ಅಸಭ್ಯವಾಗಿ ವರ್ತಿಸಿದವನಿಗೆ ಕಪಾಳ ಮೋಕ್ಷ ಮಾಡಿದ ಮಹಿಳಾ ಟೆಕ್ಕಿ

<<ಸಿಲಿಕಾನ್ ಸಿಟಿಯಲ್ಲಿ ಮತ್ತೆ ಬೀದಿ ಕಾಮಣ್ಣರ ಹಾವಳಿ>>

ಬೆಂಗಳೂರು: ದೇಶಾದ್ಯಂತ ಅಪ್ರಾಪ್ತೆಯರ ಮೇಲೆ ಸಾಮೂಹಿಕ ಅತ್ಯಾಚಾರ, ಹಲ್ಲೆ, ಕೊಲೆ ಪ್ರಕರಣಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೆ, ಸಿಲಿಕಾನ್​ ಸಿಟಿಯಲ್ಲಿ ಯುವತಿಯರ ಜತೆ ನಡು ರಸ್ತೆಯಲ್ಲೇ ಅಸಭ್ಯವಾಗಿ ವರ್ತಿಸಿರುವ ಘಟನೆ ಸೋಮವಾರ ನಡೆದಿದೆ.

ನಡುರಸ್ತೆಯಲ್ಲೇ ಗೂಂಡಾವರ್ತನೆ ತೋರಿದ್ದ ಕಿಡಿಗೇಡಿಗೆ ಕಪಾಳ ಮೋಕ್ಷ ಮಾಡುವ ಮೂಲಕ ಮಹಿಳಾ ಟೆಕ್ಕಿ ದಿಟ್ಟತನ ಮೆರೆದಿದ್ದಾರೆ. ಅಷ್ಟೇ ಅಲ್ಲದೆ ಕೂಡಲೇ ಪೊಲೀಸರಿಗೆ ಮಾಹಿತಿ ತಿಳಿಸಿ ಕಾಮುಕರನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಏನಿದು ಪ್ರಕರಣ?
ಓಲ್ಡ್ ಏರ್​ಪೋರ್ಟ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮಹಿಳಾ ಟೆಕ್ಕಿ ತನ್ನ ಸಹದ್ಯೋಗಿಯೊಂದಿಗೆ ತೆರಳುತ್ತಿರುವಾಗ ಬಾರ್​ ಮುಂದೆ ಇದ್ದ ಕಾಮುಕರ ಗುಂಪಿನಲ್ಲಿದ್ದ ಒಬ್ಬ ಯುವತಿಯ ಕೈ ಹಿಡಿದು ಎಳೆದಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ಯುವತಿ ಹಿಂದೂ ಮುಂದು ನೋಡದೆ ಕಪಾಳ ಮೋಕ್ಷ ಮಾಡಿದ್ದಾಳೆ. ನಂತರ ಅವನ ವರ್ತನೆ ಕುರಿತು ಪ್ರಶ್ನಿಸಿ ಕ್ಷಮೆ ಕೇಳುವಂತೆ ಒತ್ತಾಯಿಸಿದಾಗ, ನಾನು ತಪ್ಪು ಮಾಡಿಲ್ಲ ಎಂದು ಮತ್ತೊಬ್ಬ ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ.

ನಡು ರಸ್ತೆಯಲ್ಲೇ ಯುವತಿಯ ಟೀ-ಶರ್ಟ್​ ಹರಿದ ಕಾಮುಕರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರುವ ಟೆಕ್ಕಿಗಳು ಅವರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿಯೂ ಅಪ್​ಲೋಡ್​ ಮಾಡಿ, ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಪ್ರಕರಣ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರೂ ಸ್ಥಳಕ್ಕೆ ಬಾರದ ಜೀವನಭೀಮಾ ನಗರ ಪೊಲೀಸರ ವಿರುದ್ಧ ಫೇಸ್​ಬುಕ್​ನಲ್ಲಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *