ಯಲ್ಲಾಪುರ: ತಾಲೂಕಿನ ಮಾಗೋಡ ಹಾಲು ಉತ್ಪಾದಕರ ಸಹಕಾರಿ ಸಂಘದ ದಶಮಾನೋತ್ಸವ ಮಂಗಳವಾರ ಜರುಗಿತು.
ಗೋ ಪೂಜೆ ಮಾಡುವ ಮೂಲಕ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರ್ಯಕ್ರಮ ಉದ್ಘಾಟಿಸಿದರು. ಬೇಡ್ತಿ ಯೋಜನೆ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಓಂಕಾರ ಭಟ್ಟ ಕಿರಕುಂಭತ್ತಿ ಅವರನ್ನು ಸನ್ಮಾನಿಸಲಾಯಿತು.
ಹಾಲು ಉತ್ಪಾದಕ ನಾರಾಯಣ ಭಟ್ಟ ದೇವದಮನೆ ದಂಪತಿಯನ್ನು ಪುರಸ್ಕರಿಸಲಾಯಿತು. ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ, ನಿರ್ದೇಶಕರಾದ ಸುರೇಶ್ಚಂದ್ರ ಹೆಗಡೆ, ಶಂಕರ ಹೆಗಡೆ, ಪಶು ಸಂಗೋಪನಾ ಇಲಾಖೆಯ ಡಾ.ಸುಬ್ರಾಯ ಭಟ್ಟ, ಮಾಗೋಡ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ನರಸಿಂಹ ಭಟ್ಟ ಕುಂಕಿಮನೆ, ಉಪಾಧ್ಯಕ್ಷ ಗಣಪತಿ ಪಟಗಾರ, ನಿರ್ದೇಶಕರಾದ ವೆಂಕಟರಮಣ ಭಟ್ಟ ಕಿರಕುಂಭತ್ತಿ, ವೆಂಕಟರಮಣ ಭಾಗ್ವತ ಹೆಬ್ಬಾರಮನೆ, ಚಂದ್ರಶೇಖರ ಭಟ್ಟ ಕಂಚಿನಮನೆ, ಶ್ರೀಧರ ಹೆಗಡೆ ತೊಂಡೆಕೆರೆ, ಶ್ರೀಧರ ಹೆಗಡೆ ಹೆಗ್ಗುಂಬಳಿ, ನಾರಾಯಣ ಹೆಗಡೆ ಹಾದಿಮನೆ, ರಮೇಶ ನಾಯ್ಕ, ನರಸಿಂಹ ಸಿದ್ದಿ, ಲಕ್ಷ್ಮೀ ಭಟ್ಟ, ಲಲಿತಾ ಭಟ್ಟ, ಮುಖ್ಯ ಕಾರ್ಯನಿರ್ವಾಹಕ ವೇಲು ಮುರುಗನ್, ಇತರರಿದ್ದರು. ಹೈನುಗಾರಿಕೆ ಕುರಿತಾದ ವಿಚಾರಗೋಷ್ಠಿ ನಡೆಯಿತು.
ರಾತ್ರಿ ಪ್ರಸಿದ್ಧ ಕಲಾವಿದರಿಂದ ಚಿತ್ರಾಕ್ಷಿ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಂಡಿತು.