ಪುನೀತ್​ ಅಭಿನಯದ ನಟಸಾರ್ವಭೌಮ ಟೀಸರ್​ ರಿಲೀಸ್​

ಬೆಂಗಳೂರು: ಪವರ್​ಸ್ಟಾರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರ ಬಹುನಿರೀಕ್ಷಿತ ಚಿತ್ರ ನಟಸಾರ್ವಭೌಮದ ಮೊದಲ ಟೀಸರ್​ ಗುರುವಾರ ರಿಲೀಸ್​ ಆಗಿದ್ದು, ಬಿಡುಗಡೆಯಾದ ಮೂರು ಗಂಟೆಗಳಲ್ಲೇ ಯೂಟ್ಯೂಬ್​ನಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

ಪವರ್​ಸ್ಟಾರ್​ ಚಿತ್ರವೆಂದರೆ ಅಲ್ಲಿ ಸಾಹಸ, ಸೆಂಟಿಮೆಂಟ್​, ಹಾಡು, ನೃತ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಚಿತ್ರದ ಟೀಸರ್​​ನಲ್ಲಿ ಪುನೀತ್​ ಆಕ್ಷನ್​ ಹಾಗೂ ಡಾನ್ಸ್​ ಝಲಕ್​ ಇದ್ದು ಥ್ರಿಲ್ಲಿಂಗ್​ ಆಗಿದ್ದು, ಪುನೀತ್​ ಅಭಿಮಾನಿಗಳನ್ನು ಇಂಪ್ರೆಸ್​ ಮಾಡುತ್ತಿದೆ.

ಈ ಚಿತ್ರದಲ್ಲಿ ಪುನೀತ್​ಗೆ ಜತೆ ನಾಯಕಿಯರಾಗಿ ರಚಿತಾ ರಾಮ್​ ಹಾಗೂ ಅನುಪಮ ಪರಮೇಶ್ವರ್​ ನಟಿಸಿದ್ದಾರೆ. ಪವನ್​ ಒಡೆಯರ್​ ಆಕ್ಷನ್​ ಕಟ್​ ಹೇಳಿರುವ ಈ ಸಿನಿಮಾಗೆ ರಾಕ್​ಲೈನ್​ ವೆಂಕಟೇಶ್​ ಬಂಡವಾಳ ಹೂಡಿದ್ದಾರೆ.

One Reply to “ಪುನೀತ್​ ಅಭಿನಯದ ನಟಸಾರ್ವಭೌಮ ಟೀಸರ್​ ರಿಲೀಸ್​”

Comments are closed.