Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಜವಳಿ ಜಂಜಡ

Monday, 30.04.2018, 3:07 AM       No Comments

ಜಾಗತಿಕ ಜವಳಿ ಕ್ಷೇತ್ರದಲ್ಲಿ ಭಾರತದ್ದು  6.69 ಲಕ್ಷ ಕೋಟಿ ರೂಪಾಯಿ ವಹಿವಾಟಿನ ಉದ್ಯಮ. ಜವಳಿ ಮತ್ತು ಉಡುಪು ರಫ್ತುದಾರ ರಾಷ್ಟ್ರಗಳ ಪೈಕಿ ಭಾರತಕ್ಕೆ ಪ್ರಪಂಚದಲ್ಲಿ ಎರಡನೇ ಸ್ಥಾನ. ಹಾಗೆಯೇ ವಿಶ್ವದ ಜವಳಿ ಉದ್ಯಮದಲ್ಲಿ ಭಾರತದ ಪಾಲು ಶೇ. 5. ನಮ್ಮ ದೇಶದ ರಫ್ತು ವಹಿವಾಟಿನಲ್ಲಿ ಇದರ ಪಾಲು ಶೇ. 12. ಇಷ್ಟಾಗ್ಯೂ, ಫೆಬ್ರವರಿ ತಿಂಗಳ ಜವಳಿ ರಫ್ತು ಮತ್ತು ಉತ್ಪಾದನಾ ದತ್ತಾಂಶಗಳು ಕಳವಳಕಾರಿಯಾಗಿದ್ದು, ಜವಳಿ ಕ್ಷೇತ್ರ ಜಂಜಡಕ್ಕೆ ಸಿಲುಕಿರುವುದು ಸ್ಪಷ್ಟ. ಈ ಆತಂಕದ ಬೆಳವಣಿಗೆಯ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.

| ಉಮೇಶ್​ಕುಮಾರ್ ಶಿಮ್ಲಡ್ಕ

ಭಾರತದ ಅರ್ಥ ವ್ಯವಸ್ಥೆಯಲ್ಲಿ ಉದ್ಯೋಗ ಸೃಜನೆ ವಿಷಯದಲ್ಲಿ ಕೃಷಿ ಕ್ಷೇತ್ರದ ನಂತರದ ಸ್ಥಾನದಲ್ಲಿ ಇರುವಂಥ ಕ್ಷೇತ್ರ ಜವಳಿ. ಈ ಕ್ಷೇತ್ರ 5.2 ಕೋಟಿ ಜನರಿಗೆ ನೇರ ಉದ್ಯೋಗ ಮತ್ತು 6.9 ಕೋಟಿ ಜನರಿಗೆ ಪರೋಕ್ಷ ಉದ್ಯೋಗ ಕಲ್ಪಿಸಿದೆ. ಇದರಲ್ಲಿ ಉಡುಪು ತಯಾರಿಕಾ ಉದ್ಯಮವೊಂದರಲ್ಲೇ 1.2 ಕೋಟಿಗೂ ಅಧಿಕ ಉದ್ಯೋಗಾವಕಾಶ ಲಭ್ಯವಿದೆ. ಹಾಗಾಗಿ ಈ ಕ್ಷೇತ್ರದ ಪ್ರತಿ ಧನಾತ್ಮಕ ಹಾಗೂ ಋಣಾತ್ಮಕ ಬೆಳವಣಿಗೆ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ.

ನಮ್ಮ ದೇಶದ ಜವಳಿ ಮತ್ತು ಉಡುಪು ಉದ್ಯಮದ ಮಾರುಕಟ್ಟೆ ಮೌಲ್ಯ 2016ರ ಲೆಕ್ಕಾಚಾರದ ಪ್ರಕಾರ -ಠಿ; 5.68 ಲಕ್ಷ ಕೋಟಿಯಾಗಿದ್ದು ಈ ಪೈಕಿ ಉಡುಪು ಉದ್ಯಮದ ಮಾರುಕಟ್ಟೆ ಮೌಲ್ಯವೇ (74%) -4.21 ಲಕ್ಷ ಕೋಟಿ ರೂ.ಉಳಿದಂತೆ ಜವಳಿ ತಾಂತ್ರಿಕ ವಿಭಾಗದ್ದು 19%, ಜವಳಿ ಗೃಹೋದ್ಯಮದ್ದು 7%.

ಹಾಗೆಯೇ, ಈ ಉದ್ಯಮದ ರಫ್ತು 2016ರ ಲೆಕ್ಕ ಪ್ರಕಾರ -ಠಿ;2.47 ಲಕ್ಷ ಕೋಟಿ. 2005ರಿಂದೀಚೆಗಿನ ಸರಾಸರಿ ರಫ್ತು ಬೆಳವಣಿಗೆ ದರ ಶೇಕಡ 7ರಷ್ಟು ಏರಿಕೆ ಕಂಡಿದೆ. ವಿಭಾಗವಾರು ಹೇಳುವುದಾದರೆ ಉಡುಪು ಉದ್ಯಮದ ರಫ್ತು ಪ್ರಮಾಣ ಶೇಕಡ 48, ಜವಳಿ ಗೃಹೋದ್ಯಮ ಶೇ. 14, ಫ್ಯಾಬ್ರಿಕ್ ಶೇ.12, ನೂಲು ಹುರಿ ಶೇ. 11. ಆದಾಗ್ಯೂ, ಈ ಹೆಮ್ಮೆಯ ವಿಚಾರಗಳೆಲ್ಲ ಈಗ ಇತಿಹಾಸದ ಪುಟ ಸೇರುವ ಆತಂಕ ಉದ್ಯಮ ವಲಯದಲ್ಲಿ ವ್ಯಕ್ತವಾಗಿದೆ. ಇದಕ್ಕೆ ಇತ್ತೀಚಿನ ಎರಡು ವರ್ಷಗಳ ಬೆಳವಣಿಗೆ ಕಾರಣ. 130 ಕೋಟಿ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ವಸ್ತ್ರೆೊದ್ಯಮಕ್ಕೆ ಬಹಳ ಬೇಡಿಕೆ ಇದೆಯಾದರೂ, ಜಾಗತಿಕ ರಫ್ತುದಾರ ರಾಷ್ಟ್ರಗಳ ಪೈಕಿ ಭಾರತ ಎರಡನೇ ಸ್ಥಾನ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಕಳೆದ ಹಣಕಾಸು ವರ್ಷದಲ್ಲಿ -ಠಿ; 3 ಲಕ್ಷ ಕೋಟಿ ಮೌಲ್ಯದ ಜವಳಿ ಮತ್ತು ಉಡುಪು ರಫ್ತು ಗುರಿ ಹಾಕಲಾಗಿತ್ತಾದರೂ, ಅದು ಈಡೇರಿಲ್ಲ. ಕಾನ್ಪೆಡರೇಷನ್ ಆಫ್ ಇಂಡಿಯನ್ ಟೆಕ್ಸ್ ಟೈಲ್ ಇಂಡಸ್ಟ್ರಿ (ಸಿಐಟಿಐ) ಮಾರ್ಚ್(2018) ತಿಂಗಳ ಜವಳಿ ಮತ್ತು ಉಡುಪು ಉದ್ಯಮದ ರಫ್ತು ವಿಶ್ಲೇಷಣೆ ದತ್ತಾಂಶವನ್ನು ಪ್ರಕಟಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಈ ಅಧಿಕೃತ ರಫ್ತು ಅಂಕಿಅಂಶ ಇದನ್ನು ದೃಢೀಕರಿಸಿದೆ. ಈ ಕಳವಳಕಾರಿ ವಿಷಯ ದೇಶದಲ್ಲಿನ ಅತ್ಯಾಚಾರ ಪ್ರಕರಣ, ಎಟಿಎಂಗಳಲ್ಲಿ ನಗದು ಲಭ್ಯವಿಲ್ಲದಿರುವುದು ಇಂತಹ ವಿಷಯಗಳ ನಡುವೆ ಕಳೆದು ಹೋಗಿರುವುದು ಕೂಡ ಅಲ್ಲಗಳೆಯವಂತಿಲ್ಲ.

ಇದಕ್ಕೂ ಹಿಂದಿನ ದತ್ತಾಂಶಗಳನ್ನು ಗಮನಿಸಿದರೆ ಉಡುಪು ರಫ್ತು ಪ್ರಮಾಣ ಫೆಬ್ರವರಿ (2018)ಯಲ್ಲಿ -ಠಿ;9,616 ಕೋಟಿ. ವರ್ಷದ ಹಿಂದಿನ ಫೆಬ್ರವರಿ ತಿಂಗಳಿಗೆ ಹೋಲಿಸಿದರೆ ಇದು ಶೇ. 10.25 ಕಡಿಮೆ ಇದೆ. ಅಷ್ಟೇ ಅಲ್ಲ, 2017-18ರ (ಏಪ್ರಿಲ್-ಫೆಬ್ರವರಿ) ಲೆಕ್ಕ ಪ್ರಕಾರ ಉಡುಪು ಉತ್ಪಾದನೆ ಶೇ. 10.4ರಷ್ಟು ಇಳಿಕೆಯಾಗಿದ್ದು, ರಫ್ತು ಪ್ರಮಾಣ ಶೇ. 4 ಕಡಿಮೆಯಾಗಿದೆ. ಸತತ ಆರು ತಿಂಗಳ ಅವಧಿಯಲ್ಲಿ ಜವಳಿ ಮತ್ತು ಉಡುಪು ರಫ್ತು ಪ್ರಮಾಣ ಏರಿಳಿತ ದಾಖಲಿಸಿದ್ದರೂ, ಋಣಾತ್ಮಕ ಬೆಳವಣಿಗೆಯನ್ನೇ ಹೆಚ್ಚು ಕಂಡಿದೆ. ಇದರಿಂದ ಕೂಡಲೇ ಮುಕ್ತಿ ಕಾಣುವ ಲಕ್ಷಣಗಳು ಇದುವರೆಗೂ ಗೋಚರವಾಗಿಲ್ಲ.

ಗಾರ್ಮೆಂಟ್ಸ್​ ಸೆಕ್ಟರ್​

ದೇಶದ ಅತಿದೊಡ್ಡ ಕ್ಷೇತ್ರ ಇದು. ಆದಾಗ್ಯೂ, ಇದರಲ್ಲಿ ಶೇ.90 ಭಾಗ ಚಿಕ್ಕ ಚಿಕ್ಕ ಗಾರ್ವೆಂಟ್ಸ್ ಉತ್ಪಾದನಾ ಘಟಕಗಳದ್ದೇ ಪಾರಮ್ಯ. ಇವು ನೋಂದಣಿಗೊಳಪಟ್ಟವಲ್ಲ. ಶೇ.78 ಘಟಕಗಳಲ್ಲಿರುವುದು 50ಕ್ಕಿಂತಲೂ ಕಡಿಮೆ ಕೆಲಸಗಾರರು. ಇನ್ನು ಈ ಕ್ಷೇತ್ರದ 10 ಪಾಲು ದೊಡ್ಡ ಘಟಕಗಳದ್ದಾಗಿದ್ದು, ಅಲ್ಲಿ 500ಕ್ಕೂ ಹೆಚ್ಚು ಕೆಲಸಗಾರರಿದ್ದಾರೆ. ಹಾಗಾಗಿ, ಸಣ್ಣ ಘಟಕಗಳ ಮಾಲೀಕರಿಗೆ ತಮ್ಮದೇ ಇತಿಮಿತಿಗಳಿವೆ. ಬಂಡವಾಳ ಹೂಡಿಕೆ, ತಂತ್ರಜ್ಞಾನ ಅಳವಡಿಕೆ ಮುಂತಾದ ವಿಷಯಗಳಲ್ಲಿ ಹೆಚ್ಚಿನ ಸಾಹಸವೇನೂ ಕಾಣದು.

ಕೇಂದ್ರ ಸರ್ಕಾರದ ಟೆಕ್ಸ್​ಟೈಲ್ ಯೋಜನೆಗಳು

 1. ಅಮೆಂಡೆಡ್ ಟೆಕ್ನಾಲಜಿ ಅಪ್​ಗ್ರೆಡೇಷನ್ ಫಂಡ್ ಸ್ಕೀಮ್​ಎಟಿಯುಎಫ್​ಎಸ್)
 2. ಸ್ಕೀಮ್ ಫಾರ್ ಇಂಟೆಗ್ರೇಟೆಡ್
 3. ಟೆಕ್ಸ್​ಟೈಲ್ ಪಾರ್ಕ್ಸ್(ಎಸ್​ಐಟಿಪಿ)
 4. ಇಂಟೆಗ್ರೇಟೆಡ್ ಸ್ಕಿಲ್ ಡೆವಲಪ್​ವೆುಂಟ್ ಸ್ಕೀಮ್​ಐಎಸ್​ಡಿಎಸ್)
 5. ಇಂಟೆಗ್ರೇಟೆಡ್ ಪ್ರೊಸೆಸಿಂಗ್ ಡೆವಲಪ್​ವೆುಂಟ್ ಸ್ಕೀಮ್​ಐಪಿಡಿಎಸ್)
 6. ಮರ್ಕೆಂಡೈಸ್ ಎಕ್ಸ್​ಪೋರ್ಟ್ ಫ್ರಂ ಇಂಡಿಯಾ ಸ್ಕೀಮ್​ಎಂಇಐಎಸ್)
 7. ಡ್ಯೂಟಿ ಡ್ರಾಬ್ಯಾಕ್(ತೆರಿಗೆ ವಿನಾಯಿತಿ)
 8. ರಿಬೇಟ್ ಆನ್ ಸ್ಟೇಟ್ ಲೆವೀಸ್(ಆರ್​ಒಎಸ್​ಎಲ್) ಸ್ಕೀಮ್
 9. ಮಾರ್ಕೆಟ್ ಡೆವಲಪ್​ವೆುಂಟ್ ಅಸಿಸ್ಟೆನ್ಸ್ (ಎಂಡಿಎ)
 10. ಮಾರ್ಕೆಟ್ ಆಕ್ಸೆಸ್ ಇನಿಷಿಯೇಟಿವ್(ಎಂಎಐ)

ಸಮಸ್ಯೆ ಮತ್ತು ಸವಾಲು (ಸಿಐಟಿಐ ಮಾಹಿತಿ ಪ್ರಕಾರ )

ಉದ್ಯಮದ ವಿನ್ಯಾಸ ಮತ್ತು ಉತ್ಪಾದನಾ ಕ್ರಮದ ಲೋಪ: ಚೀನಾ, ಬಾಂಗ್ಲಾದೇಶ ಮತ್ತು ಇತರೆ ಜವಳಿ ಮತ್ತು ಉಡುಪು ರಫ್ತುದಾರ ರಾಷ್ಟ್ರಗಳಲ್ಲಿ ಬೃಹತ್ ಘಟಕಗಳಲ್ಲಿ ಹೆಚ್ಚಿನ ಉತ್ಪಾದನೆಯಾಗುತ್ತಿದೆ. ಭಾರತದಲ್ಲಿ ಹಾಗಲ್ಲ, ಬಹುಪಾಲು ಸಣ್ಣ ಘಟಕಗಳಲ್ಲೇ ಉತ್ಪಾದನೆ. ಹಾಗಾಗಿ ಇತರೆ ರಾಷ್ಟ್ರಗಳ ಜತೆಗೆ ಸ್ಪರ್ಧೆಗೆ ಇಳಿಯುವಲ್ಲಿ ಹಿನ್ನಡೆಯಾಗುತ್ತಿದೆ.

ಗರಿಷ್ಠ ಮಟ್ಟದ ಬಂಡವಾಳ ವೆಚ್ಚ: ಜಗತ್ತಿನ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ವಾಣಿಜ್ಯ ಬ್ಯಾಂಕುಗಳು ನೀಡುವ ಸಾಲಕ್ಕೆ ಹೆಚ್ಚಿನ ಬಡ್ಡಿ ಪಾವತಿಸಬೇಕು. ಚೀನಾದಲ್ಲಿ 5-6%, ವಿಯೆಟ್ನಾಂನಲ್ಲಿ 6-7% ಬಡ್ಡಿದರದಲ್ಲಿ ಸಾಲ ಲಭ್ಯವಾದರೆ, ಭಾರತದಲ್ಲಿ ಈ ಪ್ರಮಾಣ ಶೇ.11-12%.

ಮುಕ್ತ ಮಾರುಕಟ್ಟೆ ಒಪ್ಪಂದದ ಕೊರತೆ: ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಟರ್ಕಿಗಳು ತಮ್ಮದೇ ಆದ ಮಾರುಕಟ್ಟೆ ಕಂಡುಕೊಂಡಿವೆ. ವಿಯೆಟ್ನಾಂ ಕೂಡ ಯುರೋಪ್ ಒಕ್ಕೂಟದ ಜತೆಗೆ ವಾಣಿಜ್ಯ ಒಪ್ಪಂದ ಮಾಡಿಕೊಂಡು ಶೀಘ್ರದಲ್ಲೇ ಜವಳಿ, ಉಡುಪು ಉತ್ಪನ್ನಗಳನ್ನು ರವಾನಿಸಲಿದೆ. ಜವಳಿ ಮತ್ತು ಉಡುಪುಗಳ ಗ್ರಾಹಕ ಬೇಡಿಕೆಯ ದೊಡ್ಡ ಮಾರುಕಟ್ಟೆ ಹೊಂದಿರುವ ದೇಶಗಳ ಜತೆಗೆ ಭಾರತ ಮಾತ್ರ ಇನ್ನೂ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ.

ಕಚ್ಚಾ ವಸ್ತು ಕೊರತೆ: ಜಾಗತಿಕ ಹತ್ತಿ ಉತ್ಪಾದನೆಯಲ್ಲಿ ಭಾರತ ದೊಡ್ಡ ಪಾಲುದಾರ ರಾಷ್ಟ್ರವಾಗಿ ಶೇಕಡ 25 ಪಾಲು ಹೊಂದಿದೆ. ಹಾಗೆಯೇ ಹತ್ತಿ ಬೆಳೆಯುವ ಪ್ರದೇಶದ ಪ್ರಮಾಣದಲ್ಲೂ ಜಾಗತಿಕ ಲೆಕ್ಕಾಚಾರ ನೋಡಿದರೆ ಭಾರತದ್ದು ಶೇಕಡ 43 ಪಾಲು. ಆದಾಗ್ಯೂ, ಇತರೆ ದೇಶಗಳಿಗೆ ಹೋಲಿಸಿದರೆ ಇಳುವರಿ ಕಡಿಮೆ. ಜಾಗತಿಕ ಇಳುವರಿ ಸರಾಸರಿ ಹೆಕ್ಟೇರ್​ಗೆ 603 ಕಿಲೋ ಇದ್ದರೆ, ಭಾರತದಲ್ಲಿ ಇದು 550 ಕಿಲೋ ಮಾತ್ರ.

ಕೌಶಲಯುತ ಕಾರ್ವಿುಕರ ಕೊರತೆ: ಜಾಗತಿಕ ಮಟ್ಟದ ಸ್ಪರ್ಧೆಗೆ ಅಣಿಯಾಗಬೇಕಾಗಲು ಪೂರಕ ಕೌಶಲ ಕಾರ್ವಿುಕರ ಕೊರತೆ ಇದೆ. ಪ್ರಸ್ತುತ, ಕೌಶಲಯುತ ಕಾರ್ವಿುಕರ ತಯಾರಿಗೆ ಬೇಕಾದ ಶಿಕ್ಷಣ ಮತ್ತು ತರಬೇತಿಗೆ ಪೂರಕ ಮೂಲಸೌಕರ್ಯ ಒದಗಿಸುವ ಕೆಲಸವೇ ಆಗಿಲ್ಲ. ಈ ನಿಟ್ಟಿನಲ್ಲಿ ಬಂಡವಾಳ ಹೂಡಿಕೆಯೂ ಆಗುತ್ತಿಲ್ಲ.

ಆಂಟಿ ಡಂಪಿಂಗ್ ಡ್ಯೂಟಿ: ಮ್ಯಾನ್ ಮೇಡ್ ಫೈಬರ್(ಎಂಎಂಎಫ್) ಜವಳಿ, ಉಡುಪು ಉದ್ಯಮ ಕ್ಷೇತ್ರ ಉತ್ಪನ್ನಗಳನ್ನು ಅಮೆರಿಕದಂತಹ ವಿದೇಶಗಳಿಗೆ ರಫ್ತು ಮಾಡುವಾಗ ಅಲ್ಲಿ ಹೆಚ್ಚುವರಿ ಸುಂಕದ ಹೊರೆಯನ್ನು ಎದುರಿಸಬೇಕಾಗುತ್ತಿದೆ.

ಋಣಾತ್ಮಕ ಬೆಳವಣಿಗೆಗೆ ಕಾರಣ

ಕ್ಷೇತ್ರದ ಋಣಾತ್ಮಕ ಬೆಳವಣಿಗೆಗೆ ಅನೇಕ ಕಾರಣಗಳನ್ನು ಗುರುತಿಸಬಹುದು. ಅವುಗಳ ಪೈಕಿ ಇತ್ತೀಚಿನ ಅನಾಣ್ಯೀಕರಣ, ಜಿಎಸ್​ಟಿ, ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ನೇರ ಪರಿಣಾಮ ಬೀರಿರುವಂಥವು. ಉದಾಹರಣೆಗೆ ಒಬ್ಬ ರಫ್ತುದಾರ ಕಳೆದ ಏಪ್ರಿಲ್​ನಲ್ಲಿ ಒಂದು ಉತ್ಪನ್ನವನ್ನು 100 ರೂಪಾಯಿಗೆ ಖರೀದಿಸುವುದಾಗಿ ಒಪ್ಪಿಕೊಂಡಿದ್ದ ಎಂದು ಊಹಿಸಿಕೊಳ್ಳಿ. ಈ ಏಪ್ರಿಲ್​ಗಾಗಲೇ ಆತನ ಖರೀದಿದಾರನ ಪಾಲಿಗೆ ಆ ಉತ್ಪನ್ನ ಶೇ. 6ಕ್ಕಿಂತಲೂ ಹೆಚ್ಚು ದುಬಾರಿಯಾಗಿರುತ್ತದೆ. ಇದು ಲಾಭಾಂಶದ ಮೇಲೆ ಹೊಡೆತ ಕೊಡುತ್ತದೆ. ಪರಿಣಾಮ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೂಡ ಭಾರತ ಹಿಂದುಳಿಯತೊಡಗಿದೆ. ಇದರ ಚಿತ್ರಣ ಕೇಂದ್ರ ಸರ್ಕಾರ ಸಂಸತ್​ನಲ್ಲಿ ಮಂಡಿಸಿದ 2016-17ರ ಆರ್ಥಿಕ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

ಕರ್ನಾಟಕ ಸರ್ಕಾರದ ಯೋಜನೆಗಳು

1) ಉದ್ಯಮ ಬಂಡವಾಳ ಹೂಡಿಕೆಗೆ ವಿವಿಧ ಸ್ತರಗಳ ಬಂಡವಾಳ ಸಹಾಯಧನ ಯೋಜನೆ 2) ಇಎಸ್​ಐ/ಇಪಿಎಫ್ ಸಬ್ಸಿಡಿ 3)ಉದ್ಯಮ ಸ್ತರಕ್ಕೆ ಅನುಗುಣವಾಗಿ ಮುದ್ರಾಂಕ ಶುಲ್ಕ ವಿನಾಯಿತಿ 4)ಐದು ವರ್ಷಕ್ಕೆ ಅನ್ವಯವಾಗುವ ವಿದ್ಯುತ್ ಸಬ್ಸಿಡಿ 5)ಇಂಡಸ್ಟ್ರಿಯಲ್ ಪಾರ್ಕ್/ಕ್ಲಸ್ಟರ್ ಅಭಿವೃದ್ಧಿ ಯೋಜನೆ

ಗುರಿ ಸಾಧನೆಗೆ ಅಗತ್ಯ ಬೆಂಬಲ

ಜಾಗತಿಕ ಮಾರುಕಟ್ಟೆಯಲ್ಲಿ ಪಾರಮ್ಯ ಮೆರೆಯುವ ಗುರಿ ಸಾಧನೆ ಮಾಡಬೇಕಾದರೆ ಸರ್ಕಾರದ ಕಡೆಯಿಂದ ನೀತಿ, ನಿಯಮಗಳ ಬೆಂಬಲವೂ ಅವಶ್ಯಕವಾಗಿ ಬೇಕಾಗುತ್ತದೆ ಎಂಬುದು ಇತ್ತೀಚೆಗೆ ಮುಂಬೈನಲ್ಲಿ ನಡೆದ 9ನೇ ಏಷ್ಯನ್ ಟೆಕ್ಸ್​ಟೈಲ್ ಕಾನ್ಪರೆನ್ಸ್ ನಲ್ಲಿ ವ್ಯಕ್ತವಾದ ಅಭಿಪ್ರಾಯ. ಇದನ್ನು ಸಹ ಸಿಐಟಿಐ ಮಾರ್ಚ್ ತಿಂಗಳ ನಿಯತಕಾಲಿಕೆಯಲ್ಲಿ ಪ್ರಕಟಿಸಿದೆ. ಆ ಆರು ಅಂಶಗಳು ಇಂತಿವೆ-

 1. ಜವಳಿ ಮತ್ತು ಉಡುಪು ಉತ್ಪಾದನೆಗೆ ಸಂಬಂಧಿಸಿ ಸಂಶೋಧನೆ ಮತ್ತು ಅಭಿವೃದ್ಧಿಯ ಬೆಂಬಲ.
 2. ಉತ್ಪನ್ನಗಳ ಗುಣಮಟ್ಟ ಮತ್ತು ಉತ್ಪಾದಕತೆ ಹೆಚ್ಚಿಸುವುದಕ್ಕೆ ಅಗತ್ಯ ಯೋಜನೆ ಬೇಕಾಗಿದ್ದು, ಇದಕ್ಕಾಗಿ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ಮತ್ತು ನ್ಯಾಷನಲ್ ಪ್ರೊಡಕ್ಟಿವಿಟಿ ಕೌನ್ಸಿಲ್​ಗಳ ನೆರವನ್ನು ಸರ್ಕಾರ ಪಡೆಯಬಹುದು.
 3. ಟೆಕ್ಸ್​ಟೈಲ್ ಸೆಕ್ಟರ್ ಅಥವಾ ಜವಳಿ ಕ್ಷೇತ್ರಕ್ಕೂ ವಿದೇಶಿ ನೇರ ಹೂಡಿಕೆ (ಎಫ್​ಡಿಐ) ಆಕರ್ಷಿಸುವುದು.
 4. ಉತ್ತಮ ಗುಣಮಟ್ಟದ ಉತ್ಪಾದಕತೆಗಾಗಿ ಕೌಶಲಯುತ ಕಾರ್ವಿುಕರ ತಯಾರಿಗೆ ಅಗತ್ಯ ತರಬೇತಿ ಸಹಕಾರ ಒದಗಿಸುವುದು.
 5. ಬೃಹತ್ ಪ್ರಮಾಣದ ಹೂಡಿಕೆ ಆಕರ್ಷಿಸಲು ಸರ್ಕಾರ ಸೂಕ್ತ ಯೋಜನೆ ರೂಪಿಸಬೇಕು.
 6. ಕಾರ್ವಿುಕ ಕಾನೂನಿನಲ್ಲಿ ಪರಿಷ್ಕರಣೆ ತಂದು ಉದಾರೀಕರಣ ನೀತಿ ಅಳವಡಿಸಬೇಕು. ಅದರಿಂದ ಹೂಡಿಕೆದಾರರಿಗೂ, ಕಾರ್ವಿುಕರಿಗೂ ಪ್ರಯೋಜನವಾಗುವಂತೆ ಮಾಡಬೇಕು. ಹಾಗೆ ಮಾಡಿದರೆ ಮಾತ್ರವೇ ಈ ಕ್ಷೇತ್ರ ಸುಸ್ಥಿರ ಅಭಿವೃದ್ಧಿ ಹೊಂದಲು ಸಾಧ್ಯ.

ಪ್ರಾದೇಶಿಕವಾಗಿ ಜವಳಿ ಕ್ಷೇತ್ರಕ್ಕೆ ಲಭ್ಯವಾಗಿದ್ದ ಪ್ರಯೋಜನ ಐಜಿಎಸ್​ಟಿ ಜಾರಿಗೊಂಡ ಬಳಿಕ ನಷ್ಟವಾಗಿದೆ. ಆಮದುದಾರ ತನ್ನ ತೆರಿಗೆ ಬಾಧ್ಯತೆಯನ್ನು ನೋಂದಾಯಿಸಬಹುದಾದರೂ, ಆಮದಿನಲ್ಲಿ ಶೇಕಡ 15-16 ಇಳಿಕೆಯಾಗಿದೆ. ಆರ್​ಒಎಸ್​ಎಲ್ ಮತ್ತು ಎಂಇಐಎಸ್ ದರಗಳನ್ನು ಇಳಿಸಲಾಗಿದೆಯಾದರೂ, ಶೇಕಡ 2 ಕೊರತೆ ಇನ್ನೂ ಉಳಿದಿದೆ. ಇಷ್ಟೆಲ್ಲ ಆಗಿ, ಕಳೆದ ಹಣಕಾಸು ವರ್ಷದಲ್ಲಿ ಟೆಕ್ಸ್​ಟೈಲ್ ಕ್ಷೇತ್ರ ನಿಗದಿತ ರಫ್ತು ಗುರಿ -ಠಿ; 3 ಲಕ್ಷ ಕೋಟಿ ತಲುಪಲಾಗದೆ ಹೋದರೂ, -ಠಿ;2.5 ಲಕ್ಷ ಕೋಟಿ ಸಮೀಪ ತಲುಪಿದೆ ಎನ್ನುವುದೇ ಸಮಾಧಾನದ ಸಂಗತಿ.

| ಸಂಜಯ್ ಜೈನ್ ಸಿಐಟಿಐ ಅಧ್ಯಕ್ಷ (ಏ.1ಕ್ಕೆ ಪಿಟಿಐಗೆ ನೀಡಿದ ಹೇಳಿಕೆ)

Leave a Reply

Your email address will not be published. Required fields are marked *

Back To Top