
ದೇವಾಲಯದ ಬ್ರಹ್ಮಕಲಶಕ್ಕೆ ಸಮಯವಾಗಿದ್ದು, ಜೀರ್ಣೋದ್ದಾರ ಕಾರ್ಯಕ್ಕಾಗಿ ೨೦ ಕೋಟಿ ರೂ. ಸಂಗ್ರಹಿಸುವ ಅಗತ್ಯ ಇದೆ. ೨ ವರ್ಷದೊಳಗೆ ಬ್ರಹ್ಮಕಲಶಕ್ಕೆ ಅಣಿಯಾಗಲು ಜೀರ್ಣೋದ್ಧಾರ ಸಮಿತಿ ಮಾಡಿದ್ದು, ಧಾರ್ಮಿಕ ದತ್ತಿ ಇಲಾಖೆಯಲ್ಲಿ ಅಂತಿಮವಾಗಿ ಸದಸ್ಯರಿಗೆ ಮಾಹಿತಿ ರವಾನೆಯಾಗಬೇಕು. ಜುಲೈ ೬ರಂದು ಜೀರ್ಣೋದ್ಧಾರ ಸಮಿತಿ ಸಭೆಯನ್ನು ಕರೆಯಬೇಕು. ಬ್ರಹ್ಮಕಲಶಕ್ಕೂ ಮೊದಲು ಮಾಸ್ಟರ್ ಪ್ಲ್ಯಾನ್ ಕಾರ್ಯಗತವಾಗಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಸಂಬಂಧಿಸಿ ಶನಿವಾರ ರಾತ್ರಿ ನಡೆದ ಸಭೆಯಲ್ಲಿ ಮಾತನಾಡಿದರು.
ರಾಜ್ಯ ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಽಸಿದ ಇಂಜಿನಿಯರ್‌ಗಳು ದೇವಾಲಯಕ್ಕೆ ಬಂದಿದ್ದು ಮಾಸ್ಟರ್ ಪ್ಲ್ಯಾನ್ ಅವರ ಬಳಿ ಇದೆ. ಅಲ್ಲಿಂದ ೧೫ ದಿನಗಳೊಳಗೆ ತರಿಸಿ, ಸರ್ಕಾರಕ್ಕೆ ಕಳುಹಿಸಬೇಕು. ದೇವಸ್ಥಾನ ಅಭಿವೃದ್ಧಿಗೆ ಸಂಬಂಧಿಸಿ ಹಲವು ಸಭೆ ನಡೆದಿದ್ದು, ಕೆಲಸ ಕಾರ್ಯಾರಂಭವಾಗಿಲ್ಲ. ಕಾಮಗಾರಿ ಅಗತ್ಯ ಪ್ರಕ್ರಿಯೆಗಳಿಗೆ ಚಾಲನೆ ನೀಡಿ, ಶೀಘ್ರ ಕೆಲಸ ಆಗಬೇಕು ಎಂದರು.
ಪುಡಾ ಅಧ್ಯಕ್ಷ ಅಮಲ ರಾಮಚಂದ್ರ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ಮಹಾಬಲ ರೈ, ವಿನಯ ಸುವರ್ಣ, ನಳಿನಿ ಶೆಟ್ಟಿ, ಕೃಷ್ಣವೇಣಿ, ಸುಭಾಷ್ ರೈ, ಈಶ್ವರ್ ಬೆಡೆಕರ್, ಅರ್ಚಕ ವಸಂತ ಕುಮಾರ್ ಕೆದಿಲಾಯ, ಪುಡಾ ಸದಸ್ಯ ನಿಹಾಲ್ ಪಿ.ಶೆಟ್ಟಿ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.
ಕಾಮಗಾರಿಯಲ್ಲಿ ಕಳಪೆ
ಕಳೆದ ವ್ಯವಸ್ಥಾಪನಾ ಸಮಿತಿ ಅವಧಿಯಲ್ಲಿ ನಡೆದ ಅನ್ನಛತ್ರ ಕಟ್ಟಡದ ಛಾವಣಿಯಿಂದ ಸಿಮೆಂಟಿನ ತುಂಡುಗಳು ಬೀಳುತ್ತಿದ್ದು, ಭಕ್ತರಿಗೆ ಅಪಾಯವಾಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಹಿಂದಿನ ಅವಽಯ ಅಧ್ಯಕ್ಷರಲ್ಲಿ ಪ್ರಶ್ನಿಸಿದರೆ ಕೆಲಸ ಮಾಡಿದವರಿಂದ ೯ ಲಕ್ಷ ರೂ. ಬರಬೇಕಾಗಿದೆ ಎಂದು ತಿಳಿಸಿದ್ದಾರೆ. ಕೆಲಸ ಮಾಡಿದವರಲ್ಲಿ ಈ ಬಗ್ಗೆ ಕೇಳುವಾಗ ಕಾಮಗಾರಿಯ ೧೬ ಲಕ್ಷ ರೂ. ಇನ್ನು ಪಾವತಿಯಾಗಿಲ್ಲ ಎನ್ನುತ್ತಿದ್ದಾರೆ. ಅಧ್ಯಕ್ಷರು ಕೆಲಸ ಮಾಡಿದವರ ವಿರುದ್ಧ ದೂರು ನೀಡಲು ತಿಳಿಸುತ್ತಿದ್ದು, ಕಳಪೆ ಕಾಮಗಾರಿ ಜವಾಬ್ದಾರಿ ಹೊರುವವರಿಲ್ಲ. ಸದ್ಯ ಗುತ್ತಿಗೆದಾರ ದುರಸ್ತಿ ಮಾಡುತ್ತಿದ್ದಾರೆಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ತಿಳಿಸಿದರು.
ವಿವಿಧ ತೀರ್ಮಾನ
ದೇವಾಲಯದ ವಠಾರದಲ್ಲಿರುವ ಅಯ್ಯಪ್ಪ ಗುಡಿಯ ಸ್ಥಳದಲ್ಲಿ ರಥ ನಿಲುಗಡೆ ಆಗಬೇಕು ಎಂಬ ಅಂಶ ಕಂಡುಬಂದಿದೆ. ಅಲ್ಲಿರುವ ನಾಗನ ಸಾನ್ನಿಧ್ಯವನ್ನು ದೇವಾಲಯದ ಗದ್ದೆಯಲ್ಲಿರುವ ಮೂಲ ನಾಗನ ಸಾನ್ನಿಧ್ಯಕ್ಕೆ ಸ್ಥಳಾಂತರಿಸುವಿಕೆ ಬಗ್ಗೆ ಪ್ರಶ್ನಾ ಚಿಂತನೆಯಲ್ಲಿ ಅಭಿಪ್ರಾಯ ಸಂಗ್ರಹಿಸಿ ಅದರಂತೆ ಮುನ್ನಡೆಯಲು ತೀರ್ಮಾನಿಸಲಾಯಿತು. ಮಡಿವಾಳಕಟ್ಟೆ ಸ್ಮಶಾನ ಸಮೀಪ ಖಾಸಗಿ ಜಾಗ ಇದ್ದು, ಅದರ ಖರೀದಿಗೆ ಮಾಲೀಕರ ಜತೆ ಚರ್ಚಿಸುವಂತೆ ಬಗ್ಗೆ ಹಾಗೂ ದೇವಾಲಯದ ಶಿವನ ಮೂರ್ತಿ ಇರುವ ಜಾಗದಲ್ಲಿ ಖಾಸಗಿ ಜಾಗ ಖರೀದಿಸಿ ವೆಟ್‌ವೆಲ್ ನಿರ್ಮಾಣ ಮಾಡುವ ಬಗ್ಗೆ ನಿರ್ಧರಿಸಲಾಯಿತು.