ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಉಗ್ರ ಸಂಘಟನೆಗಳು ಬೃಹತ್ ಕಾರ್ಯಕ್ರಮ ನಡೆಸಿದ್ದು, ಭಾರತೀಯ ಭದ್ರತಾ ಸಂಸ್ಥೆಗಳು ಹೈಅಲರ್ಟ್ನಲ್ಲಿವೆ. ಈ ವಾರದ ಆರಂಭದಲ್ಲಿ ನಡೆದಿರುವ ಕಾರ್ಯಕ್ರಮದಲ್ಲಿ ಲಷ್ಕರ್-ಎ-ತೊಯ್ಬಾ (ಎಲ್ಇಟಿ), ಜೈಶ್-ಎ-ಮೊಹಮ್ಮದ್ (ಜೆಇಎಂ), ಪ್ಯಾಲೆಸ್ತೀನ್ನ ಹಮಾಸ್ ಉಗ್ರರು ಕೂಡ ಭಾಗಿಯಾಗಿದ್ದರು.
ಈ ಕಾರ್ಯಕ್ರಮದ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಟೆಹ್ರಾನ್ನಲ್ಲಿ ಕೆಲಸ ಮಾಡಿದ್ದ ಮತ್ತು ಈ ವರ್ಷದ ಆರಂಭದಲ್ಲಿ ಪಾಕಿಸ್ತಾನ ಸಂಸತ್ತಿಗೂ ಭೇಟಿ ನೀಡಿದ್ದ ಹಮಾಸ್ ಪ್ರತಿನಿಧಿ ಡಾ. ಖಲೀದ್ ಖದ್ದೌಮಿ ಈ ಕಾರ್ಯಕ್ರಮದಲ್ಲಿ ಹಾಜರಿದ್ದ ಎಂದು ಪಾಕಿಸ್ತಾನದ ಅನೇಕ ಮಾಧ್ಯಮಗಳು ಹೇಳಿಕೊಂಡಿವೆ.
ಕಾಶ್ಮೀರ ಒಗ್ಗಟ್ಟಿನ ದಿನವನ್ನು ಆಚರಿಸಲು ಈ ಸಮ್ಮೇಳನ ನಡೆಸಲಾಗಿದೆ. ಜಾಗತಿಕ ವೇದಿಕೆಯಲ್ಲಿ ಭಾರತ ವಿರೋಧಿ ಕಾರ್ಯಸೂಚಿಯನ್ನು ಮತ್ತಷ್ಟು ಚುರುಕುಗೊಳಿಸಲು, ಭಾರತದ ಬಗ್ಗೆ ನಕಾರಾತ್ಮಕ ಚಿತ್ರಣ ಸೃಷ್ಟಿಸಲು ಪಾಕಿಸ್ತಾನ ಸರ್ಕಾರವು ಒಗ್ಗಟ್ಟಿನ ದಿನ ಆಯೋಜಿಸುತ್ತಿದೆ. ಈ ಕಾರ್ಯಕ್ರದಲ್ಲಿ ಜೈಶ್- ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ನ ಸಹೋದರ ತಲ್ಹಾ ಸೈಫ್ ಮತ್ತು ಜೈಶ್ ಕಮಾಂಡರ್ ಅಸ್ಗರ್ ಖಾನ್ ಹಾಜರಿದ್ದ ಎಂದು ವರದಿಗಳು ತಿಳಿಸಿವೆ. ರಾವಲಕೋಟೆಯಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಿದ್ದ ನೂರಾರು ಜನರು ಬೈಕ್ ರ‍್ಯಾಲಿ ನಡೆಸಿರುವುದು ಪ್ರತ್ಯೇಕ ವೀಡಿಯೊ ದಲ್ಲಿ ದಾಖಲಾಗಿದೆ. ಗಾಜಾ ಪಟ್ಟಿ ಮತ್ತು ಜಮ್ಮು- ಕಾಶ್ಮೀರವನ್ನು ಸಮಾನವಾಗಿ ಬಿಂಬಿಸುವ ಉದ್ದೇಶ ದಿಂದ ಕಾರ್ಯಕ್ರಮಕ್ಕೆ ಹಮಾಸ್ ಉಗ್ರರನ್ನು ಆಹ್ವಾನಿಸಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹಮಾಸ್ ಮತ್ತು ಅದರ ಬೆಂಬಲಿಗರು ಹಲವಾರು ಸಂದರ್ಭಗಳಲ್ಲಿ ಪ್ಯಾಲೆಸ್ತೀನಿಯರ ದುಃಸ್ಥಿತಿಯನ್ನು ಕಾಶ್ಮೀರದ ಜನರೊಂದಿಗೆ ಹೋಲಿಕೆಗೆ ಯತ್ನಿಸಿದ್ದಾರೆ.
ಭಾರತಕ್ಕೆ ಆತಂಕ: ಪಿಒಕೆಯಲ್ಲಿ ನಡೆದಿರುವ ಉಗ್ರರ ಸಮಾವೇಶ ಭಾರತಕ್ಕೆ ತುಸು ಆತಂಕ ಉಂಟುಮಾಡಿದೆ. ಮುಂದಿನ ದಿನಗಳಲ್ಲಿ ಕಾಶ್ಮೀರದಲ್ಲಿ ಮತ್ತೆ ಉಗ್ರ ಚಟುವಟಿಕೆ ಹೆಚ್ಚಳವಾಗುವ ಸಾಧ್ಯತೆಯೂ ಇದೆ. ಹೀಗಾಗಿ ಈ ಬೆಳವಣೆಗೆ ಮೇಲೆ ಭಾರತದ ಭದ್ರತಾ ಏಜೆನ್ಸಿಗಳು ತೀವ್ರ ನಿಗಾ ಇಟ್ಟಿವೆ.
Team India ಆಲ್ರೌಂಡ್ ಪ್ರದರ್ಶನಕ್ಕೆ ನಲುಗಿದ ಆಂಗ್ಲರು; ಮೊದಲ ಏಕದಿನದಲ್ಲಿ ಭಾರತಕ್ಕೆ ಸುಲಬ ತುತ್ತಾದ ಇಂಗ್ಲೆಂಡ್
ದೇಶದಲ್ಲಿ ಹಿಂದೂ ಎಂಬ ಪದವೇ ಇರಲಿಲ್ಲ ಅದನ್ನು ತಂದಿದ್ದೆ ಕಾಂಗ್ರೆಸ್: Santosh Lad