ಹತ್ತು ತಿಂಗಳ ಮಗು ಅನುಮಾನಾಸ್ಪದ ಸಾವು; ತಾಯಿ-ತಂದೆಯಿಂದ ಪರಸ್ಪರ ಕೊಲೆ ಆರೋಪ!

ಧಾರವಾಡ: ಹತ್ತು ತಿಂಗಳ ಮಗುವೊಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ತಾಯಿ-ತಂದೆಯಿಂದ ಪರಸ್ಪರ ಕೊಲೆ ಆರೋಪ ವ್ಯಕ್ತವಾಗಿದೆ. ಧಾರವಾಡ ತಾಲೂಕಿನ ಗೊಂಗಡಿಕೊಪ್ಪ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ತನ್ವೀರ್ ಅಗಸಿಮನಿ ಎಂಬ ಹತ್ತು ತಿಂಗಳ ಮಗು ಸಾವಿಗೀಡಾಗಿದೆ. ತಂದೆ ಮಹಮದ್​ ಅಲಿ ಹಾಗೂ ತಾಯಿ ಸಮ್ರೀನ್​ ಮಗುವಿನ ಸಾವಿನ ಕುರಿತಂತೆ ಪರಸ್ಪರ ಆರೋಪ ಹೊರಿಸುತ್ತಿದ್ದಾರೆ. ನಿನ್ನೆ ಏಕಾಏಕಿ ಅಸ್ವಸ್ಥಗೊಂಡಿದ್ದ ಮಗುವನ್ನು ಜಿಲ್ಲಾಸ್ಪತ್ರೆಗೆ ತರುವಷ್ಟರಲ್ಲಿ ಅದು ಮೃತಪಟ್ಟಿತ್ತು. ಮಗುವಿನ ಶವದಿಂದ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ವಿಷಪ್ರಾಶನ ಮಾಡಿಸಿರುವ ಶಂಕೆಯೂ ಮೂಡಿದೆ. ಇದನ್ನೂ … Continue reading ಹತ್ತು ತಿಂಗಳ ಮಗು ಅನುಮಾನಾಸ್ಪದ ಸಾವು; ತಾಯಿ-ತಂದೆಯಿಂದ ಪರಸ್ಪರ ಕೊಲೆ ಆರೋಪ!