ಪಂಜಾಬ್​ನಲ್ಲಿ ಮತ್ತೆ ಕಾಣಿಸಿಕೊಂಡ ಉಗ್ರ ಜಾಕಿರ್​ ಮೂಸಾ: ಹೈ ಅಲರ್ಟ್​

ಅಮೃತಸರ: ಜಮ್ಮು ಮತ್ತು ಕಾಶ್ಮೀರದ ಅನ್ಸರ್​ ಘಜ್ವತ್​ ಉಲ್​ ಹಿಂದ್​ ಉಗ್ರ ಸಂಘಟನೆಯ ಕಮಾಂಡರ್​ ಮೋಸ್ಟ್​ ವಾಂಟೆಡ್​ ಉಗ್ರ ಜಾಕೀರ್ ಮೂಸಾ ಪಂಜಾಬ್​ನಲ್ಲಿ ಮತ್ತೆ ಕಾಣಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಜಾಕಿರ್​ ಮೂಸಾ ಸಿಖ್​ ಸಮುದಾಯದವರಂತೆ ವೇಷ ಧರಿಸಿದ್ದು, ಆತ ಪಂಜಾಬ್​ನ ಬಟಿಂಡಾ ಅಥವಾ ಫಿರೋಜ್​ಪುರ್​ ಸಮೀಪ ಅಡಗಿರಬಹುದು ಎಂದು ರಾಜ್ಯ ಗುಪ್ತಚರ ವಿಭಾಗ, ಸಿಐಡಿ ಮತ್ತು ಸೇನೆ ಗುಪ್ತಚರ ವಿಭಾಗದ ಮೂಲಗಳು ತಿಳಿಸಿವೆ.

ಆತ ಸಿಖ್​ ವೇಷ ಧರಿಸಿರುವ ಫೋಟೋವನ್ನು ಬಿಡುಗಡೆ ಮಾಡಲಾಗಿದ್ದು, ಆತನ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಲಾಗಿದೆ.

ಇತ್ತೀಚೆಗೆ ಜಾಕಿರ್​ ಮೂಸಾ ಜೈಷ್ ಎ ಮೊಹಮ್ಮದ್​ ಉಗ್ರ ಸಂಘಟನೆಗೆ ಸೇರಿದ ಐವರು ಉಗ್ರರೊಂದಿಗೆ ಪಂಜಾಬ್​ನಲ್ಲಿ ಸುತ್ತಾಡುತ್ತಿರುವುದು ಕಂಡು ಬಂದಿರುವುದಾಗಿ ಪಂಜಾಬ್ ಪೊಲೀಸರು ತಿಳಿಸಿದ್ದರು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್​ ಹಚ್ಚಿ ಉಗ್ರರ ಕುರಿತು ಮಾಹಿತಿ ನೀಡುವಂತೆ ಕೋರಿದ್ದರು. (ಏಜೆನ್ಸೀಸ್​)

ಅಮೃತಸರ ಬಳಿ ಉಗ್ರ ಜಾಕೀರ್ ಮೂಸಾ ಪ್ರತ್ಯಕ್ಷ: ಪಂಜಾಬ್​, ದೆಹಲಿಯಲ್ಲಿ ಕಟ್ಟೆಚ್ಚರ