25 ಕಾರ್ಮಿಕರು ಪ್ರಯಾಣಿಸುತ್ತಿದ್ದ ಟೆಂಪೊ ಪಲ್ಟಿ: ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಅಪಘಾತ

ಉಡುಪಿ: ಕರಾವಳಿಯಲ್ಲಿ ನಿನ್ನೆ ರಾತ್ರಿಯಷ್ಟೇ ಖಾಸಗಿ ಬಸ್ಸೊಂದು ಪಲ್ಟಿಯಾಗಿದ್ದು, ಇಂದು ಟೆಂಪೊ ಕೂಡ ಪಲ್ಟಿಯಾಗಿರುವ ಪ್ರಕರಣ ಸಂಭವಿಸಿದೆ. ಹದಿನೈದು ಜನ ಕಾರ್ಮಿಕರು ಪ್ರಯಾಣಿಸುತ್ತಿದ್ದ ಈ ಟೆಂಪೊ ಅಪಘಾತಕ್ಕೀಡಾಗಿ ಮಗುಚಿ ಬಿದ್ದಿದೆ. ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-66ರ ಬೈಕಾಡಿ-ಬಿ.ಸಿ.ರೋಡ್​ನಲ್ಲಿ ಈ ಅಪಘಾತ ಸಂಭವಿಸಿದೆ. ಈ ಟೆಂಪೊದಲ್ಲಿ ಕಾಂಕ್ರೀಟ್ ಕೆಲಸಗಾರರನ್ನು ತುಂಬಿಕೊಂಡಿದ್ದು, ಅಪಘಾತದಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಮಾತ್ರವಲ್ಲ, ಟೆಂಪೊದಲ್ಲಿದ್ದ ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ಖಾಸಗಿ ಬಸ್​ ಪಲ್ಟಿ, ಒಬ್ಬನ ಸ್ಥಿತಿ ಗಂಭೀರ; ಮದುವೆಗೆ ಹೊರಟಿದ್ದ 15ಕ್ಕೂ … Continue reading 25 ಕಾರ್ಮಿಕರು ಪ್ರಯಾಣಿಸುತ್ತಿದ್ದ ಟೆಂಪೊ ಪಲ್ಟಿ: ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಅಪಘಾತ