ಹೆಬ್ರಿ: ಬಹಳ ಸಮಯದಿಂದ ಸೇತುವೆ ಬೇಡಿಕೆ ಇರುವ ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದ ಮತ್ತಾವಿಗೆ ಹೆಬ್ರಿ ತಹಸೀಲ್ದಾರ್ ಎಸ್.ಎ.ಪ್ರಸಾದ್ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಗುರುವಾರ ಪರಿಶೀಲನೆ ನಡೆಸಿದರು.
ತಹಸೀಲ್ದಾರ್ ಸಂಬಂಧಪಟ್ಟ ಎಲ್ಲ ಸಮನ್ವಯ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು.
ಮೇಲಧಿಕಾರಿಗಳ ಸೂಚನೆಯಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಜನರಿಗೆ ಇಲ್ಲಿ ಸೇತುವೆ ಅಗತ್ಯ ಇದೆ. ಕಾಲುಸಂಕದಲ್ಲಿ ಒಂದು ಬಾರಿ ಒಬ್ಬ ಹೋಗಲು ಸದ್ಯಕ್ಕೆ ಏನು ಸಮಸ್ಯೆ ಇಲ್ಲ. ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳ ಬಳಿ ಸಭೆ ನಡೆಸಿ ಇದರ ಸಂಪೂರ್ಣ ವರದಿ ಜಿಲ್ಲಾಧಿಕಾರಿಗೆ ನೀಡಲಾಗುವುದು ಎಂದರು.
ಹೆಬ್ರಿ ಇಒ ಶಶಿಧರ ಕೆಜೆ, ಗ್ರಾಮ ಆಡಳಿತ ಅಧಿಕಾರಿ ನವೀನ್ ಕುಮಾರ್ ಕುಕ್ಕುಜೆ ಇದ್ದರು.