ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಕಾಪಾಡಿ

ತೇರದಾಳ: ಆಸ್ಪತ್ರೆ ವಿಶಾಲ ಸುಸಜ್ಜಿತ ಕಟ್ಟಡ ಹೊಂದಿದ್ದರೂ ಸ್ವಚ್ಛತೆ ಕಾಯ್ದುಕೊಂಡಿಲ್ಲ. ಬೆಡ್‌ಸೀಟ್‌ಗಳನ್ನು ಮೂಲೆಯಲ್ಲಿಡದೆ ಬೆಡ್‌ಗಳಿಗೆ ಬಳಸಿಕೊಳ್ಳಬೇಕು. ರೋಗಿಗಳೊಂದಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಬೇಕು ಎಂದು ವೈದ್ಯಾಧಿಕಾರಿಗೆ ರಬಕವಿ/ಬನಹಟ್ಟಿ ತಹಸೀಲ್ದಾರ್ ಜಿ. ರಾಘವೇಂದ್ರ ತಾಕೀತು ಮಾಡಿದರು.

ಪಟ್ಟಣದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ವಿಶೇಷ ತಹಸೀಲ್ದಾರ್ ಮೆಹಬೂಬಿ ಹಾಗೂ ತಂಡದೊಂದಿಗೆ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಆಸ್ಪತ್ರೆಯ ನೀರಿನ ಸಮಸ್ಯೆ ಹೋಗಲಾಡಿಸಲು ಸಿಎಸ್ ಅವರೊಂದಿಗೆ ಮಾತನಾಡಿ ಬೋರ್‌ವೆಲ್ ಒದಗಿಸಿಕೊಡುವ ಪ್ರಯತ್ನ ಮಾಡಲಾಗುವುದು. ವೈದ್ಯರ ಕೊರತೆ ಬಗ್ಗೆ ಇಲಾಖೆ ಗಮನಕ್ಕೆ ತರಲಾಗುವುದು ಎಂದು ಸ್ಥಳೀಯರಿಗೆ ತಹಸೀಲ್ದಾರ್ ಜಿ.ರಾಘವೇಂದ್ರ ತಿಳಿಸಿದರು. ಶಿರಸ್ತೆದಾರ ಎಸ್.ಬಿ. ಕಾಂಬಳೆ, ಗ್ರಾಮಲೆಕ್ಕಾಧಿಕಾರಿ ಮಠಪತಿ ಇತರರಿದ್ದರು.

Leave a Reply

Your email address will not be published. Required fields are marked *