ಯಾದಗಿರಿ : 2021ರಲ್ಲಿ ಮುದ್ರಣಗೊಂಡು ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಗಾಗಿ ಸ್ವೀಕರಿಸಿದ ಕನ್ನಡ, ಆಂಗ್ಲ, ಹಿಂದಿ ಮತ್ತು ಭಾರತೀಯ ಇತರೆ ಭಾಷಾ ಪುಸ್ತಕಗಳನ್ನು ಆಯ್ಕೆ ಸಮಿತಿ ಮುಂದೆ ಮಂಡಿಸಲಾಗಿತ್ತು. ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಆಯ್ಕೆಯಾದ ಪುಸ್ತಕಗಳನ್ನು ಇಲಾಖೆಯ ವೆಬ್‌ಸೈಟ್ dpl.karnataka.gov.in ನಲ್ಲಿ 2025ರ ಮಾರ್ಚ್ 15 ರಂದು ಪ್ರಕಟಿಸಿದೆ ಎಂದು ಯಾದಗಿರಿ ಜಿಲ್ಲಾ ಕೇಂದ್ರ ಗ್ರಂಥಾಲಯ ಮುಖ್ಯ ಗ್ರಂಥಾಲಯಾಧಿಕಾರಿ ಜಯಪ್ರಕಾಶ್.ಹೆಚ್ ಅವರು ತಿಳಿಸಿದ್ದಾರೆ.
ಲೇಖಕರು, ಲೇಖಕ-ಪ್ರಕಾಶಕರು ಮತ್ತು ಪುಸ್ತಕ ಸರಬರಾಜುದಾರರು ಸಲ್ಲಿಸಿದ ಪುಸ್ತಕಗಳ ಹೆಸರು, ಪ್ರಕಾಶರ ಹೆಸರು, ಸರಬರಾಜುದಾರರ ಹೆಸರು, ಲೇಖಕರ ಹೆಸರು, ಪುಟ ಸಂಖ್ಯೆ, ಮುಖ ಬೆಲೆ, ನಿಗದಿತ ಬೆಲೆ, ಪುಸ್ತಕದ ಅಳತೆ ಹಾಗೂ ಇತರೆ ತಾಂತ್ರಿಕ ವ್ಯತ್ಯಾಸಗಳಿದ್ದಲ್ಲಿ 2025ರ ಮಾರ್ಚ್ 18ರ ಒಳಗೆ ಆಯುಕ್ತರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, 4ನೇ ಮಹಡಿ, ಡಾ.ಅಂಬೇಡ್ಕರ್ ವೀದಿ, ಬೆಂಗಳೂರು 560001 ಇಲ್ಲಿಗೆ ಲಿಖಿತವಾಗಿ ಅಥವಾ ಇ-ಮೇಲ್ ಮೂಲಕ ಮನವಿಗಳನ್ನು ಸಲ್ಲಸಬಹುದಾಗಿದೆ. ನಂತರ ಬಂದ ಮನವಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.