ಟಿಡಿಪಿ ಸಂಸದ ಶಿವಪ್ರಸಾದ್​ ‘ಹಿಟ್ಲರ್​’ ವೇಷ ಧರಿಸಿ ಸಂಸತ್​ ಭವನಕ್ಕೆ ಬಂದಿದ್ದೇಕೆ?

ನವದೆಹಲಿ: ತೆಲುಗು ದೇಶಂ ಪಕ್ಷದ ಸಂಸದ ನರಮಳ್ಳಿ ಶಿವಪ್ರಸಾದ್​ ಅವರು ಜರ್ಮನಿಯ ಸರ್ವಾಧಿಕಾರಿಯಾಗಿದ್ದ ಅಡಾಲ್ಫ್​ ಹಿಟ್ಲರ್​ ವೇಷ ತೊಟ್ಟು ಗುರುವಾರ ಸಂಸತ್​ ಭವನಕ್ಕೆ ಆಗಮಿಸಿದ್ದರು.

ಇವರು ಇದೇ ಮೊದಲ ಬಾರಿಗಲ್ಲ ಹೀಗೆ ಬಂದಿದ್ದು. ಈ ಹಿಂದೆಯೂ ಹಲವು ವೇಷಭೂಷಣ ಧರಿಸಿ ಸಂಸತ್​ ಭವನಕ್ಕೆ ಆಗಮಿಸಿದ್ದರು. ಶಿವಪ್ರಸಾದ್​ ಹೀಗೆ ವಿಶಿಷ್ಟ ವೇಷಭೂಷಣಗಳೊಂದಿಗೆ ಸಂಸತ್​ ಭವನಕ್ಕೆ ಆಗಮಿಸುತ್ತಿರುವುದು ಪ್ರತಿಭಟಿಸುವುಕ್ಕೋಸ್ಕರ. ಹೌದು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಶಿವಪ್ರಸಾದ್​ ಅವರು ಹೀಗೆ ವಿಶಿಷ್ಟ ವಿಧಾನದಲ್ಲಿ ಪ್ರತಿಭಟಿಸಿ ಗಮನ ಸೆಳೆಯುತ್ತಿದ್ದಾರೆ.

ಮೂಲತಃ ಚಲನಚಿತ್ರ ನಟರಾಗಿದ್ದ ಶಿವಪ್ರಸಾದ್​ ಅವರು ಈ ಮೊದಲೂ ನಾರದ ಮುನಿ, ಸತ್ಯಸಾಯಿ, ರಾಮನ ವೇಷ ಧರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರು ಸಂಸತ್​ ಭವನದ ಮುಂದೆ ಪ್ರತಿಭಟನೆ ನಡೆಸಿದ ಹಲವು ಝಲಕ್​ಗಳು ಇಲ್ಲಿವೆ…