ಮಹಾರಾಷ್ಟ್ರ ಸರ್ಕಾರ ವಜಾಗೊಳಿಸಿ

ತೇರದಾಳ: ಅತೃಪ್ತ ಶಾಸಕರನ್ನು ಭೇಟಿಯಾಗಲು ಮುಂಬೈಗೆ ತೆರಳಿದ್ದ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಹೋಟೆಲ್ ಒಳಗೆ ಬಿಡದ ಮಹಾರಾಷ್ಟ್ರ ಪೊಲೀಸರ ಕ್ರಮ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಪ್ರವೀಣ ನಾಡಗೌಡ, ಪುರಸಭೆ ಮಾಜಿ ಅಧ್ಯಕ್ಷ ಹನುಮಂತ ರೋಡನ್ನವರ, ಮುಖಂಡರಾದ ಶಿವಪ್ಪ ಖವಾಸಿ, ಪಿ.ಎಸ್ ಮಾಸ್ತಿ ಮಾತನಾಡಿ, ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ಸಚಿವ ಶಿವಕುಮಾರ್ ರೂಮ್ ಕಾಯ್ದಿರಿಸಿದ್ದರು. ಆದರೆ, ಮಹಾರಾಷ್ಟ್ರ ಸರ್ಕಾರ ಪೊಲೀಸರನ್ನು ಕಳುಹಿಸಿ ಶಿವಕುಮಾರ್ ಅವರನ್ನು ಹೋಟೆಲ್ ಒಳಗೆ ಬಿಡದಂತೆ ತಡೆದಿದೆ. ಇದು ಬಿಜೆಪಿ ನಾಯಕರ ಕೃತ್ಯವಾಗಿದ್ದು, ಕೂಡಲೇ ಮಹಾರಾಷ್ಟ್ರ ಸರ್ಕಾರವನ್ನು ವಜಾಗೊಳಿಸುವಂತೆ ರಾಷ್ಟ್ರಪತಿಗೆ ವರದಿ ನೀಡಬೇಕು ಎಂದು ರಾಜ್ಯಪಾಲರಿಗೆ ಆಗ್ರಹಿಸಿದರು.

ವಿಶೇಷ ತಹಸೀಲ್ದಾರ್ ಮೆಹಬೂಬಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ನಗರ ಘಟಕದ ಅಧ್ಯಕ್ಷ ಅಶೋಕ ಆಳಗೊಂಡ, ಪುರಸಭೆ ಸದಸ್ಯರಾದ ಶೆಟ್ಟೆಪ್ಪ ಸುಣಗಾರ, ಸುರೇಶ ಕಬಾಡಗಿ, ರುಸ್ತುಂ ನಿಪ್ಪಾಣಿ, ಗೌತಮ ರೋಡಕರ, ಪ್ರಭು ಗಸ್ತಿ, ರಾಜೇಸಾಬ ನಗಾರ್ಜಿ, ಭೀಮಗೊಂಡ ಸದಲಗಿ, ಮಲ್ಲಿನಾಥ ಬೋಳಗೊಂಡ, ಶಿವಾನಂದ ನಡುವಿನಕೇರಿ, ಮೀರಾಸಾಬ ತಾಂಬೊಳಿ, ನೇಮಣ್ಣ ಸಾವಂತನವರ, ಬಾಬು ಸಾವಂತನವರ, ಸಾವಂತ ಮಾಂಗ, ಲಕ್ಷ್ಮಣ ಮಾಸ್ತಿ, ಅಲ್ಲಪ್ಪ ಮೇಗಾಡಿ, ಕುಮಾರ ಪಾತ್ರೋಟ, ಜಿನ್ನಪ್ಪ ಹಿಪ್ಪರಗಿ ಇತರರು ಇದ್ದರು.

Leave a Reply

Your email address will not be published. Required fields are marked *