ಖಾಲಿ ಕೊಡ ಹಿಡಿದು ಪುರಸಭೆಗೆ ಮುತ್ತಿಗೆ

ತೇರದಾಳ: ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ಪಟ್ಟಣದ 3,5,6,7ನೇ ವಾರ್ಡ್ ನೂರಾರು ಮಹಿಳೆಯರು ಖಾಲಿ ಕೊಡಗಳೊಂದಿಗೆ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು.

ಅಧಿಕಾರಿಗಳಿಗೆ ಘೇರಾವ್ ಹಾಕಿದ ಮಹಿಳೆಯರು, ನಮ್ಮ ವಾರ್ಡ್‌ನಲ್ಲಿ ಒಂದೂ ಬೋರ್ ಇಲ್ಲ, ನೀರಿಗಾಗಿ ಪರದಾಡುವಂತಾಗಿದೆ. ಒಮ್ಮೆಯಾದರೂ ನಮ್ಮ ವಾರ್ಡ್‌ಗೆ ಬಂದು ಸಮಸ್ಯೆ ಕೇಳಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು.

ಆರು ತಿಂಗಳಿಂದ ಅಕಾರಿಗಳು ತೇರದಾಳದತ್ತ ಬಾರದೆ ನಿರ್ಲಕ್ಷ ವಹಿಸಿದ್ದಾರೆ. ಸಾರ್ವಜನಿಕರು ನೀರಿಗಾಗಿ ನಿತ್ಯ ಪರದಾಡುವಂತಾಗಿದೆ. ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳು ಕೂಡ ಆಮೆಗತಿಯಲ್ಲಿ ಸಾಗಿವೆ. ಇದಕ್ಕೆ ಅಕಾರಿಗಳ ನಿರ್ಲಕ್ಷವೇ ಕಾರಣ ಎಂದು ದೂರಿದರು.

ಮುಖ್ಯಾಧಿಕಾರಿ ಮಹಾವೀರ ಬೊರೆನ್ನವರ ಮಾತನಾಡಿ, ಐದನೇ ವಾರ್ಡ್‌ನಲ್ಲಿ ಎರಡು ಬೋರ್‌ವೆಲ್ ಹಾಕಿಸಲು ಕ್ರಿಯಾಯೋಜನೆ ರೂಪಿಸಲಾಗಿದೆ. ಶೀಘ್ರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ವಾರ್ಡ್‌ಗಳ ನಿವಾಸಿಗಳು, ಪುರಸಭೆ ಸದಸ್ಯರು, ಪೊಲೀಸ್ ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *