ತೇರದಾಳ: ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆಗಳಡಿ ಸರ್ಕಾರ ಅನುದಾನ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಅನುದಾನ ತಂದು ಮಾದರಿ ಕ್ಷೇತ್ರವನ್ನಾಗಿ ಮಾಡುವ ಸಂಕಲ್ಪ ಮಾಡಿರುವುದಾಗಿ ಶಾಸಕ ಸಿದ್ದು ಸವದಿ ಹೇಳಿದರು.
ಪಟ್ಟಣದಲ್ಲಿ ನಗರೋತ್ಥಾನ ಮೂರನೇ ಹಂತ ಹಾಗೂ ಪುರಸಭೆ ಎಸ್‌ಎ್ಸಿ ಯೋಜನೆಯಡಿ 1.24 ಕೋಟಿ ರೂ. ಅನುದಾನದಡಿ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ನಗರೋತ್ಥಾನ ಯೋಜನೆಯಡಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಶೌಚಗೃಹ, ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಎಸ್‌ಎಫ್‌ಸಿ ಯೋಜನೆಯಡಿ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಾಮಗಾರಿ ನಡೆಸಲಾಗುವುದು ಎಂದು ತಿಳಿಸಿದರು.
ಪುರಸಭೆ ಸದಸ್ಯ ಕುಮಾರ ಸರಿಕರ, ವಿನಾಯಕ ಬಂಕಾಪುರ, ಸಂತೋಷ ಜಮಖಂಡಿ, ವೀರಭದ್ರ ಮಂಗಸೂಳಿ, ಶಂಕರ ಕುಂಬಾರ, ಪ್ರಭಾಕರ ಬಾಗಿ, ವಿನಾಯಕ ಬಂಕಾಪುರ, ಕಾಶಿನಾಥ ರಾಠೋಡ, ಸಂಗಮೇಶ ಕಾಲತಿಪ್ಪಿ, ಸತ್ಯಪ್ಪ ಚವಜ, ಈರಣ್ಣ ದಡ್ಡಿ, ಯಲ್ಲಪ್ಪ ಜೋಗಿ, ಹಾಫೀಜ್ ಮೌಲಾಅಲಿ, ಸದಾಶಿವ ಹೊಸಮನಿ, ರಮೇಶ ಧರೆನ್ನವರ, ಸುರೇಶ ಪರೀಟ, ಪ್ರಕಾಶ ಚಿಂಚಖಂಡಿ, ದಶರಥ ಅಕ್ಕೆನ್ನವರ, ಶಂಕರ ಕುಂಬಾರ ಸೇರಿ ಇತರರು ಇದ್ದರು.