ಶಿಗ್ಗಾಂವಿ: ವಿಜ್ಞಾನವು ತಂತ್ರಜ್ಞಾನ ಅಭಿವೃದ್ಧಿಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದ್ದು, ಭೌತಶಾಸ್ತ್ರದ ಅಧ್ಯಯನದಲ್ಲಿನ ಹೊಸ ಬೆಳವಣಿಗೆಗಳು ತಂತ್ರಜ್ಞಾನದ ಯುಗಕ್ಕೆ ಕ್ರಾಂತಿ ನೀಡುತ್ತಿದೆ ಎಂದು ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎ.ಸಿ. ವಾಲಿ ಹೇಳಿದರು.

ಪಟ್ಟಣದ ಜಿ.ಬಿ. ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಭೌತಶಾಸ್ತ್ರ ಪ್ರಯೋಗಾಲಯ ಮತ್ತು ಭೌತಶಾಸ್ತ್ರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ನಿಸರ್ಗದಲ್ಲಿ ನಡೆಯುವ ಅನೇಕ ಭೌತಿಕ ಹಾಗೂ ಅಭೌತಿಕ ವಿಷಯಗಳ ಸಂಶೋಧನೆಯಲ್ಲಿ ವಿದ್ಯಾರ್ಥಿಗಳು ತೊಡಗಿಕೊಂಡಾಗ ಅಮೂಲ್ಯವಾದ ಸತ್ಯದ ಒಳನೋಟ ಕಾಣಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ತಮನ್ನು ತಾವು ಶ್ರದ್ಧೆಯಿಂದ ತೊಡಗಿಸಿಕೊಂಡು ಅಧ್ಯಯನ ಮಾಡಿದರೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆಯಲು ಸಾಧ್ಯ ಎಂದು ಹೇಳಿದರು.
ಪ್ರೊ. ಡಿ.ಎಸ್. ಭಟ್ ಮಾತನಾಡಿ, ಭೌತಶಾಸ್ತ್ರದಲ್ಲಿ ಪಾಂಡಿತ್ಯ ಸಾಧಿಸುವ ಅಡಿಪಾಯ ಸ್ಥಿರವಾದ ಅಭ್ಯಾಸದಲ್ಲಿದೆ. ಪ್ರತಿದಿನ ಅಭ್ಯಾಸ ಮಾಡಲು ವಿದ್ಯಾರ್ಥಿಗಳು ಸಮಯವನ್ನು ಮೀಸಲಿಡಬೇಕು. ನಿರಂತರ ಅಭ್ಯಾಸವು ನಿಮ್ಮ ಸಮಸ್ಯೆ ಪರಿಹರಿಸುವ ಸಾಮರ್ಥ್ಯಗಳನ್ನು ಹಾಗೂ ವಿಷಯದ ಮೇಲಿನ ಒಟ್ಟಾರೆ ನಂಬಿಕೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಪ್ರೊ.ಅಣ್ಣಪ್ಪ ಹುನಗುಂದ, ಪ್ರೊ.ಬಸವರಾಜ ಡಿ., ಪ್ರೊ.ಸಂಧ್ಯಾರಾಣಿ ಕೆ., ಪ್ರೊ.ಆರ್. ಪಿ. ನದಾಫ್, ಡಾ.ಪ್ರಬಲ್ ರೊಡ್ಡಣ್ಣವರ, ಡಾ.ಮುತ್ತು ಸುಣಗರ, ಇಮ್ತಿಯಾಜ್ ಖಾನ್, ಡಾ.ಸುರೇಶ ವಾಲ್ಮೀಕಿ, ಡಾ.ಶ್ರದ್ಧಾ ಬೆಳದಡಿ, ಡಾ.ಮಂಜುನಾಥ ಅಂಗಡಿ, ಪ್ರೊ.ಮಂಜುನಾಥ ಮೇಟಿ, ಪ್ರೊ.ಪ್ರತಿಮಾ ಗುಂಜಾಳ, ಪ್ರೊ.ಮೇಘಾ ಶಿರೂರು, ಪ್ರೊ.ಸಚಿನ್ ಕಂಕಣವಾಡ, ಗಾಯತ್ರಿ ಜಿನ್ನುರು, ಜಾಹ್ನವಿ ಬಿಸನಳ್ಳಿ, ನಿರ್ಮಲಾ ಯಲಿಗಾಡಿ, ತೇಜಸ್ವಿನಿ ಕುಸುಗಲ ಸೇರಿದಂತೆ ಇತರರಿದ್ದರು.