24.9 C
Bangalore
Sunday, December 15, 2019

ನಿಮ್ಮ ಮನೆ ಮಗಳಿಗೆ ಅರಿಶಿಣ ಕುಂಕುಮದ ಜತೆಗೆ ಮತ ಕೊಡಿ

Latest News

ಭಕ್ತರ ಪಾಲಿಗೆ ಆರಾಧ್ಯ ದೈವ ವೀರಭದ್ರಸ್ವಾಮಿ

ಚಾಮರಾಜನಗರ: ನಂಬಿ ಬರುವ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡುವ ಶ್ರೀವೀರಭದ್ರಸ್ವಾಮಿ ಭಕ್ತರ ಪಾಲಿನ ಆರಾಧ್ಯ ದೈವವಾಗಿದ್ದಾನೆ. ಚಾಮರಾಜನಗರದ ಕೇಂದ್ರ ಸ್ಥಾನದಲ್ಲಿರುವ ಸಾವಿರಾರು ವರ್ಷಗಳ ಇತಿಹಾಸ...

ಗಂಟೆಗಳಲ್ಲಿ ಕೋಟ್ಯಧಿಪತಿಯಾಗಿ ಬದಲಾದ ಕೇರಳದ ಟ್ಯಾಕ್ಸಿ ಡ್ರೈವರ್

ಕೊಲ್ಲಂ: ಟ್ಯಾಕ್ಸಿ ಓಡಿಸಿಕೊಂಡು ಬದುಕಿನ ಬಂಡಿ ಎಳೆಯುತ್ತಿದ್ದ ಕೇರಳದ ವ್ಯಕ್ತಿಯೊಬ್ಬರು ಗಂಟೆಗಳಲ್ಲಿ ಕೋಟ್ಯಧಿಪತಿಯಾಗಿ ಬದಲಾಗಿದ್ದಾರೆ. ಚೌರಾ ನಿವಾಸಿ ಶಾಜಿ (33) ಕೋಟ್ಯಧಿಪತಿಯಾಗಿ ಬದಲಾದ ಟ್ಯಾಕ್ಸಿ...

ದೈವತ್ವದತ್ತ ಕರೆದೊಯ್ಯುವ ಕಲೆಯೇ ಸಂಗೀತ

ದಾವಣಗೆರೆ: ಮನುಷ್ಯನನ್ನು ಮೃಗತ್ವದಿಂದ ಮಾನವತ್ವ ಹಾಗೂ ದೈವತ್ವದತ್ತ ಕರೆದೊಯ್ಯುವ ಶ್ರೇಷ್ಠ ಕಲೆಯೇ ಸಂಗೀತ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಎಚ್.ಎಸ್. ಮಂಜುನಾಥ...

ಶೈಕ್ಷಣಿಕ ಚಟುವಟಿಕೆ ಕೇಂದ್ರವಾಗಲಿ

ಬಾಗಲಕೋಟೆ: ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿದೆ. ಸಮಾಜದಲ್ಲಿ ಬದಲಾವಣೆ ತರಲು, ಮೌಲ್ಯಯುತ ಮಾನವೀಯ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ...

ದಾವಣಗೆರೆ ಶಾಲಾ ಆಟೋ ಚಾಲಕರ ಸಂಘದಿಂದ ರಾಜ್ಯೋತ್ಸವ

ದಾವಣಗೆರೆ: ಕನ್ನಡಿಗರು ನಿತ್ಯ ವ್ಯವಹಾರದಲ್ಲಿ ಕನ್ನಡ ಬಳಸಿದರಷ್ಟೇ ಭಾಷೆಗೆ ಸಿಕ್ಕ ಶಾಸೀಯ ಸ್ಥಾನಮಾನಕ್ಕೆ ಗೌರವ ಸಲ್ಲಲಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು. ದಾವಣಗೆರೆ...

ತೇರದಾಳ: ಪ್ರಧಾನಿ ನರೇಂದ್ರ ಮೋದಿಯವರೇ ನಮ್ಮ ನೇಕಾರರಿಗೆ ಮೂರು ಸಾವಿರ ಪೆನ್ಶನ್ ಬೇಡ, ಮೊದಲು ಜಿಎಸ್‌ಟಿ ತೆಗೆದು ಹಾಕುವ ಕೆಲಸ ಮಾಡಿ ಎಂದು ಮೈತ್ರಿಕೂಟದ ಅಭ್ಯರ್ಥಿ ವೀಣಾ ಕಾಶಪ್ಪನವರ ಮೋದಿಗೆ ತಿರುಗೇಟು ನೀಡಿದರು.

ಪಟ್ಟಣದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪರ ಬಹಿರಂಗ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಮತದಾರ ದೇವರುಗಳೇ ಎಂದು ಕೈಮುಗಿದು ಮಾತುಗಳನ್ನು ಪ್ರಾರಂಭಿಸಿದ ಅವರು, ಪ್ರಧಾನಿ ಮೋದಿ ಆಶ್ವಾಸನೆಗಳನ್ನು ಕೊಟ್ಟು, ಅಭ್ಯರ್ಥಿ ಹೆಸರೇ ಎತ್ತಲಿಲ್ಲ. ಬಡವ, ದೀನ ದಲಿತರಿಗಾಗಿ ನೀವು ಏನೂ ಮಾಡಲಿಲ್ಲ. ಅದನ್ನು ಕೇಂದ್ರ ಸರ್ಕಾರ ನೋಡಿ ಕಲಿಯೋದಲ್ಲ. ಬಡ, ದೀನ-ದಲಿತರು ಸೇರಿ ಹಲವು ವರ್ಗಗಳಿಗೆ ರಾಜ್ಯದ ಸಮ್ಮಿಶ್ರ ಸರ್ಕಾರ ನೀಡಿದ ಜಾತ್ಯತೀತ ಕೊಡುಗೆ ನೋಡಿ ಬಿಜೆಪಿ ಕಲಿಯಿಲಿ ಎಂದರು.

ದೇಶಕ್ಕಾಗಿ ಮೋದಿ ಅಲ್ಲ. ಬದಲಾಗಿ ದೇಶಕ್ಕಾಗಿ ದೇವೇಗೌಡ, ರಾಜ್ಯಕ್ಕಾಗಿ ಕುಮಾರಸ್ವಾಮಿ, ಸಿದ್ದರಾಮಯ್ಯ ಎಂದು ಸ್ಲೋಗನ್ ಬದಲಾಯಿಸೋಣ. ಜಿಲ್ಲೆಯ ಹೆಣ್ಣು ಮಗಳಾಗಿ ಇಲ್ಲಿನ ನೇಕಾರರ, ರೈತರ, ದಿನಗೂಲಿ ಕಾರ್ಮಿಕರು ಸೇರಿ ಎಲ್ಲ ವರ್ಗಗಳ ಪರವಾಗಿ ನಾನು ಮಾತನಾಡಿ, ಕೆಲಸ ಮಾಡಿಸಿಕೊಡುತ್ತೇನೆ. ಅದಕ್ಕಾಗಿ ನಿಮ್ಮ ಮನೆ ಮಗಳಿಗೆ ಅರಿಶಿಣ ಕುಂಕುಮದ ಜತೆಗೆ ಒಂದು ಮತ ಉಡುಗೊರೆಯಾಗಿ ಕೊಡಿ ಎಂದು ಮನವಿ ಮಾಡಿದರು.

ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ಗದ್ದಿಗೌಡರು ಅಲ್ರಿ, ನಿದ್ದೆಗೌಡ್ರು ಎಂದು ಲೇವಡಿ ಮಾಡಿದ ಅವರು, ತೇರದಾಳ ತಾಲೂಕನ್ನು ಪಡೆದುಕೊಂಡ ತಾವೆಲ್ಲರೂ ತಮ್ಮ ಋಣದ ಭಾರಕ್ಕಾಗಿ ನಮ್ಮ ಅಭ್ಯರ್ಥಿ ವೀಣಾ ಕಾಶಪ್ಪನವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಾಜಿ ಸಚಿವೆ ಉಮಾಶ್ರೀ ಮಾತನಾಡಿದರು.
ತಾಲೂಕು ಹೋರಾಟ ಸಮಿತಿ ಕಾರ್ಯದರ್ಶಿ ಬಸವರಾಜ ಬಾಳಿಕಾಯಿ ಪ್ರಾಸ್ತಾವಿಕ ಮಾತನಾಡಿದರು. ಅಜಯಕುಮಾರ ಸರನಾಯಕ, ಜೆ.ಟಿ. ಪಾಟೀಲ, ಎಚ್.ವೈ. ಮೇಟಿ, ಎನ್.ಎಸ್.ದೇವರವರ, ಎಸ್.ಆರ್. ನವಲಿಹಿರೇಮಠ, ಬಾಯಕ್ಕ ಮೇಟಿ, ಪಾರಸಮಲ್ಲ ಜೈನ, ಎಸ್.ಆರ್.ಪಾಟೀಲ, ಬಸವರಾಜ ಕೊಣ್ಣೂರ, ಆನಂದ ನ್ಯಾಮಗೌಡ, ಬಿ.ಎ.ದೇಸಾಯಿ, ಲಲಿತಾ ನಂದೆಪ್ಪನವರ, ಡಾ.ಪದ್ಮಜೀತ ನಾಡಗೌಡ, ಪ್ರವೀಣ ನಾಡಗೌಡ, ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಬುಜಬಲಿ ಕೆಂಗಾಲಿ ಸೇರಿದಂತೆ ಕಾಂಗ್ರೆಸ್-ಜೆಡಿಎಸ್‌ನ ಹಿರಿಯ ನಾಯಕರು ಇದ್ದರು.

ಶಕ್ತಿ ಪ್ರದರ್ಶನ
ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಪ್ರಚಾರ ಸಭೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ನೆರೆದಿದ್ದರು. ತಾಲೂಕು ಘೋಷಣೆಯಾದ ತೇರದಾಳದಲ್ಲಿ ಭಾರಿ ಪ್ರಮಾಣದ ಶಕ್ತಿ ಪ್ರದರ್ಶನ ಮೈತ್ರಿ ಪಕ್ಷಗಳು ತೋರಿಸಿದವು. ಬಿರುಬಿಸಿಲು ತಪ್ಪಿಸಲು ಶಾಮಿಯಾನ್ ವೇದಿಕೆ ನಿರ್ಮಿಸಲಾಗಿತ್ತು. ಸಿಎಂ ಅವರ ಆಗಮನ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕೈಗೊಂಡಿತ್ತು. ಶಾಂತಿಯುತವಾಗಿ ಸುಮಾರು ಎರಡು ಗಂಟೆಗಳ ಕಾಲ ಪ್ರಚಾರ ಸಭೆ ನಡೆಯಿತು.

ಅಭ್ಯರ್ಥಿ ವೀಣಾ, ಸಿಎಂ ಕುಮಾರಸ್ವಾಮಿ ಪರ ಜೈಕಾರಗಳು ಮೊಳಗಿದವು. ಎರಡು ಪಕ್ಷದ ಶಾಲುಗಳನ್ನು ನಾಯಕರು ಸೇರಿದಂತೆ ಕಾರ್ಯಕರ್ತರ ಬಳಸಿಕೊಂಡರು.





Stay connected

278,753FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...