ಸಾರ್ವಜನಿಕ ಆಸ್ಪತ್ರೆಗೆ ಆರೋಗ್ಯ ನೀತಿ ಸಮಿತಿ ತಂಡ ಭೇಟಿ

ವಿರಾಜಪೇಟೆ: ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ಇತ್ತೀಚೆಗೆ ಕೇಂದ್ರ ಸರ್ಕಾರದ ಆರೋಗ್ಯ ನೀತಿ ಸಮಿತಿ ತಂಡ ಭೇಟಿ ನೀಡಿ ಆಸ್ಪತ್ರೆಯ ಆಧುನಿಕತೆ ಹಾಗೂ ಸೌಲಭ್ಯಗಳನ್ನು ಪರಿಶೀಲನೆ ನಡೆಸಿತು.

ಮುಖ್ಯ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ ಅವರ ಸಮ್ಮುಖದಲ್ಲಿ ಏರ್ಪಡಿಸಿದ್ದ ಆರೋಗ್ಯ ನೀತಿ ಸಮಿತಿ ಸಭೆಯಲ್ಲಿ ಆಸ್ಪತ್ರೆಗೆ ಎಲ್ಲ ಆಧುನಿಕ ಸೌಲಭ್ಯಗಳಿದ್ದರೂ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇದೆ. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ತೊಂದರೆಯಾಗುತ್ತಿದೆ.

ಆಧುನಿಕ ಶಸ್ತ್ರಚಿಕಿತ್ಸಾ ಘಟಕವಿದ್ದರೂ ಅರಿವಳಿಕೆ ತಜ್ಞರಿಲ್ಲದೆ ರೋಗಿಗಳ ಶಸ್ತ್ರಚಿಕಿತ್ಸೆಗೂ ಅವಕಾಶವಿಲ್ಲದಂತಾಗುತ್ತಿದೆ. ಸುಮಾರು 240 ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ಜಿಲ್ಲಾ ಮಟ್ಟಕ್ಕೆ ಸಮನಾದ ಆಸ್ಪತ್ರೆಗೆ ಕನಿಷ್ಠ 14 ವೈದ್ಯರು ಇರಬೇಕಿದ್ದು, ಕೇವಲ 6 ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಿಶ್ವನಾಥ್ ಸಿಂಪಿ ಸಭೆಗೆ ತಿಳಿಸಿದರು.

ಅರಿವಳಿಕೆ ತಜ್ಞ ಸೇರಿ ಇತರ ಎಲ್ಲ ವಿಭಾಗಗಳಿಗೂ ಕೊರತೆ ಇರುವ ವೈದ್ಯರನ್ನು ತಕ್ಷಣ ನೇಮಕ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಲು ಸಭೆಯಲ್ಲಿ ನಿರ್ಧರಿಸಿತು.

ಕೇಂದ್ರದ ಆರೋಗ್ಯ ನೀತಿ ಸಮಿತಿ ತಂಡದ ಡಾ ಮಧು ಶ್ರೀನಿವಾಸ್ ನೇತೃತ್ವದಲ್ಲಿ ಡಾ ನಿಸರ್ಗ, ಡಾ ಆದರ್ಶ್, ಡಾ ಹರ್ಷಿತ್ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಘಟಕ, ಶಸ್ತ್ರಚಿಕಿತ್ಸಾ ಉಪಕರಣಗಳು, ಡಯಾಲಿಸಿಸ್ ಘಟಕ, ಇಂಟೆನ್ಸಿವ್‌ಕೇರ್, ತುರ್ತು ನಿಗಾ ಘಟಕ ಎಮರ್ಜೆನ್ಸಿ ವಾರ್ಡ್ ಮೊದಲಾದೆಡೆ ಖುದ್ದು ಪರಿಶೀಲಿಸಿತು.

ವಿರಾಜಪೇಟೆ ತಾಲೂಕು ವೈದ್ಯಾಧಿಕಾರಿ ಡಾ.ಯತಿರಾಜು ಸಭೆಯಲ್ಲಿ ಹಾಜರಿದ್ದರು.

 

Leave a Reply

Your email address will not be published. Required fields are marked *