ಕೆರೂರ: ಪಟ್ಟಣ ಅ.ರಾ. ಹಿರೇಮಠ ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಕೇಂದ್ರಕ್ಕೆ ತಹಸೀಲ್ದಾರ್ ಜೆ.ಬಿ. ಮಜ್ಜಿಗೆ ಭೇಟಿ ನೀಡಿ ವೀಕ್ಷಿಸಿದರು.
ಪಟ್ಟಣದ ಸುತ್ತಮುತ್ತಲಿನ ಗ್ರಾಮೀಣ ಭಾಗದ 22 ಶಾಲೆಗಳನ್ನು ಒಳಗೊಂಡಂತೆ ಒಟ್ಟು 336 ವಿದ್ಯಾರ್ಥಿಗಳು ಗುರುವಾರ ವಿಜ್ಞಾನ ಪರೀಕ್ಷೆಗೆ ಹಾಜರಾಗಿದ್ದರು. 31 ವಿದ್ಯಾರ್ಥಿಗಳು ಗೈರಾಗಿದ್ದರು. ಒಟ್ಟು 14 ಪರೀಕ್ಷೆ ಕೊಠಡಿಗಳಿದ್ದವು.
ಯಾವುದೇ ನಕಲು ನಡೆಯದಂತೆ ಪರೀಕ್ಷೆ ಕೇಂದ್ರದ ಸುತ್ತಮುತ್ತಲು ಪೋಲಿಸ್ ಸಿಬ್ಬಂದಿ ಎಚ್ಚರ ವಹಿಸಿದ್ದರು.
ಜೆ. ಎಸ್. ಬಾರಕೇರ, ಜಯಶ್ರೀ, ಜೆ. ಎಸ್. ಗಾಣಗೇರ, ಬಿ. ಎಸ್. ಅಬ್ಬಿಗೇರಿ, ಆರೋಗ್ಯ ಇಲಾಖೆ ಸಿಬ್ಬಂದಿ ದತ್ತು ಕಂದಗಲ್ಲ,ಪೋಲಿಸ್ ಸಿಬ್ಬಂದಿ ಎಎಸ್‌ಐ ಎಸ್. ಜೆ. ಕಟ್ಟಿಮನಿ, ಪಿ. ಎಚ್. ಚಟ್ಟಲದೇರಿ ಇದ್ದರು.