ಸಿರಿಗೇರಿ: ಗ್ರಾಮದ ಮೂರನೇ ವಾರ್ಡ್‌ನ ಶ್ರೀ ಸುಂಕ್ಲಮ್ಮ ಹಾಗೂ ಶ್ರೀ ಮಲೆಮ್ಮ ದೇವಸ್ಥಾನದ ಗೋಪುರಕ್ಕೆ ಬುಧವಾರ ಕಲಶಾರೋಹಣ ಮಾಡಲಾಯಿತು. ಪುರೋಹಿತರಾದ ಎಚ್.ಎಂ ಕೊಟ್ರೇಶ್ ಸ್ವಾಮಿ ಸಮ್ಮುಖದಲ್ಲಿ ರುದ್ರಾಭಿಷೇಕ, ಕುಂಕುಮಾರ್ಚನೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಶಾಸಕ ಬಿ.ಎಂ. ನಾಗರಾಜ ಭೇಟಿ ನೀಡಿ ದೇವಿ ದರ್ಶನ ಪಡೆದರು. ಮುತ್ತೈದೆಯರು .ಳಸ ಹಾಗೂ ಡೊಳ್ಳು ಮೇಳದೊಂದಿಗೆ ಗಂಗೆ ಸ್ಥಳಕ್ಕೆ ಪೂಜೆ ಸಲ್ಲಿಸಿದರು. ಪ್ರಮುಖರಾದ ವೆಂಕಟೇಶ, ಶ್ರೀನಿವಾಸ್, ಕೆ. ರಾಘವೇಂದ್ರ, ಅನ್ವರ್ ಬಾಷಾ, ಕೆ.ಬಸವರಾಜ, ಸೋಮೇಶ, ನಾಗರಾಜ, ಗೋಡೆ ಚಿನಪ್ಪ, ಆಲಂ ಬಾಷಾ, ಎನ್.ಕುಮಾರ್, ಹಳ್ಳಿಮರದ ರುದ್ರಪ್ಪ, ವಸ್ತ್ರದ ಮಂಜು, ಸಲೀಂ, ದಾನಪ್ಪ, ಶಿವಪ್ಪ, ತಿಮ್ಮಯ್ಯ ಇತರರಿದ್ದರು.