ಪ್ರತಿಭಾ ಕಾರಂಜಿಯಿಂದ ಸುಪ್ತ ಪ್ರತಿಭೆ ಅನಾವರಣ

ತೇರದಾಳ: ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರಗೆಡುಹಿ, ಪ್ರೋತ್ಸಾಹ ನೀಡುವ ಅತ್ಯಂತ ಸೂಕ್ತ ವೇದಿಕೆ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ. ಮಕ್ಕಳು ಇದರ ಪ್ರಯೋಜನ ಪಡೆದು ಕಾರಂಜಿಯಂತೆ ಪ್ರತಿಭೆ ಮುಗಿಲೆತ್ತರಕ್ಕೆ ಬೆಳೆಸಿಕೊಳ್ಳಬೇಕು ಎಂದು ಹಳಿಂಗಳಿಯ ಮಹಾವೀರಪ್ರಭು ಸ್ವಾಮೀಜಿ ಹೇಳಿದರು.

ಪಟ್ಟಣದ ಶಂಕರಲಿಂಗೇಶ್ವರ ಪ್ರಾಥಮಿಕ ಶಾಲೆ ನೇತೃತ್ವದಲ್ಲಿ ನೀಲಕಂಠೇಶ್ವರ ಸಂಸ್ಥೆಯ ಆವರಣದಲ್ಲಿ ಜರುಗಿದ 2018-19ರ ತೇರದಾಳ ಪೂರ್ವ ವಲಯದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಕಲೋತ್ಸವದ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮಕ್ಕಳ ಭಾವಿ ಜೀವನ ಸುಂದರವಾಗಿ ರೂಪುಗೊಳ್ಳಲು ಪಠ್ಯ ಜತೆಗೆ ಪಠ್ಯೇತರ, ಸಾಂಸ್ಕೃತಿಕ ಕಾರ್ಯಕ್ರಮಗಳು ಮಹತ್ತರ ಪಾತ್ರವಹಿಸುತ್ತವೆ. ಶಿಕ್ಷಕರ ಸೂಕ್ತ ಮಾರ್ಗದರ್ಶನ ಸಿಕ್ಕರೆ ಮಾತ್ರ ಅಂಥ ಮಕ್ಕಳು ಸಾಧಕರಾಗಲು ಸಾಧ್ಯ. ಆದ್ದರಿಂದ ಪಾಲಕರ ಸಹಕಾರದೊಂದಿಗೆ ಶಿಕ್ಷಕರು ಮಕ್ಕಳನ್ನು ಆದರ್ಶ ವ್ಯಕ್ತಿಗಳನ್ನಾಗಿ ಬೆಳೆಸಬೇಕು ಎಂದರು.

ಭೀಮಶಿ ಹಿರೇಕುರುಬರ ಕಾರ್ಯಕ್ರಮ ಉದ್ಘಾಟಿಸಿದರು. ಶಂಕರಲಿಂಗೇಶ್ವರ ಸಂಸ್ಥೆಯ ಅಧ್ಯಕ್ಷ ಅಣ್ಣಪ್ಪ ಕಿಚಡಿ ಅಧ್ಯಕ್ಷತೆ ವಹಿಸಿದ್ದರು. ನೀಲಕಂಠೇಶ್ವರ ಸಂಸ್ಥೆ ಅಧ್ಯಕ್ಷ ನೀಲಕಂಠಪ್ಪ ಜಡಿ, ಸಿಆರ್​ಪಿ ಎಸ್.ಬಿ. ಹಡಪದ ಪ್ರಾಸ್ತಾವಿಕ ಮಾತನಾಡಿದರು,

ಆರ್​ಟಿಇ ನೋಡಲ್ ಅಧಿಕಾರಿ ಎಂ.ಎಸ್. ನಾವಿ, ಬಿಆರ್​ಪಿ ಸಾಗರ್, ಮಹೇಶ ಕಾಲತಿಪ್ಪಿ, ಮಹಾವೀರ ಕೊಕಟನೂರ, ಮಹೇಶ ಅಮ್ಮಣಗಿ, ತುಳಜಪ್ಪ ಮಾಳಿ, ಶಿವಾನಂದ ಲೋಹಾರ, ಶಂಕರ ತಿಗಣಿ, ಸಿಆರ್​ಪಿಗಳಾದ ಆರ್.ಎ. ನ್ಯಾಮಗೌಡ, ಎಸ್.ಬಿ. ಮೋಮಿನ್, ಎಸ್.ಎ. ಅಜನಕ್ಕಿ ಮುಂತಾದವರಿದ್ದರು. ಶಂಕರ ತಿಗಣಿ ಸ್ವಾಗತಿಸಿದರು. ರಾಜೇಶ್ವರಿ ಗಸ್ತಿ ನಿರೂಪಿಸಿದರು. ದಾನಮ್ಮ ಹಿರೇಮಠ ವಂದಿಸಿದರು.