ಪ್ರೇಯಸಿಗೆ ಹತ್ತಿರವಾಗಿದ್ದಕ್ಕೆ ಸೋದರಳಿಯನನ್ನೇ ಕೊಂದು ಸಮಾಧಿ ಮಾಡಿದವ 3 ವರ್ಷದ ಬಳಿಕ ಅಂದರ್‌

ನವದೆಹಲಿ: ತನ್ನ ಪ್ರಿಯತಮೆಯೊಂದಿಗೆ ಸಂಬಂಧ ಹೊಂದಿರುವ ಶಂಕೆ ಮೇರೆಗೆ ಸೋದರಳಿಯನನ್ನೇ ಕೊಂದು ಹಾಕಿದ್ದ 37 ವರ್ಷದ ವ್ಯಕ್ತಿಯನ್ನು ಘಟನೆ ನಡೆದ ಮೂರು ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ.

ಒಡಿಶಾದ ಗಂಜಮ್ ನಿವಾಸಿಯಾಗಿದ್ದ ಬಿಜಯ್‌ ಕುಮಾರ್‌ ಮಹಾರಾಣ ಎಂಬಾತ 2012ರಲ್ಲಿ ತನ್ನ ಪ್ರೇಯಸಿ ದೆಹಲಿಗೆ ತೆರಳಿದರೆಂದು ತಾನೂ ಕೂಡ ಅಲ್ಲಿಗೆ ತೆರಳುತ್ತಾನೆ. ಬಳಿಕ 2015ರಲ್ಲಿ ಬಿಜಯ್‌ ಸೋದರಳಿಯ ಹಾಗೂ ಟೆಕ್ಕಿಯಾಗಿದ್ದ ಜೈ ಪ್ರಕಾಶ್‌ ಕೂಡ ಹೈದರಾಬಾದ್‌ನಿಂದ ದೆಹಲಿಗೆ ತೆರಳಿ ದ್ವಾರಕಾ ನಗರದಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಜಯ್‌ ಪ್ರೇಯಸಿಯೊಂದಿಗೆ ಜೈ ಪ್ರಕಾಶ್‌ ಕ್ಲೋಸ್‌ ಆಗಿದ್ದನ್ನು ಸಹಿಸದ ಬಿಜಯ್‌ ಆತನನ್ನು ಕೊಲೆ ಮಾಡಲು ನಿರ್ಧರಿಸಿದ್ದ. 2016ರ ಫೆ.6ರಂದು ಪ್ರಕಾಶ್‌ ಮಲಗಿದ್ದಾಗ ಸೀಲಿಂಗ್‌ ಫ್ಯಾನ್‌ನ ಮೋಟಾರ್‌ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಬಾಲ್ಕನಿಗೆ ಎಳೆದೊಯ್ದು ಅಲ್ಲಿಯೇ ಹೂತಿದ್ದಾನೆ. ಅನುಮಾನ ಬಾರದಿರಲೆಂದು ಸಸಿಗಳನ್ನು ನೆಟ್ಟಿದ್ದಾನೆ.

ಇದಾದ ಒಂದು ವಾರದ ಬಳಿಕ ಪ್ರಕಾಶ್‌ ಕಾಣೆಯಾಗಿದ್ದಾನೆ ಎಂದು ಹೇಳಿ ದೂರನ್ನು ದಾಖಲಿಸುತ್ತಾನೆ. ತಾನೂ 2017ರಲ್ಲಿ ಹೈದರಾಬಾದ್‌ಗೆ ತೆರಳುತ್ತಾನೆ.

2018ರ ಅಕ್ಟೋಬರ್‌ನಲ್ಲಿ ಇವರಿಬ್ಬರು ವಾಸಿಸುತ್ತಿದ್ದ ಕಟ್ಟಡವನ್ನು ನವೀಕರಿಸಲು ಕೆಡವಿದಾಗ ಅಸ್ಥಿಪಂಜರ ಪತ್ತೆಯಾಗಿದೆ. ಮಾಲೀಕರ ಸಹಾಯದಿಂದ ಡಿ. 26ರಂದು ಬಿಜಯ್‌ನನ್ನು ಬಂಧಿಸಿದ ವಿಶಾಖಪಟ್ಟಣಂ ಪೊಲೀಸರಿಗೆ ವಿಚಾರಣೆ ವೇಳೆ ಸತ್ಯ ತಿಳಿದುಬಂದಿದೆ. (ಏಜೆನ್ಸೀಸ್)

Leave a Reply

Your email address will not be published. Required fields are marked *