ಪರ್ತ್: ಸವಾಲಿನ ಆಸ್ಟ್ರೆಲಿಯಾ ಪ್ರವಾಸದಲ್ಲಿ ಭಾರತ ತಂಡ ಬುಧವಾರ ವಾಕಾದಲ್ಲಿ ಹೊಸ ಸಮವಸ್ತ್ರದಲ್ಲಿ ಅಭ್ಯಾಸ ಆರಂಭಿಸಿದೆ. ಟೆಸ್ಟ್ ತಂಡದ ಆಟಗಾರರೊಂದಿಗೆ ಭಾರತ ಎ ತಂಡದ ಆಟಗಾರರೂ ಅಭ್ಯಾಸದಲ್ಲಿ ನೆರವಾದರು. ವಿರಾಟ್ ಕೊಹ್ಲಿ ನೆಟ್ಸ್ನಲ್ಲಿ ಹೆಚ್ಚಿನ ಸಮಯವನ್ನು ಬ್ಯಾಟಿಂಗ್ ಅಭ್ಯಾಸದಲ್ಲಿ ಕಳೆದರು.
ಭಾರತ ತಂಡ ಶುಕ್ರವಾರದಿಂದ ಭಾನುವಾರದವರೆಗೆ ವಾಕಾ ಗ್ರೌಂಡ್ನಲ್ಲಿ ಭಾರತ ಎ ತಂಡದವರೆಗೆ ತ್ರಿದಿನ ಅಭ್ಯಾಸ ಪಂದ್ಯ ಆಡಲಿದೆ. ಸಾರ್ವಜನಿಕರ ಕಣ್ಣೆದುರಲ್ಲೇ ಅಭ್ಯಾಸ ನಡೆಸಲು ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಆದರೆ ಆಸೀಸ್ ಮಾಧ್ಯಮಗಳು, ಅಭ್ಯಾಸ ವೀಕ್ಷಣೆಯಿಂದ ಸಾರ್ವಜನಿಕರನ್ನು ರ್ನಿಬಂಧಿಸಬೇಕೆಂದು ಭಾರತ ತಂಡ ಬೇಡಿಕೆ ಸಲ್ಲಿಸಿದೆ ಎಂದು ವರದಿ ಮಾಡಿವೆ. ಆದರೆ ಬಿಸಿಸಿಐ ಇದನ್ನು ತಳ್ಳಿಹಾಕಿದೆ.
ಭಾರತ&ಭಾರತ ಎ ನಡುವೆ ನಿಗದಿಯಾಗಿದ್ದ ಅಭ್ಯಾಸ ಪಂದ್ಯವನ್ನು ಈ ಮುನ್ನ ರದ್ದುಗೊಳಿಸಿದ್ದರೂ, ಈಗ ಮರುನಿಗದಿಪಡಿಸಲಾಗಿದೆ. ಆದರೆ ಇದು ಪ್ರಥಮ ದರ್ಜೆ ಪಂದ್ಯದ ಮಾನ್ಯತೆ ಹೊಂದಿರುವುದಿಲ್ಲ. ಇದರಿಂದಾಗಿ ಬ್ಯಾಟರ್ ಮೊದಲ ಓವರ್ನಲ್ಲೇ ಔಟಾದರೂ, ಬ್ಯಾಟಿಂಗ್ ಮುಂದುವರಿಸಲು ಅವಕಾಶ ನೀಡಲಾಗುತ್ತದೆ. ಅಲ್ಲದೆ ಒಂದು ತಂಡದಲ್ಲಿ ಬಹುತೇಕ ಬೌಲರ್ಗಳೇ ಇದ್ದರೆ, ಇನ್ನೊಂದು ತಂಡದಲ್ಲಿ ಪ್ರಮುಖ ಬ್ಯಾಟರ್ಗಳಿರುತ್ತಾರೆ ಎಂದು ಮೂಲಗಳು ತಿಳಿಸಿವೆ.
ರೋಹಿತ್ ಮುಂಬೈನಲ್ಲೇ ಅಭ್ಯಾಸ
ಭಾರತ ಟೆಸ್ಟ್ ತಂಡ ಆಸೀಸ್ನಲ್ಲಿ ಈಗಾಗಲೆ ಅಭ್ಯಾಸ ಆರಂಭಿಸಿರುವ ನಡುವೆ, ಎರಡನೇ ಮಗುವಿನ ನಿರೀೆಯಲ್ಲಿ ತವರಿನಲ್ಲೇ ಉಳಿದುಕೊಂಡಿರುವ ನಾಯಕ ರೋಹಿತ್ ಶರ್ಮ ಮುಂಬೈನಲ್ಲೇ ಅಭ್ಯಾಸ ನಡೆಸುತ್ತಿದ್ದಾರೆ. ಅವರ ಆಸೀಸ್ ಪ್ರಯಾಣ ದಿನಾಂಕ ಕೂಡ ಇನ್ನೂ ಅನಿಶ್ಚಿತತೆಯಲ್ಲಿದೆ. 37 ವರ್ಷದ ರೋಹಿತ್ ಬುಧವಾರ ರಿಲಯನ್ಸ್ ಕಾರ್ಪೊರೇಟ್ ಪಾರ್ಕ್ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಪತ್ನಿ ರಿತಿಕಾ ಮಗುವಿಗೆ ಜನ್ಮ ನೀಡಿದ ಬಳಿಕವೇ ರೋಹಿತ್ ಆಸೀಸ್ಗೆ ಪ್ರಯಾಣಿಸಲಿದ್ದಾರೆ. ಹೀಗಾಗಿ ಮೊದಲ ಟೆಸ್ಟ್ನಲ್ಲಿ ಅವರು ಆಡುವುದು ಅನುಮಾನವೆನಿಸಿದೆ. ಮೊದಲ ಟೆಸ್ಟ್ ಪಂದ್ಯ ನವೆಂಬರ್ 22ರಿಂದ ನಡೆಯಲಿದೆ.
ಲಖನೌ ಸೂಪರ್ಜೈಂಟ್ಸ್ ತಂಡ ತೊರೆದಿದ್ದಕ್ಕೆ ಕಾರಣ ಬಿಚ್ಚಿಟ್ಟ ಕೆಎಲ್ ರಾಹುಲ್!