More

    ಮುಸ್ಲಿಂ, ಬಡವರ ವಿರೋಧಿ ಕಾಯ್ದೆಗಳು

    ತೇರದಾಳ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ), ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಕೇವಲ ಮುಸ್ಲಿಂ ಮಾತ್ರವಲ್ಲದೆ ಬಡವರ, ಕಾರ್ಮಿಕ ಹೆಣ್ಣುಮಕ್ಕಳ ವಿರೋಧಿ ಕಾಯ್ದೆಗಳಾಗಿವೆ ಎಂದು ಚಿಕ್ಕನೇರಳೆಯ ನಜಮಾ ನಜೀರ್ ಅಭಿಪ್ರಾಯಪಟ್ಟರು.

    ಪಟ್ಟಣದ ಮಹಾತ್ಮ್ಮ ಗಾಂಧಿ ಕ್ರೀಡಾಂಗಣದಲ್ಲಿ ದಲಿತ ಮತ್ತು ಮುಸ್ಲಿಂ ಸಂಘಟನೆಗಳ ಒಕ್ಕೂಟ ಆಶ್ರಯದಲ್ಲಿ ಕೇಂದ್ರ ಸರ್ಕಾರದ ಕಾಯ್ದೆಗಳನ್ನು ವಿರೋಧಿಸಿ ಶುಕ್ರವಾರ ಹಮ್ಮಿಕೊಂಡಿದ್ದ ಬೃಹತ್ ರ‌್ಯಾಲಿ ಮತ್ತು ಜನಜಾಗೃತಿ ಸಭೆಯಲ್ಲಿ ಮಾತನಾಡಿದರು.

    ಮುಸ್ಲಿಮರಿಗೆ ಮುಂದಿನಿಂದ ಚೂರಿ ಹಾಕಿದರೆ, ಹಿಂದುಗಳಿಗೆ ಹಿಂದಿನಿಂದ ಚೂರಿ ಹಾಕುವ ಕೆಲಸ ನಡೆದಿದೆ. ಭಾರತೀಯರೆಲ್ಲರೂ ನರೇಂದ್ರ ಮೋದಿ, ಅಮಿತ್ ಷಾ ಇಬ್ಬರಿಂದ ಕೂಡಿದ ಕೇಂದ್ರ ನೀತಿಯನ್ನು ವಿರೋಧಿಸಬೇಕಾಗಿದೆ ಎಂದರು.

    ಬೀದರ್‌ನ ಜ್ಯೋತಿ ಬಂತೇಜಿ ಶ್ರೀ, ಪ್ರೊ.ಮೆಹಬೂಬ ಶೇಖ, ಸಿದ್ಧಾರ್ಥ ಸಿಂಗೆ, ಕರವೇ ಅಧ್ಯಕ್ಷ ರಮೇಶ ಬದನೂರ, ವಕೀಲ ರವಿ ಯಡಹಳ್ಳಿ ಮಾತನಾಡಿ, ಸಿಎಎ ಇತರ ಕಾಯ್ದೆಗಳ ಮೂಲಕ ಮತದಾರರ ಮೇಲೆ ಕೇಂದ್ರ ಸರ್ಕಾರ ಸವಾರಿ ಮಾಡುತ್ತಿದೆ. ಇದಕ್ಕೆ ನಾವು ಬಿಡಲ್ಲ ಎಂದರು.
    ನಜೀರ ಕಂಗನೊಳ್ಳಿ, ಮೌಲಾನಾಗಳಾದ ಅಹಮ್ಮದ್, ಶಿರಾಜ್, ಆದಂ, ಶಮಶುದ್ದೀನ್, ಮಂಗಳೂರಿನ ಮೈರಾಜಾಖಾನ್, ವಕೀಲ ಅಲಿಬಾಯಿ, ಮುಸ್ಲಿಂ ಸಂಘಟನೆ ಮುಖಂಡ ಮುಶ್ರ್, ಪ್ರವೀಣ ನಾಡಗೌಡ, ಬುಜಬಲಿ ಕೆಂಗಾಲಿ, ರೇವನಯ್ಯ ಹಿರೇಮಠ, ಬಸವರಾಜ ಕೊಕಟನೂರ ಹಾಗೂ ಮುಸ್ಲಿಂ, ದಲಿತ ಸಮುದಾಯಗಳ ಜನರು ಪಾಲ್ಗೊಂಡಿದ್ದರು.

    ಬೃಹತ್ ಮೆರವಣಿಗೆ
    ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆಗೈದ ನಂತರ ಪ್ರತಿಭಟನಾ ಮೆರವಣಿಗೆ ಆರಂಭವಾಯಿತು. ತಮದಡ್ಡಿ ನಾಕಾ, ಯಲ್ಲಮ್ಮನ ದೇವಸ್ಥಾನ, ಐತಿಹಾಸಿಕ ಕೋಟೆ, ಪುರಸಭೆ, ಬಸ್ ನಿಲ್ದಾಣ ಮೂಲಕ ಮಹಾತ್ಮ ಗಾಂಧಿ ಕ್ರೀಡಾಂಗಣಕ್ಕೆ ತಲುಪಿತು. ಡಿವೈಎಸ್‌ಪಿ ಪಾಟೀಲ, ಸಿಪಿಐ ಅಶೋಕ ಸದಲಗಿ, ಪಿಎಸ್‌ಐ ವಿಜಯ ಕಾಂಬಳೆ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಸೂಕ್ತ ಬಂದೋ ಬಸ್ತ್ ಕೈಗೊಂಡಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts