ಆಡು ಮುಟ್ಟದ ಸೊಪ್ಪಿಲ್ಲ ಅನ್ನೋ ಮಾತು ನಿಜವಾಯಿತು; ಇಡೀ ದ್ವೀಪವೊಂದು ಬರಡಾಯ್ತು ನೋಡಿ..

ಸಮೋತ್ರಾಕಿ(ಗ್ರೀಸ್​): ಓಕ್​ ಮತ್ತು ಚೆಸ್​ನಟ್ ಮರಗಳಿಂದ ಕೂಡಿರುವ ಸಮೃದ್ಧವಾದ​ ಅರಣ್ಯ. ಕಾಡಿನ ನಡುವೆ ಧುಮ್ಮಿಕ್ಕುವ ಜಲಪಾತ ಹಾಗೂ ತಣ್ಣಗಿನ ಕರಾವಳಿ ಪ್ರದೇಶ. ಇವೆಲ್ಲವೂ ಕಂಡುಬರುವುದು ಪ್ರಕೃತಿಯನ್ನೇ ಮೈಗೆ ಹೊದ್ದುಕೊಂಡು ಕುಳಿತಿರುವ ಸುಂದರ ಸಮೋತ್ರಾಕಿ ದ್ವೀಪದಲ್ಲಿ. ಗ್ರೀಕ್​ನ ಇತರೆ ದ್ವೀಪಗಳಿಗೆ ಹೋಲಿಸಿದರೆ, ಇದು ಅತ್ಯಂತ ಜೀವವೈವಿಧ್ಯತೆಯನ್ನು ಹೊಂದಿದ್ದ ತಾಣವಾಗಿದ್ದು, ಇಂದು ಈ ದ್ವೀಪ ಬಿಕ್ಕಟ್ಟಿನಲ್ಲಿದೆ. ಅದಕ್ಕೆ ಕಾರಣ ಮೇಕೆಯೆಂದು ತಿಳಿದು ಸಾಕಷ್ಟು ಮಂದಿ ಅಚ್ಚರಿಗೆ ಒಳಗಾಗಿದ್ದಾರೆ.

ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಈ ಸುಂದರ ದ್ವೀಪದಲ್ಲಿ ಈಗ ಯಾವುದೇ ಹಾಲಿಡೇ ಪ್ಯಾಕೇಜ್​ಗಳಿಲ್ಲ. ಪ್ರಮುಖ ಪ್ರದೇಶವಾದ ಇಲ್ಲಿಗೆ ಯಾವುದೇ ವಿಶ್ವಾಸಾರ್ಹ ದೋಣಿ ಸೇವೆಯೂ ಇಲ್ಲ. ಈ ದ್ವೀಪದ ಆಡಳಿತ ಮಂಡಳಿ ಯುನೆಸ್ಕೋ(UNESCO)ದ ಜೈವಿಕ ಮಂಡಲ ಮೀಸಲು ಸ್ಥಿತಿ ಸಾಧಿಸುವ ಭರವಸೆಯನ್ನು ಹೊಂದಿದೆ. ಆದರೆ, ಇಂತಹ ದ್ವೀಪ ಇಂದು ತೃಪ್ತಿಹೊಂದದ ಆಕ್ರಮಣಕಾರನಿಂದ ನಿರಂತರ ದಾಳಿಗೆ ಒಳಗಾಗುತ್ತಾ, ತನ್ನ ಮೂಲರೂಪವನ್ನು ಕಳೆದುಕೊಳ್ಳುವ ಆತಂಕ ಎದುರಿಸುತ್ತಿದೆ.

ಈ ಆತಂಕಕ್ಕೆ ಕಾರಣ ಮೇಕೆಗಳಾಗಿದೆ. ಮನುಷ್ಯರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ಅರೆಕಾಡು ಮೇಕೆಗಳಿಂದಾಗಿ ದ್ವೀಪಕ್ಕೆ ಕಂಟಕ ಎದುರಾಗಿದೆ. ಈ ಮೇಕೆಗಳು ತಮ್ಮ ಮೇವಿನ ವ್ಯಾಪ್ತಿಯನ್ನು ವಿಸ್ತರಿಸಿರುವ ಪರಿಣಾಮದಿಂದಾಗಿ ಸಮೋತ್ರಾಕಿ ದ್ವೀಪ ಇಂದು ತಗ್ಗು ದಿಬ್ಬಗಳಿಂದ ಕೂಡಿದ ಚಂದ್ರನ ಅಂಗಳದಂತೆ ಬದಲಾಗಿದ್ದು, ಬಣಗುಡುತ್ತಿದೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಮಾತಿನಂತೆ ಇಡೀ ದ್ವೀಪದಲ್ಲಿರುವ ಹಸಿರನ್ನು ತನ್ನ ಹೊಟ್ಟೆಗೆ ಹಾಕಿಕೊಂಡಿದೆ.

ಈ ದ್ವೀಪದ ಜೀವಪರಿಸರ ಮತ್ತು ಆರ್ಥಿಕತೆಯನ್ನು ಉಳಿಸುವ ಸಲುವಾಗಿ ದಶಕಗಳ ಕಾಲದ ಪ್ರಯತ್ನದ ನಂತರ ಪರಿಣಿತರು ಹಾಗೂ ಸ್ಥಳೀಯರು 21ನೇ ಶತಮಾನದ ಪರಿಹಾರ ಮಾರ್ಗ ಕಂಡಕೊಳ್ಳಲು ಜತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಈವರೆಗೂ ಪರಿಹಾರ ಏನೆಂಬುದು ಗೊತ್ತಾಗಿಲ್ಲ. ಈಗಾಗಲೇ ಅರಣ್ಯಕ್ಕೆ ಸಾಕಷ್ಟು ಹಾನಿಯಾಗಿದ್ದು, ಮುಂದಿನ ದಿನಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ ಜೀವಪರಿಸರಕ್ಕೆ ಅಪಾಯವಾಗಲಿದೆ.

ಅರೆಕಾಡು ಮೇಕೆಗಳು ದ್ವೀಪದ ಸುತ್ತಾ ಓಡಾಡಿ ಕಾಡನ್ನು ನಾಶಪಡಿಸುತ್ತಿವೆ. ಬೆಟ್ಟ ಗುಡ್ಡಗಳ ಮೇಲೆ ಓಡಾಡಿ ಬರಿದು ಮಾಡಿರುವ ಮೇಕೆಗಳು ಮೇವಿಗಾಗಿ ಮರಗಳ ಮೇಲೆಯೂ ಏರಿದೆ. ನಿರಂತರ ಮೇಯುವಿಕೆಯಿಂದ ದ್ವೀಪದಲ್ಲಿ ಬಿಕ್ಕಟ್ಟಿನ ಸ್ಥಿತಿ ಎದರಾಗಿದ್ದು, ಅಲ್ಲಿನ ಆಡಳಿತ ವರ್ಗವನ್ನು ಚಿಂತೆಗೀಡುಮಾಡಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *