Teenage Girl: ಇತ್ತೀಚಿನ ದಿನಗಳಲ್ಲಿ ದುಬಾರಿ ಹಾಗೂ ಬ್ರ್ಯಾಂಡೆಡ್ ವಸ್ತುಗಳು ಜನರನ್ನು ಆಕರ್ಷಿಸುತ್ತಿವೆ. ಇತರರಂತೆ ನಮ್ಮ ಬಳಿಯೂ ದುಬಾರಿ ವೆಚ್ಚದ ವಸ್ತುಗಳ ಸಂಗ್ರಹ ಇರಬೇಕು ಎಂದು ಭಾವಿಸುತ್ತಾರೆ. ಇದಕ್ಕಾಗಿಯೇ ತಾವು ದುಡಿಯುವ ಸಂಪಾದನೆಯಲ್ಲಿ ಬಹುಪಾಲು ಹಣವನ್ನು ಮೀಸಲಿಡುತ್ತಾರೆ. ಅಸಲಿಗೆ ಇದು ತೀರ ಸಾಮಾನ್ಯ ವಿಷಯ ಎಂದೇ ಹೇಳಬಹುದು. ಹಾಸಿಗೆ ಇದ್ದಷ್ಟು ಕಾಲುಚಾಚು ಎಂಬುದು ಈಗ ಬದಲಾಗಿ, ಹಾಸಿಗೆ ಮೀರಿ ಕಾಲಿಚಾಚು ಎನ್ನುವ ಕಾಲ ಸನ್ನಿಹಿತವಾಗಿದೆ.
ಇದನ್ನೂ ಓದಿ: Atrocities against Sc & St ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ಕು ವರ್ಷದಲ್ಲಿ 122 ಪ್ರಕರಣ ದಾಖಲು
ಅಪ್ಪ-ಅಮ್ಮನ ಶ್ರಮ, ತ್ಯಾಗಗಳ ಬಗ್ಗೆ ಯೋಚಿಸದ ಮಕ್ಕಳು, ಅವರು ಕೂಡಿಟ್ಟ ಹಣ, ಆಸ್ತಿಗಳನ್ನು ಮಣ್ಣುಪಾಲು ಮಾಡುವುದರಲ್ಲಿ ನಿಸ್ಸೀಮರಾಗಿದ್ದಾರೆ. ಪೋಷಕರು ತಮ್ಮ ಭವಿಷ್ಯಕ್ಕಾಗಿ ಸಂಗ್ರಹಿಸಿದ ಹಣ, ಆಸ್ತಿಯನ್ನು ತಮ್ಮ ಖುಷಿ, ಆಡಂಬರದ ಜೀವನ ಶೈಲಿಗಾಗಿ ದುಂದು ವೆಚ್ಚ ಮಾಡುತ್ತಿದ್ದಾರೆ. ಈ ರೀತಿ ಹಣವನ್ನು ಖರ್ಚು ಮಾಡುವುದು ಅವರಿಗೆ ಹೊಸದೇನಲ್ಲ. ಬಟ್ಟೆ, ಶೂ, ಫ್ಯಾಷನ್ ವಸ್ತುಗಳು ಸೇರಿದಂತೆ ಇತರೆ ವಸ್ತುಗಳಿಗೆ ಲಕ್ಷಗಟ್ಟಲೆ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ. ಇದಕ್ಕೆಲ್ಲ ಬ್ರ್ಯಾಂಡೆಡ್ ವಸ್ತುಗಳೇ ಕಾರಣ.
ಇಲ್ಲೊಬ್ಬಳು ಚೀನಾದ ಯುವತಿ ಕೂಡ ಇದೇ ರೀತಿ ಶೋಕಿ ವಸ್ತು ಖರೀದಿ ಮಾಡಲು ಹೋಗಿ ದೊಡ್ಡ ಎಡವಟ್ಟು ಮಾಡಿಕೊಂಡಿದ್ದು, ತಾಯಿಯ ಕಣ್ಣೀರಿಗೆ ಕಾರಣವಾಗಿದ್ದಾಳೆ. ತನ್ನ ತಾಯಿ ಮನೆಯಲ್ಲಿಟ್ಟಿದ್ದ 1.16 ಕೋಟಿ ರೂ. ಮೌಲ್ಯದ ಚಿನ್ನವನ್ನು ಕೇವಲ 680 ರೂ. ಮೌಲ್ಯದ ಲಿಪ್ ಸ್ಟಡ್ಗೆ ಮಾರಿಬಿಟ್ಟಿದ್ದಾಳೆ. ಸದ್ಯ ಪುತ್ರಿ ಮಾಡಿದ ದೊಡ್ಡ ಎಡವಟ್ಟಿಗೆ ಈಗ ತಾಯಿ ಕಂಗಾಲಾಗಿದ್ದಾರೆ. ಈ ಘಟನೆ ಚೀನಾದ ಶಾಂಘೈನ ವಾನ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಇದನ್ನೂ ಓದಿ ನೂತನ ಮಾಹಿತಿ ಆಯುಕ್ತರಿಗೆ ಪ್ರೆಸ್ಕ್ಲಬ್ ಸನ್ಮಾನ:ಗೌರವ ಸ್ವೀಕರಿಸಿದ ರುದ್ರಣ್ಣ ಹರ್ತಿಕೋಟೆ
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಚೀನಾದ ಶಾಂಘೈನಲ್ಲಿರುವ ಅಪ್ರಾಪ್ತ ಬಾಲಕಿ, ತನ್ನ ತಾಯಿಯಿಂದ ಒಂದು ಮಿಲಿಯನ್ ಯುವಾನ್ (1.16 ಕೋಟಿ ರೂ.) ಮೌಲ್ಯದ ಚಿನ್ನಾಭರಣಗಳನ್ನು ಲಪಟಾಯಿಸಿ, ಕೇವಲ 680 ರೂ. ಮೌಲ್ಯದ ಲಿಪ್ ಸ್ಟಡ್ ಖರೀದಿಗಾಗಿ ಮಾರಿದ್ದಾಳೆ. ಈ ವಿಷಯ ಬಾಲಕಿಯ ತಾಯಿ ವಾಂಗ್, ಪುಟುವೊ ಸಾರ್ವಜನಿಕ ಭದ್ರತಾ ಬ್ಯೂರೋದ ವಾನ್ಲಿ ಪೊಲೀಸ್ ಠಾಣೆಯಲ್ಲಿ ಕಳ್ಳತನದ ದೂರು ದಾಖಲಿಸಿದ ನಂತರ ತಡವಾಗಿ ಬೆಳಕಿಗೆ ಬಂದಿದೆ.
ಬಾಲಕಿ ಅಪ್ರಾಪ್ತ ವಯಸ್ಕಳಾಗಿದ್ದರಿಂದ ಚಿನ್ನದ ಆಭರಣಗಳನ್ನು ಎಲ್ಲಿ ಮಾರಾಟ ಮಾಡಬೇಕೆಂದು ಸರಿಯಾಗಿ ಗೊತ್ತಾಗಿಲ್ಲ. ವಾಸ್ತವವಾಗಿ, ಅವಳು ಕದ್ದಿದ್ದು ಅಸಲಿ ಚಿನ್ನಾಭರಣಗಳು ಎಂಬುದೇ ಆಕೆಗೆ ತಿಳಿದಿರಲಿಲ್ಲ. ಅದು ರೋಲ್ಡ್ ಗೋಲ್ಡ್ ಎಂದು ಭಾವಿಸಿದ ಬಾಲಕಿ, ನೇರವಾಗಿ ಚಿನ್ನದಂಗಡಿಗೆ ಮಾರಿದ್ದಾಳೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ತಾಯಿಯ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಬಾಲಕಿ ಯಾರಿಗೆ ಚಿನ್ನವನ್ನು ಮಾರಿದ್ದಾಳೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ಕಡೆಗೂ ಅಂಗಡಿಯಿಂದ ಎಲ್ಲಾ ಆಭರಣಗಳನ್ನು ವಶಪಡಿಸಿಕೊಂಡ ಪೊಲೀಸರು, ಒಂದೂವರೆ ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ತಾಯಿಗೆ ಮರಳಿಸಿದ್ದಾರೆ,(ಏಜೆನ್ಸೀಸ್).