More

  ಪ್ರಚಾರಕ್ಕೆ ತೆರಳಿದ್ದವರಿಗೆ ಶಾಕ್; ಸಚಿವ ಜಮೀರ್ ಅಹ್ಮದ್ ಖಾನ್​ ತಂಗಿದ್ದ ಹೋಟೆಲ್​ ಮೇಲೆ ರೇಡ್

  ಹೈದರಾಬಾದ್: ತೆಲಂಗಾಣ ತನ್ನ ಮೂರನೇ ವಿಧಾನಸಭಾ ಚುನಾವಣೆಗೆ ಸಿದ್ಧವಾಗಿದೆ. ಇಲ್ಲಿ ನವೆಂಬರ್ 30 ರಂದು 119 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಈ ಬಾರಿ ಭಾರತ್ ರಾಷ್ಟ್ರ ಸಮಿತಿ (ಹಿಂದಿನ ತೆಲಂಗಾಣ ರಾಷ್ಟ್ರ ಸಮಿತಿ) ಮತ್ತು ಕಾಂಗ್ರೆಸ್ ನಡುವೆ ಸ್ಪರ್ಧೆ ಇದೆ.

  ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಕರ್ನಾಟಕದ ನಾಯಕರೂ ತೆರಳಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್​ ನಾಯಕರು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಹಾಗಾಗಿ ಸಚಿವ ಜಮೀರ್ ಅಹಮ್ಮದ್ ಖಾನ್ ಸಹ ಮತ ಯಾಚಿಸಲು ತೆರಳಿದ್ದಾರೆ. ಏತನ್ಮಧ್ಯೆ ಜಮೀರ್ ತಂಗಿದ್ದ ಹೋಟೆಲ್​ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಜಮೀರ್ ಉಳಿದುಕೊಂಡಿದ್ದ ಹೈದರಾಬಾದ್ ನಗರದ ಪಾರ್ಕ್ ಹಯಾತ್ ಹೋಟೆಲ್ ಮೇಲೆ ನಿನ್ನೆ (ನ. 22) ತಡರಾತ್ರಿ ದಾಳಿಯಾಗಿದೆ. ಚುನಾವಣೆಗೆ ಅಕ್ರಮ ಹಣ ವರ್ಗಾವಣೆ ಶಂಕೆ ಮೇರೆ ಪೊಲೀಸರು ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತಂತೆ ಜಮೀರ್ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಪೇಜ್​​​​ನಲ್ಲಿ ಬರೆದುಕೊಂಡಿದ್ದು ಕಿಡಿಕಾರಿದ್ದಾರೆ. 

  “ತಾವು ಉಳಿದುಕೊಂಡಿರುವ ಹೈದರಾಬಾದ್ ನಗರದ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ ಅವರಿಗೆ ಏನು ಸಿಗಲಿಲ್ಲ. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಮತ್ತು ರಾಜ್ಯದ ಬಿಆರ್‌ಎಸ್ ಸರ್ಕಾರ ಹತಾಶೆಗೊಂಡಿದ್ದು, ಜಂಟಿ ರಾಜಕೀಯ ದಾಳಿ ನಡೆಸಿವೆ. ಇದು ನಮ್ಮನ್ನು ಹೆದರಿಸಿ ಹಿಂದಕ್ಕೆ ಕಳುಹಿಸುವ ತಂತ್ರವಾಗಿದೆ. ಆದರೆ ನಾವು ಇದಕ್ಕೆ ಹೆದರುವುದಿಲ್ಲ” ಎಂದು ಬರೆದುಕೊಂಡಿದ್ದಾರೆ.

  ಇತ್ತೀಚೆಗೆ ಗೌರಿಬಿದನೂರು ಕಾಂಗ್ರೆಸ್ ನಾಯಕ ಎನ್​ಹೆಚ್​ ಶಿವಶಂಕರ್ ರೆಡ್ಡಿ ವಾಸ್ತವ್ಯ ಇದ್ದ ಹೋಟೆಲ್​ ಮೇಲೆ ಸಹ ಚುನಾವಣಾಧಿಕಾರಿಗಳು ದಾಳಿ ಮಾಡಿದ್ದರು. ಈ ಬಾರಿ ಬಿಜೆಪಿ, ಎಐಎಂಐಎಂ, ಜನಸೇನಾ ಮುಂತಾದ ಪಕ್ಷಗಳೂ ಚುನಾವಣಾ ಕಣದಲ್ಲಿವೆ. ಆದರೆ ತೆಲಂಗಾಣದ ಮೊದಲ ಚುನಾವಣೆಯ ಬಗ್ಗೆ ಮಾತನಾಡುವುದಾದರೆ ಪರಿಸ್ಥಿತಿ ಹೀಗಿರಲಿಲ್ಲ. ಜೂ.2, 2014 ರಂದು ತೆಲಂಗಾಣ ರಾಜ್ಯ ರಚನೆಯಾಯಿತು. ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ರಾಜ್ಯ ರಚನೆಯ ನಂತರ 2014 ರ ವಿಧಾನಸಭಾ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು ಮತ್ತು ರಾಜ್ಯದಲ್ಲಿ ಮೊದಲ ಸರ್ಕಾರವನ್ನು ರಚಿಸಿತು. ಕಾಂಗ್ರೆಸ್ ಎರಡನೇ ಸ್ಥಾನದಲ್ಲಿತ್ತು.

  ಮತ್ತೆ ಗೊಂದಲ ಬೇಡ: ಪಿಎಸ್​ಐ ನೇಮಕಕ್ಕೆ ಡಿಸೆಂಬರ್ 23ಕ್ಕೆ ಪರೀಕ್ಷೆ ನಿಗದಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts