ಬುದ್ಧ ಪೂರ್ಣಿಮಾದಂದು ಭಾರತದಾದ್ಯಂತ ದಾಳಿಗೆ ಸಂಚು ರೂಪಿಸುತ್ತಿರುವ ಉಗ್ರರು: ಗುಪ್ತಚರ ಇಲಾಖೆ ಮಾಹಿತಿ

ನವದೆಹಲಿ: ಉಗ್ರರು ದೇಶದಲ್ಲಿ ಅನೇಕ ದಾಳಿಗಳನ್ನು ನಡೆಸಲು ಭಾರೀ ಸಂಚು ರೂಪಿಸುತ್ತಿದ್ದಾರೆ ಎನ್ನುವ ನಿರ್ಧಿಷ್ಟ ಮಾಹಿತಿ ಪಡೆದ ಬಳಿಕ ಗುಪ್ತಚರ ಇಲಾಖೆ ಹೈ ಅಲರ್ಟ್‌ ಘೋಷಿಸಿದೆ.

ಭಯೋತ್ಪಾದಕರು ಕೆಲವು ದೊಡ್ಡ ದಾಳಿಗಳನ್ನು ನಡೆಸಲು ಪಿತೂರಿ ಮಾಡುತ್ತಿದ್ದಾರೆ ಎಂದು ಗುಪ್ತಚರ ಸಂಸ್ಥೆಗೆ ಮಾಹಿತಿ ಲಭ್ಯವಾಗಿದ್ದು, ಈಗಾಗಲೇ ಮೂವರು ಉಗ್ರರು ನೇಪಾಳ ಗಡಿ ಮೂಲಕ ಭಾರತಕ್ಕೆ ನುಸುಳಿದ್ದಾರೆ ಮತ್ತು ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯನ್ನು ತಲುಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮತ್ತೊಂದೆಡೆ ಬಾಂಗ್ಲಾದೇಶ ಮೂಲಕ ಉಗ್ರ ಸಂಘಟನೆಯಾದ ಜಮಾತ್‌ ಉಲ್‌ ಮುಜಾಹಿದ್ದೀನ್‌ ಬಾಂಗ್ಲಾದೇಶ್‌(ಜೆಎಂಬಿ)ಯು ಆತ್ಮಾಹುತಿ ದಾಳಿಗೆ ಮಹಿಳೆಗೆ ತರಬೇತಿ ನೀಡಿದ್ದಾರೆ ಮತ್ತು ಆಕೆ ಬಾಂಗ್ಲಾದೇಶದ ಬುದ್ಧ ದೇಗುಲಗಳು, ಭಾರತ ಮತ್ತು ಮ್ಯಾನ್ಮಾರ್‌ಗಳಲ್ಲಿ ಗುರಿಯಾಗಿಸಿ ದಾಳಿ ನಡೆಸಲಿದ್ದಾರೆ.

ಈ ಬೆಳವಣಿಗೆಗಳು ಆಗ್ನೇಯ ಏಷ್ಯಾದ ಇಸ್ಲಾಮಿಕ್ ಸ್ಟೇಟ್‌(ಐಸಿಸ್) ಉಗ್ರ ಸಂಘಟನೆ ಕಡೆಯಿಂದಾಗಲಿದೆ ಎಂದು ಗುಪ್ತಚರ ಇಲಾಖೆಗೆ ಶಂಕೆ ವ್ಯಕ್ತಪಡಿಸಿದ್ದು, ಇತ್ತೀಚೆಗಷ್ಟೇ ಶ್ರೀಲಂಕಾದಲ್ಲಿ ಚರ್ಚ್‌ಗಳ ಮೇಲೆ ನಡೆದ ದಾಳಿಗಳು ಇದಕ್ಕೆ ಪುರಾವೆ ಒದಗಿಸುತ್ತಿವೆ.

ಮೂಲಗಳ ಪ್ರಕಾರ ಸಜೀದ್‌ ಮಿರ್‌ ಎಂಬ ಉಗ್ರ ನೇಪಾಳದ ಕಾಠ್ಮಂಡುವಿನಿಂದ ಮೂವರು ವಿದೇಶಿ ಉಗ್ರರನ್ನು ಕರೆತಂದು ಬಂಡಿಪೋರಾದಟ್ಟಿದ್ದಾರೆ. ಬಂಡಿಪೋರವು ವಿದೇಶಿ ಉಗ್ರರಿಗೆ ಮುಖ್ಯವಾಗಿ ಲಷ್ಕರ್‌ ಇ ತೊಯ್ಬಾ ಮತ್ತು ಜೈಶ್‌ ಇ ಮೊಹಮ್ಮದ್‌ನಂತ ಉಗ್ರ ಸಂಘಟನೆಗಳಿಗೆ ಸುರಕ್ಷಿತ ತಾಣವಾಗಿದೆ. ನೇಪಾಳದ ಮೂಲಕ ಉಗ್ರರ ಒಳನುಸುಳುವಿಕೆಯು ಭದ್ರತಾ ಸಂಸ್ಥೆಗಳನ್ನು ತೀವ್ರ ಕಳವಳಕ್ಕೀಡು ಮಾಡಿದ್ದು, 2017 ಮತ್ತು 2018 ರಲ್ಲಿ ಈ ಮಾರ್ಗದಿಂದ ಯಾವುದೇ ಉಗ್ರರ ಒಳನುಸುಳುವಿಕೆ ನಡೆದಿರಲಿಲ್ಲ. (ಏಜೆನ್ಸೀಸ್)

Leave a Reply

Your email address will not be published. Required fields are marked *