ಇಂದು ತಹಸೀಲ್ದಾರ್ ಕಚೇರಿಗೆ ಮುತ್ತಿಗೆ

mdl 15 pressmeet

ಮುಧೋಳ: ರೈತರ ಹಿತದೃಷ್ಠಿಯಿಂದ ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ ನಿರಾಣಿ ಕಾರ್ಖಾನೆ ಆರಂಭಿಸಬೇಕೆಂದು ಒತ್ತಾಯಿಸಿ ನ.16 ರಂದು ಬೆಳಗ್ಗೆ 10 ಗಂಟೆಗೆ ಕಬ್ಬು ಪೂರೈಕೆದಾರರು ಹಾಗೂ ಟ್ರಾೃಕ್ಟರ್ ಮಾಲೀಕರಿಂದ ಮುಧೋಳ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲಾಗುವುದೆಂದು ರೈತ ಮುಖಂಡರಾದ ಸೋಗೂರೆಪ್ಪ ಅಕ್ಕಿಮರಡಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಮಾತ್ರವಲ್ಲ, ಜಿಲ್ಲೆಯಲ್ಲಿನ ಎಲ್ಲ ಕಾರ್ಖಾನೆಗಳು ಸರ್ಕಾರದ ಆದೇಶದಂತೆ 2024-25ರ ಹಂಗಾಮು ಪ್ರಾರಂಭವಾಗಿವೆ. ಆದರೆ, ಅತಿ ಹೆಚ್ಚು ಕಬ್ಬು ನುರಿಸುವ ಸಾಮರ್ಥ್ಯ ಹೊಂದಿದ ಮುಧೋಳದ ನಿರಾಣಿ ಸಕ್ಕರೆ ಕಾರ್ಖಾನೆ ಪ್ರಾರಂಭವಾಗಿಲ್ಲ. ಕಾರ್ಖಾನೆ ಮಾಲೀಕರು ಕಾರ್ಖಾನೆ ಬಂದ್ ಮಾಡಿದ್ದು ಮುಂದೆ ಆರಂಭಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಈ ಕಾರ್ಖಾನೆ ಪ್ರಾರಂಭವಾಗದಿದ್ದರೆ ಲಕ್ಷಾಂತರ ರೈತರಿಗೆ ನಷ್ಟವಾಗುತ್ತದೆ. ನ.12ರಂದು ಕಾರ್ಖಾನೆ ಆವರಣದಲ್ಲಿ ನಡೆದ ಘಟನೆಯಿಂದ ಈ ನಿರ್ಧಾರಕ್ಕೆ ಬಂದಿದ್ದು, ಅವರು ಕಾರ್ಖಾನೆ ಪ್ರಾರಂಭ ಮಾಡದಿದ್ದರೆ ಲಕ್ಷಾಂತರ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರೈತರ, ಟ್ರಾೃಕ್ಟರ್ ಮಾಲೀಕರು ಕೋಟ್ಯಂತರ ರೂ. ನಷ್ಟ ಅನುಭವಿಸುತ್ತಾರೆ. ಆದ್ದರಿಂದ ಕೂಡಲೇ ಸಕ್ಕರೆ ಕಾರ್ಖಾನೆಯನ್ನು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ, ಪೊಲೀಸ್ ಇಲಾಖೆ ಮಧ್ಯಸ್ಥಿಕೆಯಲ್ಲಿ ಆರಂಭಿಸಬೇಕು. ಕಬ್ಬು ಕಳುಹಿಸುವ ರೈತರಿಗೆ ಮತ್ತು ಟ್ರಾೃಕ್ಟರ್ ಮಾಲೀಕರಿಗೆ ಭದ್ರತೆ ಒದಗಿಸಬೇಕು ಎಂದರು.

ಕೃಷಿ ಚಟುವಟಿಕೆಗೆ ಅನುಕೂಲವಾಗಬೇಕಾದರೆ ಸೂಕ್ತ ಸಮಯದಲ್ಲಿ ಕಬ್ಬು ಕಳುಹಿಸಬೇಕಾಗುತ್ತದೆ. ಆದರೆ ಇದೂವರೆಗೂ ಕಾರ್ಖಾನೆ ಆರಂಭಿಸದಿರುವುದರಿಂದ ನಾವು ಬೆಳೆದ ಕಬ್ಬು ಹಾನಿಗೊಳಗಾಗುವ ಸಂಭವವಿದೆ. ವಿಳಂಭವಾದರೆ ಕಬ್ಬು ಕಬ್ಬು ಮಾಗಿ, ಹೂ ಬಿಟ್ಟು, ತೂಕ ಮತ್ತು ಇಳುವರಿ ಕಡಿಮೆಯಾಗುತ್ತದೆ. ಅಲ್ಲದೆ, ಜನವರಿಯಲ್ಲಿ ಬಿಸಿಲಿನ ಝಳ ಹೆಚ್ಚಾದಂತೆ ಕಬ್ಬು ಕಡಿಯುವ ಆಳುಗಳಿಗೆ ಹೆಚ್ಚಿನ ಹಣ ನೀಡಬೇಕಾಗುತ್ತದೆ ಎಂದು ತಿಳಿಸಿದರು.

ಮಲ್ಲಪ್ಪ ಪೂಜಾರ ಮಾತನಾಡಿ, ನಿರಾಣಿ ಕಾರ್ಖಾನೆಯವರು ಈಗಾಗಲೇ ಉಳಿದ ಕಾರ್ಖಾನೆಯಂತೆ 2024-25ರ ದರವನ್ನು ರೈತರ ಸಲಹೆಯಂತೆ ನೀಡಲು ಒಪ್ಪಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಎಫ್‌ಆರ್‌ಫಿ ದರಕ್ಕಿಂತ 1300 ಕೋಟಿ ಹಣ ಹೆಚ್ಚಿಗೆ ನೀಡಿದ್ದಾರೆ. ಆದರೆ, ಈ ಭಾಗದಲ್ಲಿ ಉಳಿದ ಕಾರ್ಖಾನೆ ಆರಂಭ ಮಾಡಲು ಬಿಟ್ಟಿದ್ದಾರೆ. ಏಕೆ ಕಾರ್ಖಾನೆ ಆರಂಭಿಸುತ್ತಿಲ್ಲ ಎಂಬುದು ತಿಳಿಯದಾಗಿದೆ. ನಾವು ಬೆಳೆದ ಕಬ್ಬನ್ನು ನಮ್ಮ ಈ ಕಾರ್ಖಾನೆಗೆ ಕಳುಹಿಸಲು ಸಿದ್ಧರಿದ್ದು, ತಾವು ನಮ್ಮ ಕಬ್ಬಿಗೆ ಯಾವುದೇ ರೀತಿಯ ಹಾನಿಯಾಗದಂತೆ ಸೂಕ್ತ ಕ್ರಮ ಕೈಗೊಂಡು ಕಬ್ಬು ಪೂರೈಸಲು ಅನುಕೂಲ ಮಾಡಿಕೊಡಲು ಮುಂದಾಗಬೇಕು ಎಂದು ಹೇಳಿದರು.

ಈಶ್ವರ ಕಾಡಪ್ಪನವರ, ಚನ್ನಪ್ಪ ಪುರಾಣಿಕ, ಯಲ್ಲಪ್ಪ ಬೇಗತಿ, ಚಿಕ್ಕಪ್ಪ ನಾಯಕ್, ರಾಮನಗೌಡ ಪಾಟೀಲ, ಎಂ.ಜಿ. ಹಾದಿಮನಿ, ಗಿರೆಪ್ಪ ಬಳಗಾರ, ಎಂ.ಜಿ. ಹಾದಿಮನಿ, ರಂಗನಗೌಡ ಪಾಟೀಲ, ಎಸ್.ಎಸ್. ಅಕ್ಕಿಮರಡಿ, ಪಂಡಿತ ಪೂಜಾರಿ, ಚಿಕ್ಕಪ್ಪ ನಾಯ್ಕ, ಪರಮಾನಂದ ಆಲಗೂರ ಇದ್ದರು.

Share This Article

ವೆಜ್​ ಪ್ರಿಯರಿಗಾಗಿ ಸ್ಟ್ರೀಟ್ ಸ್ಟೈಲ್ ಮೊಮೊಸ್; ಮನೆಯಲ್ಲೆ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ Recipe

ಸ್ಟ್ರೀಟ್​ ಫುಡ್​ ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ, ಸಂಜೆಯಾದರೆ ಸಾಕು ಸ್ಟ್ರೀಟ್ ಫುಡ್ ತಿನ್ನಬೇಕು ಎನ್ನಿಸುತ್ತದೆ.…

ಹೀಲ್ಸ್ ಧರಿಸುವುದು ಎಷ್ಟು ಅಪಾಯಕಾರಿ ಗೊತ್ತೆ?; ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ | Health Tips

ಹೈಹೀಲ್ಸ್​​ ಬೂಟುಗಳನ್ನು ಧರಿಸುವುದು ಪರಿಪೂರ್ಣ ಭಂಗಿಯನ್ನು ನೀಡುತ್ತದೆ, ಎತ್ತರವಾಗಿ ಕಾಣುತ್ತದೆ ಮತ್ತು ಸ್ಟೈಲಿಶ್ ಆಗಿ ಕಾಣುತ್ತದೆ.…

ಶೀತದಲ್ಲಿಯೂ ಉತ್ತಮ ನಿದ್ರೆಗೆ ಈ ಟ್ರಿಕ್ಸ್​ ಫಾಲೋ ಮಾಡಿ; ನಿಮಗಾಗಿ ಹೆಲ್ತಿ ಟಿಪ್ಸ್​​ | Health Tips

ಕೆಲವರಿಗೆ ಚಳಿಗಾಲದಲ್ಲಿ ಹೆಚ್ಚು ನಿದ್ದೆ ಬಂದರೆ ಇನ್ನು ಕೆಲವರು ಕಣ್ಣುಗಳಿಂದ ನಿದ್ದೆ ಕಳೆದುಕೊಳ್ಳುತ್ತಾರೆ. ನಿದ್ರೆಯ ಮಾದರಿಯಲ್ಲಿ…