ಪುಣೆ: ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ, ತನ್ನ 3 ವರ್ಷದ ಪುತ್ರನನ್ನು ಕತ್ತು ಸೀಳಿ ಕೊಲೆ ಮಾಡಿ ಅರಣ್ಯದಲ್ಲಿ ಎಸೆದಿದ್ದ ಟೆಕ್ಕಿಯನ್ನು ಪುಣೆಯ ಚಂದನ್ನಗರ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ಮಾಧವ ಟಿಕೇಟಿ ಮತ್ತು ಸ್ವರೂಪಾ ದಂಪತಿ ತಮ್ಮ ಪುತ್ರ ಹಿಮ್ಮತ್ ಮಾಧವ ಟಿಕೇಟಿಯೊಂದಿಗೆ ಪುಣೆಯಲ್ಲಿ ವಾಸವಾಗಿದ್ದರು.
ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯ ಮೇಲೆ ಗುರುವಾರ ದಂಪತಿ ನಡುವೆ ಜಗಳ ನಡೆದಿದೆ. ಈ ವೇಳೆ ಮಾಧವ ಟಿಕೇಟಿ ತನ್ನ ಪುತ್ರನೊಂದಿಗೆ ಹೊರಗೆ ಹೋಗಿದ್ದ. ತಡರಾತ್ರಿಯಾದರೂ ಪತಿ ಮತ್ತು ಮಗ ವಾಪಸ್ ಬರದಿದ್ದಾಗ ಸ್ವರೂಪಾ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಆತ ಮಧ್ಯಾಹ್ನ ಪುತ್ರನೊಂದಿಗೆ ಇರುವುದು ಮತ್ತು ಸಂಜೆ ಒಬ್ಬನೇ ಇರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮೊಬೈಲ್ ಲೊಕೇಶನ್ ಆಧರಿಸಿ ಪೊಲೀಸರು ಮಾಧವ್ನನ್ನು ಹುಡುಕಿದ್ದರು. ಕುಡಿದ ಮತ್ತಿನಲ್ಲಿದ್ದ ಆತ ಪ್ರಜ್ಞೆ ಬಂದ ಬಳಿಕ ತನ್ನ ಪುತ್ರನನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದ.