Friday, 14th December 2018  

Vijayavani

ಚಾಮರಾಜನಗರದಲ್ಲಿ ವಿಷವಾದ ಮಾರಮ್ಮನ ಪ್ರಸಾದ- ನಾಲ್ವರ ಸಾವು-40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, ಜಿಲ್ಲಾಧಿಕಾರಿ ಭೇಟಿ        ರಾಜಸ್ಥಾನ ಸಿಎಂ ಆಗಿ ಆಶೋಕ್ ಗೆಹ್ಲೋಟ್, ಯುವ ನಾಯಕ ಸಚಿನ್ ಪೈಲಟ್​​ಗೆ ಡಿಸಿಎಂ ಪಟ್ಟ- ಕಾಂಗ್ರೆಸ್​ನಿಂದ ಅಧಿಕೃತ ಘೋಷಣೆ        ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​ವೈ- ಸಿಎಂ ಎಚ್​ಡಿಕೆ ಚೆನ್ನೈಗೆ ಪ್ರಯಾಣ        ಭದ್ರತೆಗಾಗಿ ರಫೇಲ್ ಖರೀದಿ-ಸುಪ್ರೀಂಕೋರ್ಟ್ ತೀರ್ಪಿನಿಂದ ಭ್ರಮನಿರಸನ-ರಾಗಾ ವಿರುದ್ಧ ಹಾಲಿ ಮಾಜಿ ರಕ್ಷಣಾ ಸಚಿವರ ಕಿಡಿ        ನಾಲ್ಕು ದಿನದಲ್ಲಿ ಎಲ್ಲ ಸರಿಹೋಗುತ್ತೆ-ಪ್ರಯಾಣಿಕರಿಗೆ ಯಾವುದೇ ಆತಂಕ ಬೇಡ-ಪಿಲ್ಲರ್ ಬಿರುಕಿಗೆ BMRCL ಎಂಡಿ ಸ್ಪಷ್ಟನೆ        ನನಗೂ ಸಚಿವೆಯಾಗುವ ಆಸೆ ಇದೆ- ಅಂತರಂಗ ತೆರೆದಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್- ಕೈ ಸಚಿವಾಕಾಂಕ್ಷಿಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ       
Breaking News

ತನ್ನ ಕೆಲಸ ಬಿಜೆಪಿಗೆ ಮುಜುಗರ ತರಬಾರದೆಂದು ರಾಜೀನಾಮೆ ಕೊಟ್ಟ ರಾಜಾ ಸಿಂಗ್​; ಆ ಕೆಲಸ ಏನು ಗೊತ್ತಾ?

Monday, 13.08.2018, 8:55 AM       No Comments

ಹೈದರಾಬಾದ್​: ತಮ್ಮ ವಿವಾದಿತ ಮಾತುಗಳು, ಭಾಷಣದ ಮೂಲಕವೇ ಸದಾ ಸುದ್ದಿಯಲ್ಲಿರುವ ಹೈದರಾಬಾದ್​ನ ಬಿಜೆಪಿ ಶಾಸಕ ರಾಜಾ ಸಿಂಗ್​ ಪಕ್ಷಕ್ಕೆ ನಾಲ್ಕು ದಿನಗಳ ಹಿಂದೆ ರಾಜೀನಾಮೆ ಸಲ್ಲಿಸಿದ್ದಾರೆ.

“ನಾನು ಮಾಡುಲು ಉದ್ದೇಶಿಸಿರುವ ಕಾರ್ಯ ಪಕ್ಷಕ್ಕೆ ಮುಜುಗರ ತರಬಾರದು ಎಂಬ ಕಾರಣಕ್ಕೆ ಅವರು ನಾನು ಪಕ್ಷ ಬಿಡುತ್ತಿದ್ದೇನೆ,” ಎಂದು ಅವರು ತಿಳಿಸಿದ್ದಾರೆ.

ತಾವು ಪಕ್ಷ ಬಿಡುತ್ತಿರುವುದರ ಹಿಂದಿನ ಕಾರಣಗಳನ್ನು ಶಾಸಕ ರಾಜಾ ಸಿಂಗ್​ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅದನ್ನೇ ಮಾಧ್ಯಮಗಳ ಎದುರು ಹೇಳಿರುವ ಅವರು, ” ಈ ಬಾರಿಯ ಈದ್​ ಹಬ್ಬಕ್ಕೆ ಸಾಕಷ್ಟು ಗೋವುಗಳನ್ನು ವಧೆ ಮಾಡಲಾಗುತ್ತದೆ. ಇದನ್ನು ತಡೆಯುವ ಸಲುವಾಗಿ ನಾನು ಕಾರ್ಯಪ್ರವೃತ್ತನಾಗಬೇಕಾಗಿದೆ. ಧರ್ಮ ಮತ್ತು ಗೋವುಗಳ ರಕ್ಷಣೆಗಾಗಿ ನಾನು ಯಾವ ಹಂತಕ್ಕೆ ಬೇಕಾದರೂ ಹೋಗುತ್ತೇನೆ. ನನ್ನ ಈ ಕಾರ್ಯವನ್ನು ವಿರೋಧಿಸುವವರು ‘ನಿಮ್ಮ ಪಕ್ಷದವನು ಹೀಗೆ ಮಾಡಿದ, ಹಾಗೆ ಹೇಳಿದ ಎಂದೆಲ್ಲ ಮೋದಿ ಅವರನ್ನು ಟೀಕಿಸುತ್ತಾರೆ. ಹೀಗಾಗಿ ನನ್ನಿಂದ ಪಕ್ಷಕ್ಕೆ ಮತ್ತು ನಾಯಕರಿಗೆ ಮುಜುಗರ ಉಂಟಾಗಬಾರದು ಎಂದು ರಾಜೀನಾಮೆ ನೀಡಿದ್ದೇನೆ ಎಂದು ರಾಜಾ ಸಿಂಗ್​ ತಿಳಿಸಿದ್ದಾರೆ.

ಈ ಬಾರಿಯ ಈದ್​ಗೆ ಹೈದರಾಬಾದ್​ನಲ್ಲಿ 3000 ಗೋವುಗಳನ್ನ ವಧೆ ಮಾಡಲಾಗುತ್ತಿದೆ ಎಂದು ರಾಜಾಸಿಂಗ್​ ಇದೇ ವೇಳೆ ಆತಂಕ ವ್ಯಕ್ತಪಡಿಸಿದರು.

ಹೈದರಾಬಾದ್​ನ ಗೋಶಾಮಾಹಲ್​ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ರಾಜಾ ಸಿಂಗ್​ ತಮ್ಮ ವಿವಾದಿತ ಮಾತುಗಳ ಮೂಲಕವೇ ಪ್ರಖ್ಯಾತಿ ಪಡೆದವರು. ಇತ್ತೀಚೆಗೆ ಅವರು “ದೇಶ ಬಿಡಲು ಸಿದ್ಧವಿಲ್ಲದ ಬಾಂಗ್ಲಾದವರನ್ನು ಗುಂಡಿಕ್ಕಿ,”ಎಂದಿದ್ದರು. ಅದಕ್ಕೂ ಹಿಂದೆ, ” ಸಂದರ್ಭ ಬಂದರೆ ಧರ್ಮ ವಿರೋಧಿಗಳ ತಲೆ ಕಡಿಯಬೇಕು,” ಎಂದು ಹೇಳಿಕೆ ನೀಡಿದ್ದರು.

ಕಳೆದ ವರ್ಷ ಡಿಸೆಂಬರ್​ನಲ್ಲಿ ಯಾದಗಿರಿ ಜಿಲ್ಲೆಯಲ್ಲಿ ನಡೆದಿದ್ದ ವಿರಾಟ್​ ಹಿಂದೂ ಸಮಾವೇಶದಲ್ಲಿ ಭಾಗವಹಿಸಿದ್ದ ರಾಜಾ ಸಿಂಗ್​ ಕೋಮು ಪ್ರಚೋಧನಕಾರಿ ಭಾಷಣ ಮಾಡಿದ್ದರು. ಅವರ ವಿರುದ್ಧ ಯಾದಗಿರಿ ಜಿಲ್ಲಾಡಳಿತ ಪ್ರಕರಣ ದಾಖಲಿಸಿತ್ತು.
ಕಳೆದ ಎರಡು ವರ್ಷಗಳಲ್ಲಿ ರಾಜಾ ಸಿಂಗ್​ ಬಿಜೆಪಿಗೆ ಮೂರನೇ ಬಾರಿ ರಾಜೀನಾಮೇ ಸಲ್ಲಿಸಿದ್ದಾರೆ. ಈ ಹಿಂದೆ ರಾಜೀನಾಮೆ ನೀಡಿದ್ದ ಅವರು ಕೆಲವೇ ದಿನಗಳಲ್ಲಿ ರಾಜೀನಾಮೆ ಹಿಂಪಡೆದಿದ್ದರು.

#RajaSingh #MLA #BJP #Hyderabad #CowSlaughter #Embarrassment #Resign

Leave a Reply

Your email address will not be published. Required fields are marked *

Back To Top