More

    ನಾಳೆಯಿಂದ ಸೂಪರ್-8 ಸೆಣಸಾಟ,ಹೇಗಿದೆ ಗುಂಪಿನ ವಿಂಗಡಣೆ : ರೋಹಿತ್ ಪಡೆಗೆ ಮತ್ತೆ ಆಸೀಸ್ ಸವಾಲು

    ಸೇಂಟ್ ವಿನ್ಸೆಂಟ್: ಬರೋಬ್ಬರಿ 20 ತಂಡಗಳೊಂದಿಗೆ ಆರಂಭಗೊಂಡ 9ನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟ್ರೋಫಿಯಲ್ಲಿ ಎಂಟು ತಂಡಗಳು ಮಾತ್ರ ಮುಂದಿನ ಸುತ್ತಿಗೆ ಅರ್ಹತೆ ಪಡೆದಿವೆ.ಬಾಂಗ್ಲಾದೇಶ ತಂಡ ನೇಪಾಳ ವಿರುದ್ಧ ಗೆಲುವಿನೊಂದಿಗೆ ಸೂಪರ್- 8ಗೆ ಕೊನೆಯ ತಂಡವಾಗಿ ಅರ್ಹತೆ ಪಡೆದಿವೆ. ಇದರೊಂದಿಗೆ ಸೂಪರ್ 8 ಹಂತದಲ್ಲಿ ಆಡಲಿರುವ 8 ತಂಡಗಳನ್ನು ತಲಾ 4ರಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಬುಧವಾರ ಜಂಟಿ ಆತಿಥೇಯ ಅಮೆರಿಕ ಹಾಗೂ ದಕ್ಷಿಣ ಆಫ್ರಿಕಾ ಮುಖಾಮುಖಿಯೊಂದಿಗೆ ಮುಂದಿನ ಸುತ್ತು ಆರಂಭವಾಗಲಿದೆ.

    17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಟ್ರೋಫಿ ಜಯಿಸುವ ವಿಶ್ವಾಸದಲ್ಲಿರುವ ಟೀಮ್ ಇಂಡಿಯಾ ಟೂರ್ನಿಯಲ್ಲಿ ಸೆಮಿೈನಲ್‌ಗೇರಲು ಮೂರು ಹೆಜ್ಜೆ ಗಳು ಮಾತ್ರ ಬಾಕಿ ಇವೆ. ರೋಹಿತ್ ಶರ್ಮ ಪಡೆ ಸೂಪರ್-8 ಹಂತದ ಮೊದಲು ಗುಂಪಿನಲ್ಲಿ ಸ್ಥಾನ ಪಡೆದಿದೆ. ಏಕದಿನ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ,ಅ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ಗುಂಪಿನಲ್ಲಿರುವ ಇತರ ತಂಡಗಳಾಗಿವೆ. ಇನ್ನೊಂದು ಗುಂಪಿನಲ್ಲಿ ಅಮೆರಿಕ, ದ.ಆಫ್ರಿಕಾ, ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ತಂಡಗಳಿವೆ.

    ಐಸಿಸಿ ಟಿ20 ರ‌್ಯಾಂಕಿಂಗ್‌ನಲ್ಲಿ ವಿಶ್ವ ನಂ.1 ತಂಡವಾಗಿ ಟೂರ್ನಿಯಲ್ಲಿ ಕಣಕ್ಕಿಳಿದಿರುವ ಟೀಮ್ ಇಂಡಿಯಾ ತನ್ನ ಕೊನೇ ಲೀಗ್ ಪಂದ್ಯಕ್ಕೂ ಮುನ್ನವೇ ಸೂಪರ್-8ಗೆ ಅರ್ಹತೆ ಪಡೆದುಕೊಂಡಿತು. ಬಲಿಷ್ಠ ಆಸ್ಟ್ರೇಲಿಯಾ, ಅ್ಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳನ್ನು ಎದುರಿಸಲಿರುವ ಟೀಮ್ ಇಂಡಿಯಾಗೆ ಸೂಪರ್-8ಹಂತದಲ್ಲಿ ನೈಜ ಸವಾಲು ಎದುರಾಗಲಿದೆ. ಸೂಪರ್-8 ಹಂತದ ಎಲ್ಲ ಪಂದ್ಯಗಳು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿದ್ದು, ಭಾರತ ತನ್ನ ಮೂರು ಪಂದ್ಯಗಳನ್ನು 3 ವಿವಿಧ ತಾಣಗಳಲ್ಲಿ ಆಡಲಿದೆ.

    ಸೂಪರ್- 8 ವಿಂಗಡಣೆ: ಟೂರ್ನಿಯ ಆರಂಭಕ್ಕೂ ಮುನ್ನ ಲೀಗ್ ಹಂತದ ಪ್ರತಿ ಗುಂಪಿನ ಭಾರತ (ಎ1), ಆಸ್ಟ್ರೇಲಿಯಾ (ಬಿ2), ನ್ಯೂಜಿಲೆಂಡ್ (ಸಿ1), ಶ್ರೀಲಂಕಾ (ಡಿ2) ಮೊದಲ ಗುಂಪಿನಲ್ಲಿ ಸ್ಥಾನ ಪಡೆಯಲಿವೆ. ಪಾಕಿಸ್ತಾನ (ಎ2), ಇಂಗ್ಲೆಂಡ್ (ಬಿ1), ವೆಸ್ಟ್ ಇಂಡೀಸ್ (ಸಿ2), ದಕ್ಷಿಣ ಆಫ್ರಿಕಾ (ಡಿ1) ತಂಡಗಳಿಗೆ ಐಸಿಸಿ ಶ್ರೇಯಾಂಕ ನಿಗದಿಪಡಿಸಿತ್ತು. ಆದರೆ ಪಾಕಿಸ್ತಾನ, ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ಲೀಗ್ ಹಂತದಲ್ಲಿ ನಿರ್ಗಮನ ಕಂಡಿರುವುದರಿಂದ, ಆ ತಂಡಗಳ ಶ್ರೇಯಾಂಕದಲ್ಲಿ ಅಮೆರಿಕ (ಎ 2), ಅ್ಘಾನಿಸ್ತಾನ (ಸಿ1), ಬಾಂಗ್ಲಾದೇಶ (ಡಿ 2) ತಂಡಗಳು ಆಡಲಿವೆ. ಪ್ರತಿ ಗುಂಪಿನ ಅಗ್ರ-2 ತಂಡಗಳು ಸೆಮಿೈನಲ್‌ಗೇರಲಿದ್ದು, ಟೀಮ್ ಇಂಡಿಯಾ ಸೂಪರ್-8 ಹಂತದ ಅಂಕಪಟ್ಟಿಯಲ್ಲಿ ಯಾವುದೇ ಸ್ಥಾನ ಪಡೆದರೂ, 2ನೇ ಸೆಮಿೈನಲ್ ಪಂದ್ಯದಲ್ಲಿ ಆಡಲಿದೆ.
    ಗುಂಪು-1: ಎ1, ಬಿ2, ಸಿ1, ಡಿ2.
    ಗುಂಪು-2: ಎ2, ಬಿ1, ಸಿ2, ಡಿ1.

    See also  ಡೆಲ್ಲಿ ಕ್ಯಾಪಿಟಲ್ಸ್‌ಗೆ ಮುಂಬೈ ಸವಾಲು; ಗೆಲುವಿನ ಒತ್ತಡದಲ್ಲಿ ರಿಷಭ್ ಪಂತ್ ಪಡೆ

    ಮತ್ತೆ ಆಸೀಸ್ ಸವಾಲು: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಹಾಗೂ ಏಕದಿನ ವಿಶ್ವಕಪ್ ಟುರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲಿನ ನೋವು ಇನ್ನು ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಕಾಡುತ್ತಿರುವ ನಡುವೆಯೆ ಟೀಮ್ ಇಂಡಿಯಾ ಮತ್ತೊಮ್ಮೆ ಆಸ್ಟ್ರೇಲಿಯಾ ಸವಾಲು ಎದುರಿಸಲು ಸಜ್ಜಾಗಿದೆ. ಜೂನ್ 24ರ ಸೋಮವಾರ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಇವೆರೆಡೂ ತಂಡಗಳು ಸೂಪರ್-8 ಹಂತದಿಂದ ಸೆಮಿೈನಲ್‌ಗೇರುವ ಗುಂಪಿನ ನೆಚ್ಚಿನ ತಂಡಗಳಾಗಿವೆ. ಆದರೆ ಲೀಗ್ ಹಂತದಲ್ಲಿ ನ್ಯೂಜಿಲೆಂಡ್‌ಗೆ ಮಣಿಸಿದ ಅ್ಘಾನಿಸ್ತಾನ ಎದುರು ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಟೀಮ್ ಇಂಡಿಯಾ ಸೂಪರ್-8ನಲ್ಲಿ ಆಸೀಸ್ ತಂಡವನ್ನು ಎದುರಿಸುವುದರಿಂದ ತುಸು ಲಾಭವೂ ಹೊಂದಿದೆ. ರೋಹಿತ್ ಪಡೆ ಆಸೀಸ್ ಎದುರು ಗೆದ್ದರೂ ಅಥವಾ ಸೋತರೂ ನಾಕೌಟ್‌ಗೆ ಪ್ರವೇಶಿಸಿದರೆ. ಇವೆರಡೂ ತಂಡಗಳು ಸೆಮೀಸ್‌ನಲ್ಲಿ ಮುಖಾಮುಖಿಯಾಗುವುದು ತಪ್ಪಲಿದೆ. ಇನ್ನೊಂದು ಗುಂಪಿನಲ್ಲಿ ನಾಕೌಟ್‌ಗೇರಲು ಹಾಲಿ ಚಾಂಪಿಯನ್ ಇಂಗ್ಲೆಂಡ್, ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ತ್ರಿಕೋನ ಸ್ಪರ್ಧೆ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts