ಪಠ್ಯ ಪುಸ್ತಕ ವಿವಾದ: ಏನನ್ನು ಸೇರಿಸಲಾಗಿದೆ, ಯಾವುದನ್ನು ಕೈಬಿಡಲಾಗಿದೆ? ಇಲ್ಲಿದೆ ವಿವರ…

blank

ಬೆಂಗಳೂರು: ರಾಜ್ಯದಲ್ಲಿ ಕೆಲವು ದಿನಗಳಿಂದ ವಿವಾದಕ್ಕೆ ಒಳಗಾಗಿರುವ ಹತ್ತನೇ ತರಗತಿಯ ಇತಿಹಾಸ ಪಠ್ಯಪುಸ್ತಕದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಇಂದು ಸುದ್ದಿಗೋಷ್ಠಿ ನಡೆಸಿ, ಸ್ಪಷ್ಟೀಕರಣವನ್ನೂ ನೀಡಿದ್ದಾರೆ.

ಹತ್ತನೇ ತರಗತಿಯ ಇತಿಹಾಸ ಪಠ್ಯಕ್ಕೆ ಏನನ್ನು ಸೇರಿಸಲಾಗಿದೆ, ಅದರಿಂದ ಯಾವುದನ್ನು ಕೈಬಿಡಲಾಗಿದೆ ಎನ್ನುವ ಕುರಿತು ಸಚಿವರು ತಿಳಿಸಿರುವ ಮಾಹಿತಿ ಇಲ್ಲಿದೆ.

  • ನಾರಾಯಣಗುರು ಪಠ್ಯವನ್ನ 10ನೇ ತರಗತಿ ಇತಿಹಾಸ ಪುಸ್ತಕದಿಂದ ಕನ್ನಡ ಪುಸ್ತಕಕ್ಕೆ ಸೇರ್ಪಡೆ ಮಾಡಲಾಗಿದೆ. ಇತಿಹಾಸ ಪುಸ್ತಕದಲ್ಲಿ ಹೆಚ್ಚು ಪಠ್ಯ ಇತ್ತು ಅನ್ನೋ ಕಾರಣಕ್ಕೆ ಕನ್ನಡಕ್ಕೆ ಸೇರ್ಪಡೆ.
  • ಆರನೇ ತರಗತಿ ಪಠ್ಯದಲ್ಲಿ ಇರೋ ನಾರಾಯಣಗುರು ಪಠ್ಯವನ್ನೂ ಹಾಗೇ ಉಳಿಸಿಕೊಳ್ಳಲಾಗಿದೆ.
  • ಭಗತ್ ಸಿಂಗ್ ಪಠ್ಯ ತೆಗೆದಿಲ್ಲ. ಭಗತ್ ಸಿಂಗ್ ಜೊತೆ ಕ್ರಾಂತಿಕಾರರಾದ ರಾಜ್​ಗುರು, ಸುಖದೇವ್ ಪಠ್ಯವನ್ನು ಸೇರ್ಪಡೆ ಮಾಡಲಾಗಿದೆ. ಚಕ್ರವರ್ತಿ ಸೂಲಿಬೆಲೆ ಅವರು ಬರೆದಿರುವ ತಾಯಿ ಭಾರತೀಯರ ಅಮರಪುತ್ರರ ಪಠ್ಯವನ್ನು ಸೇರ್ಪಡೆ ಮಾಡಲಾಗಿದೆ.
  • ಡಾ.ಜಿ. ರಾಮಕೃಷ್ಣರ ಭಗತ್ ಸಿಂಗ್ ಪಠ್ಯವೂ ಕೈ ಬಿಟ್ಟಿಲ್ಲ.
  • ಮೈಸೂರು ಒಡೆಯರ್ ಪಠ್ಯವನ್ನು ಬರಗೂರು ರಾಮಚಂದ್ರಪ್ಪ ಸಮಿತಿ ಕೈ ಬಿಟ್ಟಿತ್ತು. ಐದು ಪುಟದ ಪಠ್ಯವನ್ನು 4 ಪುಟಕ್ಕೆ ಇಳಿಸಿತ್ತು. ಇದನ್ನು ಸರಿ ಮಾಡಿದ್ದೇವೆ.
  • ಬರಗೂರು ಸಮಿತಿ ಒಂದು ಪುಟ ಇದ್ದ ಟಿಪ್ಪು ಸುಲ್ತಾನ್ ಪಠ್ಯವನ್ನು 6 ಪುಟಕ್ಕೆ ಹೆಚ್ಚಿಸಿತ್ತು. ಓಟ್ ಬ್ಯಾಂಕ್​ಗಾಗಿ ಒಡೆಯರ್ ಪಠ್ಯ ಕೈ ಬಿಟ್ಟು ಟಿಪ್ಪು ಸುಲ್ತಾನ್ ಪಠ್ಯ ಸೇರ್ಪಡೆ ಮಾಡಿತ್ತು‌. ಟಿಪ್ಪು ವೈಭವೀಕರಣವನ್ನು ಸರಿ ಮಾಡಿದ್ದೇವೆ. ತಪ್ಪು ಸರಿ ಮಾಡಲಾಗಿದೆ.
  • ಪೆರಿಯಾರ್ ಪಠ್ಯ ಕೈ ಬಿಟ್ಟಿಲ್ಲ‌, ರಾಮನ ಬಗ್ಗೆ ಆಕ್ಷೇಪಾರ್ಹ ಮತ್ತು ರಾವಣನ ಪರ ಇದ್ದ ಸಾಲುಗಳನ್ನ ತೆಗೆಯಲಾಗಿದೆ.
  • ಕುವೆಂಪು ಪಾಠವನ್ನು ನಾವು ಬದಲಾವಣೆ ಮಾಡಿಯೇ ಇಲ್ಲ. ಬರಗೂರು ಸಮಿತಿ ಕುವೆಂಪು ಪಾಠವನ್ನು ಕೈ ಬಿಟ್ಟಿತ್ತು. ನಾವು ಹೆಚ್ಚುವರಿಯಾಗಿ ಎರಡು ಪಾಠ ಸೇರ್ಪಡೆ ಮಾಡಿದ್ದೇವೆ.
  • ಕುವೆಂಪು ಅವರ ರಾಮಾಯಣ ದರ್ಶನಂ ಪಠ್ಯದಲ್ಲಿ ಸೇರ್ಪಡೆ ಮಾಡಲಾಗಿದೆ.
  • ಇತಿಹಾಸದ ಬಗ್ಗೆ ಬರಗೂರು ರಾಮಚಂದ್ರಪ್ಪ ತಪ್ಪು ಮಾಹಿತಿ ಕೊಟ್ಟಿದ್ದರು. ಅದನ್ನ ಸರಿ ಮಾಡಿದ್ದೇವೆ.
  • ಟಿಪ್ಪುವಿನ ನಿಜವಾದ ಮುಖವಾಡವನ್ನ ಪಠ್ಯದಲ್ಲಿ ಸೇರಿಸಿದ್ದೇವೆ.
  • ಬ್ರಿಟಿಷರ ವಿರುದ್ದ ಹೋರಾಟ ಮಾಡಿದ್ದ, ಸಂಗೊಳ್ಳಿ ರಾಯಣ್ಣ, ಮದಕರಿ ನಾಯಕ, ಕಿತ್ತೂರು ಚೆನ್ನಮ್ಮ,ರಾಣಿ ಅಬ್ಬಕ್ಕ ಅವರನ್ನು ಬರಗೂರು ಸಮಿತಿ ಪಠ್ಯದಿಂದ ಕೈ ಬಿಟ್ಟಿತ್ತು. ಅವನ್ನು ಸೇರ್ಪಡೆ ಮಾಡಿದ್ದೇವೆ.
  • ಹಿಂದೂ ಮಹಾ ಸಾಗರವನ್ನು ಇಂಡಿಯನ್ ಓಷನ್ ಅಂತ ಬದಲಾವಣೆ ಮಾಡಿದ್ರು. ಅದನ್ನು ಸರಿ ಮಾಡಿದ್ದೇವೆ.
  • ಬರಗೂರು ರಾಮಚಂದ್ರಪ್ಪ ಸಮಿತಿ ಅಂಬೇಡ್ಕರ್, ಮಹಾತ್ಮ ಗಾಂಧಿಯವರ ಪಠ್ಯವನ್ನ ತೆಗೆದು ಹಾಕಿತ್ತು, ಅದನ್ನು ಸೇರಿಸಲಾಗಿದೆ.
  • ವಿವೇಕಾನಂದರ ಬಗ್ಗೆ ವಿಕೃತವಾಗಿ ಬರಗೂರು ಸೇರಿಸಿದ್ದರು. ಅದನ್ನ ಸರಿ ಮಾಡಿದ್ದೇವೆ.
  • ಏರುತಿಹುದು, ಹಾರುತಿಹುದು ನಮ್ಮ ಬಾವುಟ ಎಂಬ ಪಠ್ಯವನ್ನು ಬರಗೂರು ಕೈ ಬಿಟ್ಟಿದ್ದರು, ಅದನ್ನು ಸರಿ ಮಾಡಿದ್ದೇವೆ.
  • ನಾಡಪ್ರಭು ಕೆಂಪೇಗೌಡರನ್ನು ಬರಗೂರು ಕೈ ಬಿಟ್ಟಿದ್ದರು, ಅದನ್ನು ಸೇರಿಸಿದ್ದೇವೆ.
  • ಚರ್ಚ್​, ದೇವಾಲಯಗಳ ಬಗ್ಗೆ ಪಠ್ಯ ಇತ್ತು. ಅಲ್ಲಿ ದೇವಾಲಯ ಫೋಟೋವೇ ಇರಲಿಲ್ಲ. ಅದನ್ನು ಸರಿ ಮಾಡಿದ್ದೇವೆ.
  • ಬರಗೂರು ಸಮಿತಿ ಸಿಂಧೂ ನಾಗರಿಕತೆಯನ್ನು ಪಠ್ಯದಿಂದ ಕೈ ಬಿಟ್ಟಿತ್ತು. ಅದನ್ನು ಸೇರ್ಪಡೆ ಮಾಡಿದ್ದೇವೆ.
  • ಮೊಘಲರು, ಬ್ರಿಟಿಷರ ವಿರುದ್ದ ಹೋರಾಡಿದ ವೀರರ ಬಗ್ಗೆ ಪಠ್ಯದಲ್ಲಿ ಸೇರಿಸಲಾಗಿದೆ.
Share This Article

Spirituality: ಇರುವೆಗಳಿಗೆ ಆಹಾರ ನೀಡಿದರೆ ಶನಿದೇವನ ಪ್ರಭಾವ ಇರುವುದಿಲ್ಲವೇ?

Spirituality: ನಮ್ಮಲ್ಲಿರುವ ವಸ್ತು ಅಥವಾ ಯಾವುದೇ ಪದಾರ್ಥವನ್ನು ಇಲ್ಲದವರಿಗೆ ದಾನ ಮಾಡಿದರೆ ದೇವರ ಅನುಗ್ರಹ ಸದಾ…

2025ರಲ್ಲಿ ಸಾಲದ ಸುಳಿಗೆ ಸಿಲುಕಲಿದ್ದಾರಂತೆ ಈ 3 ರಾಶಿಯವರು!? ಹಣಕಾಸಿನ ವಿಚಾರದಲ್ಲಿ ಬಹಳ ಎಚ್ಚರ | Money

Money : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು…

30 ನೇ ವಯಸ್ಸಿನಲ್ಲಿಯೇ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತಿದೆಯೇ? White Hair ಆಗಿದ್ರೆ ಇಲ್ಲಿದೆ ಉಪಯುಕ್ತ ಮಾಹಿತಿ

White Hair : ಇಂದಿನ ಕಾಲದಲ್ಲಿ ಜನರ ಕೂದಲು ಚಿಕ್ಕ ವಯಸ್ಸಿನಲ್ಲೇ ಬೆಳ್ಳಗಾಗುತ್ತಿದೆ. ಇನ್ನು ಕೆಲವರು…