ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ ಭಯೋತ್ಪಾದನೆ ಕಡಿಮೆಯಾಗಿದೆ: ಡಾ. ವಿಜಯ ಸಂಕೇಶ್ವರ್​​

ಮಡಿಕೇರಿ: ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ದೇಶದಲ್ಲಿ ಭಯೋತ್ಪಾದನೆ ಕಡಿಮೆಯಾಗಿದೆ ಎಂದು ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್ಮನ್​ ಡಾ. ವಿಜಯ ಸಂಕೇಶ್ವರ ಅವರು ಹೇಳಿದರು.

ಮಡಿಕೇರಿ ಜಿಲ್ಲೆಯ ಅತ್ತೂರಿನಲ್ಲಿ ಮಾತನಾಡಿದ ಅವರು, ಭಯೋತ್ಪಾದನೆಯನ್ನು ಸಂಪೂರ್ಣ ನಿರ್ನಾಮ ಮಾಡುವ ಉದ್ದೇಶ ಪ್ರಧಾನಿ ನರೇಂದ್ರ ಮೋದಿಯವರದ್ದಾಗಿದೆ. ಭಾರತ ಮತ್ತು ಇಸ್ರೇಲ್ ದೇಶಗಳು ಭಯೋತ್ಪಾದನೆ ಸಮಸ್ಯೆಯನ್ನು ಹೆಚ್ಚು ಎದುರಿಸುತ್ತಿವೆ ಎಂದರು.

ಪುಲ್ವಾಮ ದಾಳಿಯಾದ ವೇಳೆ ಶ್ರೀಶೈಲಾ ಸ್ವಾಮೀಜಿ ಸೇನೆಗೆ ಸೇರುತ್ತೇನೆ ಎಂದಿದ್ದರು. ಅದನ್ನು ಎಲ್ಲರು ಪಾಲನೆ ಮಾಡಬೇಕು. ಆಗ ಸೈನ್ಯದ ಬಲ ಕೂಡ ಹೆಚ್ಚಲಿದೆ ಎಂದು ಹೇಳಿದರು.(ದಿಗ್ವಿಜಯ ನ್ಯೂಸ್​)