ಧರ್ಮ ಪ್ರಸಾರವೇ ಮಠಾಧಿಪತಿಯ ಮುಖ್ಯ ಧ್ಯೇಯ

ವಿಜಯವಾಣಿ ಸುದ್ದಿಜಾಲ ಭಾಲ್ಕಿ
ನಿರಂತರ ಧರ್ಮ ಪ್ರಸಾರ ಕಾರ್ಯವೇ ಒಬ್ಬ ಮಠಾಧಿಪತಿ ಮುಖ್ಯ ಧ್ಯೇಯವಾಗಿದೆ ಎಂದು ಹಿರೇಮಠ ಸಂಸ್ಥಾನದ ಹಿರಿಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.

ಪಟ್ಟಣದ ಚನ್ನಬಸವಾಶ್ರಮದಲ್ಲಿ ಶಕ್ರವಾರ ಆಯೋಜಿಸಿದ ನೆರೆಯ ತೆಲಂಗಾಣದ 31 ಜಿಲ್ಲೆಗಳಲ್ಲಿ ನಡೆಸಲು ಉದ್ದೇಸಿಸಿರುವ ಬಸವಜ್ಯೋತಿ ಸಂದೇಶ ಯಾತ್ರೆ ಚಾಲನೆ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬಸವಧರ್ಮವು ಜನರಲ್ಲಿ ಸಮಾನತೆ ಮತ್ತು ಸಾಮರಸ್ಯ ಬಿತ್ತುತ್ತದೆ. ಶರಣರ ವಚನಗಳಲ್ಲಿ ವಿಶ್ವದ ಸಕಲ ಜೀವಾತ್ಮರ ಲೇಸನ್ನು ಬಯಸುವ ಸಂದೇಶಗಳಿವೆ. ಅವುಗಳನ್ನು ರಾಷ್ಟ್ರವ್ಯಾಪಿ ಪಸರಿಸಲು ಎಲ್ಲರು ಮುಂದೆ ಬರಬೇಕೆಂದು ತಿಳಿಸಿದರು.

ಕಾರ್ಯಕ್ರಮದ ನೇತ್ರತ್ವ ವಹಿಸಿದಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿದರು. ಪ್ರಾ.ಚಂದ್ರಕಾಂತ ಬಿರಾದಾರ, ಸಂತೋಷ ಬಿಜಿ ಪಾಟೀಲ್, ಅಶೋಕ ರಾಜೋಳೆ, ವೈಜಿನಾಥ ಸಿರ್ಸೆ , ಶಿಖರೇಶ್ವರ ಶೆಟಕಾರ, ಮಲ್ಲಮ್ಮ ಆರ್.ಪಾಟೀಲ್​, ಮಲ್ಲಮ್ಮ ನಾಗನಕೇರೆ, ಜೈರಾಜ ಕೊಳ್ಳಾ, ಅಶೋಕ ರಾಜೋಳೆ, ಸಿದ್ರಾಮಪ್ಪ ವಂಕೆ, ಸೋಮನಾಥಪ್ಪ ಅಷ್ಟೂರೆ, ವಿಶ್ವನಾಥಪ್ಪ ಬಿರಾದಾರ, ಸಿದ್ದಯ್ಯ ಕಾವಡಿಮಠ, ಸಂಗಪ್ಪ ಕುಂಟೆಸಿರ್ಸೆ ಇತರರಿದ್ದರು.

ಸಂಗೀತ ಕಲಾವಿದರಾದ ಉಸ್ತಾದ ಶೇಖ್ ಹನ್ನುಮಿಯ್ಯಾ, ರಾಜಕುಮಾರ ಘೋಟಕರ್, ಅಮರದೀಪ, ಕಪಿಲ, ಸಂಗಮೇಶ ಡೋಣಗಾಪೂರೆ, ಈಶ್ವರಿ ಐನೋಳಿ ಮುಂತಾದವರಿಂದ ವಚನ ಸಂಗೀತ ಕಾರ್ಯಕ್ರಮ ಬಸಂತ ಪಂಚಮಿ ನಿಮಿತ್ತ ಇದೇ ವೇದಿಕೆಯಲ್ಲಿ ಜರುಗಿತು.