Video: ಬೈಕ್​ ಹಿಂಬದಿ ಕುಳಿತಿದ್ದ ಮಹಿಳಾ ಟೆಕ್ಕಿಯು ಶಾರ್ಟ್ಸ್ ಹಾಕಿದ್ದನ್ನು ಗಮನಿಸಿದ ವ್ಯಕ್ತಿ: ಮುಂದಾಗಿದ್ದು ಡೊಡ್ಡ ರಂಪಾಟ!

ಬೆಂಗಳೂರು: ಡ್ರೆಸ್​ ಕೋಡ್​ ಬಗ್ಗೆ ಪ್ರಶ್ನಿಸುವ ಮೂಲಕ ಮಹಿಳಾ ಟೆಕ್ಕಿಯ ಜತೆ ವ್ಯಕ್ತಿಯೊಬ್ಬ ರಂಪಾಟ ಮಾಡಿಕೊಂಡ ಘಟನೆ ನಗರದ ಎಚ್ಎಸ್ಆರ್ ಲೇಔಟ್​ನಲ್ಲಿ ಗುರುವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಇದೇ ಗುರುವಾರ ಬೈಕ್​ನಲ್ಲಿ ಇಬ್ಬರು ಟೆಕ್ಕಿಗಳು ಹೊರಟಿದ್ದರು. ಈ ವೇಳೆ ಬೈಕ್ ಹಿಂದೆ ಕುಳಿತಿದ್ದ ಮಹಿಳಾ ಟೆಕ್ಕಿ ಶಾರ್ಟ್ಸ್ ಹಾಕಿದ್ದನ್ನು ಗಮನಿಸಿದ ಅಪರಿಚಿತ ವ್ಯಕ್ತಿ ಅವರಿಬ್ಬರನ್ನು ತಡೆದು ನಿಲ್ಲಿಸಿ, ನಡುರಸ್ತೆಯಲ್ಲಿಯೇ ಟಾಕ್​ ವಾರ್​ಗೆ ಇಳಿದಿದ್ದ. ಒಳ್ಳೆ ರೀತಿಯ ಬಟ್ಟೆಗಳನ್ನು ಹಾಕಿ, ಇದು ಭಾರತ. ಭಾರತದ ಸಂಸ್ಕೃತಿಯಂತೆ ಬಟ್ಟೆ ಧರಿಸಿ. ಕೈ ಮುಗಿದು ಭಾರತೀಯ ಸಂಸ್ಕೃತಿ ಉಳಿಸಿ ಎಂದು ಬೇಡಿಕೊಂಡಿದ್ದ.

ವ್ಯಕ್ತಿಯ ವರ್ತನೆಯಿಂದ ಸಿಟ್ಟಿಗೆದ್ದ ಮಹಿಳಾ ಟೆಕ್ಕಿಯ ಸ್ನೇಹಿತ ಮೊದಲು ನಿನ್ನ ಮನಸ್ಸನ್ನು ಸರಿಮಾಡಿಕೋ, ಯಾವ ರೀತಿ ಬಟ್ಟೆ ಧರಿಸಬೇಕು ಎಂಬುದನ್ನು ನೀನು ಹೇಳಬೇಕಿಲ್ಲ. ಇಂತಹದ್ದೇ ಬಟ್ಟೆ ಧರಿಸಬೇಕೆಂದು ಯಾವ ನಿಯಮವೂ ಇಲ್ಲ. ನಮ್ಮ ಪಾಡಿಗೆ ಹೋಗುತ್ತಿದ್ದ ನಮ್ಮನ್ನು ಏಕೆ ತಡದೆ ಎಂದು ಪ್ರಶ್ನಿಸುವ ಮೂಲಕ ತರಾಟೆಗೆ ತೆಗೆದುಕೊಂಡರು. ಈ ವೇಳೆ ಮಧ್ಯ ಪ್ರವೇಶಿಸಿದ ಸಾರ್ವಜನಿಕರು ಜಗಳವನ್ನು ನಿಲ್ಲಿಸಿ, ಅವರನ್ನು ಮನೆಗೆ ಕಳುಹಿಸಿದರು. ಆದರೆ, ಘಟನೆ ಬಗ್ಗೆ ಎಚ್ಎಸ್ಆರ್ ಲೇಔಟ್ ಪೊಲೀಸರಿಗೆ ದೂರು ನೀಡಲು ಟೆಕ್ಕಿಗಳು ನಿರಾಕರಿಸಿದ್ದಾರೆ ಎಂಬ ಮಾಹಿತಿ ಇದೆ.

 

Leave a Reply

Your email address will not be published. Required fields are marked *