ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆ ದಿನ ಜನಜಂಗುಳಿಯ ನಡುವೆ ಲಾಡು ಮಾರಾಟ ಕೇಂದ್ರದಲ್ಲಿ ಭಕ್ತನೊಬ್ಬನಿಗೆ ಲಾಡು ಚೀಲ ಕೊಡುವ ಬದಲು ಹಣದ ಚೀಲ ಕೊಟ್ಟು ಕಳುಹಿಸಿ ನೌಕರನೊಬ್ಬ ಎಡವಟ್ಟು ಮಾಡಿಕೊಂಡ ಪ್ರಸಂಗ ನಡೆದಿದೆ.
ಚಾಮರಾಜನಗರದ ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟದ ದೇವಸ್ಥಾನದಲ್ಲಿ ಈ ಪ್ರಸಂಗ ನಡೆದಿದೆ. ಸಿಬ್ಬಂದಿಯ ಕಣ್ತಪ್ಪಿನಿಂದಾಗಿ ಪ್ರಸಾದದ ಜೊತೆಗೆ 2 ಲಕ್ಷ ರೂಪಾಯಿ ಇದ್ದ ಬ್ಯಾಗ್ ಕೂಡ ಭಕ್ತರೊಬ್ಬರ ಪಾಲಾಗಿದೆ. ಲಾಡು ಪ್ರಸಾದ ಇಟ್ಟಿದ್ದ ಬ್ಯಾಗ್ ಸಮೀಪವೇ ಹಣದ ಚೀಲ ಇಡಲಾಗಿತ್ತು. ಅದರ ಬಗ್ಗೆ ಗೊತ್ತಿಲ್ಲದೆ ಪ್ರಸಾದದ ಪ್ಯಾಕೆಟ್ ಜತೆಗೆ ಹಣದ ಚೀಲವನ್ನು ಸಿಬ್ಬಂದಿ ನೀಡಿದ್ದಾನೆ.
ಇದನ್ನೂ ಓದಿ: ಲಾಡು ಪ್ರಸಾದದ ಜತೆಗೆ 2 ಲಕ್ಷ ರೂಪಾಯಿ ಭಕ್ತನ ಪಾಲು: ಮಾದಪ್ಪನ ಬೆಟ್ಟದಲ್ಲಿ ಘಟನೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಾಧಿಕಾರದ ನೌಕರರ ಸಂಘ ಸಂತ್ರಸ್ತ ನೌಕರನ ನೆರವಿಗೆ ಧಾವಿಸಿದೆ. ನೌಕರನ ಕೈ ತಪ್ಪಿನಿಂದ 2.94 ಲಕ್ಷ ರೂ. ನೀಡಿದ ಹಿನ್ನಲೆಯಲ್ಲಿ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ನೌಕಕರ ಸಂಘ ನೌಕರನಿಗೆ ಸಹಾಯ ಹಸ್ತ ನೀಡಿದ್ದು, ಶುಕ್ರವಾರ ಸಂಜೆ 1 ಲಕ್ಷ ರೂ. ಚೆಕ್ ಪ್ರಾಧಿಕಾರದ ಕಾರ್ಯದರ್ಶಿಗೆ ಕಾತ್ಯಾಯಿನಿ ದೇವಿ ಅವರಿಗೆ ಹಸ್ತಾಂತರಿಸಿದೆ.
ಆಭರಣದ ಅಂಗಡಿ ಮಾಲೀಕನ ಪತ್ನಿಯ ಕೊಲೆ; ಮನೆಯಲ್ಲಿ ಒಂಟಿಯಾಗಿದ್ದಾಗ ನಡೆಯಿತು ಹತ್ಯೆ..