಾಲಕನೊಬ್ಬನ ಹುಟ್ಟುಹಬ್ಬ ಆಚರಿಸಲು ಉತ್ತರ ಥಾಯ್ಲೆಂಡ್​ನ ಶಿಯಾಂಗ್ ರೈ ಪ್ರಾಂತ್ಯದ ಥಾಮ್ ಲುಯಾಂಗ್ ಗುಹೆ ಪ್ರವೇಶಿಸಿದ್ದ 11ರಿಂದ 16ವರ್ಷದ 12 ಬಾಲಕರು , 25 ವರ್ಷದ ಫುಟ್ಬಾಲ್ ತರಬೇತುದಾರ. ಮಳೆ ತೀವ್ರಗೊಂಡು ಗುಹೆಯೊಳಗೆ ನೀರು ತುಂಬಿದ ಕಾರಣ ಅಲ್ಲೇ ಸಿಲುಕಿದ ತಂಡ. ಪ್ರಾಣ ಉಳಿಸಿಕೊಳ್ಳಲು 4.5 ಕಿ.ಮೀ. ಒಳಕ್ಕೆ ಸಾಗಿದ ತಂಡ.

# ಜೂ.24 – ಪಾಲಕರಿಂದ ಪೊಲೀಸರಿಗೆ ದೂರು. ಪೊಲೀಸ್ ತನಿಖೆ ವೇಳೆ ಗುಹೆ ಬಳಿ ಬಾಲಕರ ಹೆಜ್ಜೆಗುರುತು ಪತ್ತೆ.

#  ಜೂ. 25 – ಥಾಯ್ ನೇವಿ ಸೀಲ್ಸ್ ತಂಡದಿಂದ ಗುಹೆ ಪ್ರವೇಶ. ಬಾಲಕರಿಗಾಗಿ ಶೋಧ.

# ಜೂ. 26 – ಗುಹೆಯೊಳಗೆ ಹಲವು ಕಿ.ಮೀ. ಬಳಿಕ ಬಾಲಕರು ಕುಳಿತು ಕಾಲಕಳೆದ ಕುರುಹು ಪತ್ತೆ.

# ಜೂ. 27 – ಬ್ರಿಟನ್ ಮೂಲದ ಡೈವಿಂಗ್ ತಜ್ಞರು, 30 ಅಮೆರಿಕ ಮಿಲಿಟರಿ ಯೋಧರು ಗುಹೆಗೆ ಕಾರ್ಯಾಚರಣೆಗಾಗಿ ಆಗಮನ. ಭಾರಿ ಮಳೆ ಕಾರಣ ನಡೆಯದ ಕಾರ್ಯಾಚರಣೆ

? ಜೂ. 29 – ಬಾಲಕರ ಸಂಬಂಧಿಕರು, ಪಾಲಕರಿಂದ ಗುಹೆಯ ಹೊರಗೆ ಪ್ರಾರ್ಥನೆ, ಪೂಜೆ ಸಲ್ಲಿಕೆ. ಅಲ್ಲೇ ವಾಸ್ತವ್ಯ.

# ಜೂ.30 – ಮಳೆ ಪ್ರಮಾಣದಲ್ಲಿ ಇಳಿಕೆ. ಗುಹೆಯೊಳಗೆ ಶೋಧ ಮುಂದುವರಿಕೆ

# ಜು. 1 – ಗುಹೆಯಲ್ಲಿ ತಾತ್ಕಾಲಿಕ ಕಾರ್ಯಾಚರಣೆ ನೆಲೆ ನಿರ್ವಣ, ಆಮ್ಲಜನಕದ ಸಿಲಿಂಡರ್ ದಾಸ್ತಾನು

# ಜು. 2 – ಸಂಜೆ ವೇಳೆಗೆ ಡೈವರ್ಸ್​ಗೆ ಬಂಡೆಯೊಂದರ ಮೇಲೆ ಬಾಲಕರು, ಕೋಚ್ ಪತ್ತೆ.

# ಜು. 3 – ಪ್ರವೇಶ ದ್ವಾರಕ್ಕೆ ಬಂದ ರಕ್ಷಣಾ ತಂಡ ಆಹಾರ, ಔಷಧಗಳು, ಕುಟುಂಬದವರ ಫೋಟೋಗಳನ್ನು ಹೊತ್ತು ಸಾಗಿ ಬಾಲಕರಿಗೆ ಪೂರೈಸಿದೆ.

# ಜು. 4 – ಡೈವಿಂಗ್ ಕವಚ, ಉಸಿರಾಟ ವ್ಯವಸ್ಥೆ ಬಗ್ಗೆ ಬಾಲಕರಿಗೆ ತರಬೇತಿ. ಮಳೆ ನೀರು ಪಂಪ್ ಮೂಲಕ ನಿರಂತರವಾಗಿ ಹೊರಹಾಕಿದ ರಕ್ಷಣಾ ತಂಡ.

# ಜು. 5 – ಗುಹೆಗೆ ಪರ್ಯಾಯ ಮಾರ್ಗದ ಪತ್ತೆಗೆ ಗುಹೆ ಮೇಲಿನ ಬೆಟ್ಟವನ್ನು ಶೋಧಿಸಿದ ರಕ್ಷಣಾ ಪಡೆ.

# ಜು. 6 – ಥಾಯ್ ನೇವಿ ಸೀಲ್ಸ್​ನ ಡೈವರ್ ಸಮನ್ ಕುನಾನ್ ಉಸಿರುಗಟ್ಟಿ ನೀರು ತುಂಬಿದ ಗುಹೆಯೊಳಗೆ ಸಾವು.

# ಜು. 7 – ರಕ್ಷಣಾ ಕಾರ್ಯಾಚರಣೆ ತಂಡದ ಮುಖ್ಯಸ್ಥ ನರೊಂಗ್​ಸಾಕ್ ಒಸೊಟ್ಟಾನಕೊರ್ನ್​ರಿಂದ ಬಾಲಕರು ಈಜಿಕೊಂಡು ಗುಹೆಯ ಹೊರಗೆ ಬರುವ ಬಗ್ಗೆ ಅನುಮಾನ ವ್ಯಕ್ತ. ಗುಹೆಯ ಬೇರೆ ಕಡೆಗಳಲ್ಲಿ 100 ತೂತುಗಳನ್ನು ಕೊರೆದು ಗಾಳಿಯ ಪ್ರವೇಶ ಮತ್ತು ಮಳೆನೀರು ಹೊರಬರುವಂತೆ ವ್ಯವಸ್ಥೆ.

# ಜುಲೈ 8 – ನಿರ್ಣಾಯಕ ದಿನ ಎಂದು ತೀರ್ವನಿಸಿ 13 ವಿಶ್ವದರ್ಜೆ ಮಾನ್ಯತೆ ಪಡೆದ ವಿದೇಶಿ ಡೈವರ್ಸ್ ಮತ್ತು ಥಾಯ್ ನೇವಿ ಸೀಲ್ಸ್ ಪಡೆಯಿಂದ ಬಾಲಕರಿಗೆ ಆಮ್ಲಜನಕ ಮಾಸ್ಕ್ ತೊಡಿಸಿ ಗುಹೆಯಿಂದ ಹೊರಕ್ಕೆ ಕರೆತರುವ ಯತ್ನ ಆರಂಭ. ರಾತ್ರಿ 9ರ ವೇಳೆಗೆ ನಾಲ್ಕು ಬಾಲಕರು ಸುರಕ್ಷಿತವಾಗಿ ಹೊರಕ್ಕೆ.

# ಜು. 9 – ಎರಡನೇ ದಿನದ ಕಾರ್ಯಾಚರಣೆ ಆರಂಭ. ಸಂಜೆ ವೇಳೆಗೆ ಉಳಿದ ನಾಲ್ವರು ಬಾಲಕರು ಸುರಕ್ಷಿತವಾಗಿ ಹೊರಕ್ಕೆ. ಆಸ್ಪತ್ರೆಗೆ ಅವರನ್ನು ದಾಖಲಿಸಿ ಪ್ರಾಥಮಿಕ ಚಿಕಿತ್ಸೆ.

# ಜು. 10 – ಮೂರನೇ ಹಾಗೂ ಅಂತಿಮ ದಿನದ ಕಾರ್ಯಾಚರಣೆಯಲ್ಲಿ ತಂಡದ ಕೊನೆಯ ನಾಲ್ವರು ಬಾಲಕರು ಮತ್ತು ಕೋಚ್​ನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತಂದ ಡೈವರ್ಸ್.

Leave a Reply

Your email address will not be published. Required fields are marked *

Back To Top