ವಿಶ್ವಕಪ್​​ ಸಮರಕ್ಕೆ ಭಾರತ ತಂಡದ ವೇಳಾಪಟ್ಟಿ: ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರಿಸಲಿರುವ ಟೀಂ ಇಂಡಿಯಾ

ಮುಂಬೈ: ವಿಶ್ವದ ಜನಪ್ರಿಯ ಕ್ರೀಡೆಯಾದ ಕ್ರಿಕೆಟ್​​​​​​​​​​​​ ವಿಶ್ವಕಪ್​​​ ಸಮರ ಇದೇ ಮೇ 30 ರಂದು ಆರಂಭವಾಗಲಿದ್ದು, ವಿಶ್ವದ ಪ್ರಮುಖ ರಾಷ್ಟ್ರಗಳು ತಮ್ಮ ತಂಡಗಳನ್ನು ಬಿಡುಗಡೆ ಮಾಡಿವೆ. ಭಾರತ ಕ್ರಿಕೆಟ್​​ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ 15 ಆಟಗಾರರ ತಂಡ ಪ್ರಕಟ ಮಾಡಿತ್ತು. ಇಂದು ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ನಾಯಕ ವಿರಾಟ್​​ ಕೊಹ್ಲಿ ಅವರು ತಂಡವನ್ನು ಮುನ್ನಡೆಸಿದರೆ, ಉಪ ನಾಯಕ ರೋಹಿತ್​​ ಶರ್ಮಾ ಜವಾಬ್ದಾರಿ ವಹಿಸಲಿದ್ದಾರೆ. 2011ರ ವಿಶ್ವಕಪ್​​​ ವಿಜೇತ ನಾಯಕ ಮಹೇಂದ್ರ ಸಿಂಗ್​​ ಧೋನಿ ವಿಕೆಟ್​ ಕೀಪರ್​​​​​​ ಆಗಿ ತಂಡದಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ.


ವಿಶ್ವಕಪ್​ ಪಂದ್ಯಾವಳಿಯಲ್ಲಿ ಭಾರತ ಎದುರಿಸಲಿರುವ ತಂಡಗಳ ವೇಳಾ ಪಟ್ಟಿ ಕೆಳಗಿನಂತಿದ್ದು, ದಕ್ಷಿಣ ಆಫ್ರಿಕಾ (ಜೂನ್​​ 5) ಕೊಹ್ಲಿ ಪಡೆಗೆ ಮೊದಲ ಸವಾಲೊಡ್ಡಲಿದೆ. ಭಾರತ ಲೀಗ್​​ನಲ್ಲಿ 9 ಪಂದ್ಯಗಳನ್ನು ಆಡಲಿದೆ. ಉಳಿದಂತೆ ಜುಲೈ 9, 11 ರಂದು ಮೊದಲ ಹಾಗೂ ಎರಡನೇ ಸೆಮಿಫೈನಲ್​​ ಪಂದ್ಯಗಳು ನಡೆದರೆ, ಜುಲೈ 14 ರಂದು ಫೈನಲ್​​ ನಡೆಯಲಿದೆ. (ಏಜನ್ಸೀಸ್​)


ಭಾರತ ತಂಡದ ವೇಳಾಪಟ್ಟಿ ಇಂತಿದೆ: