Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಅಡಿಲೇಡ್​ ಟೆಸ್ಟ್​: ಟೀಂ ಇಂಡಿಯಾಗೆ ಪೂಜಾರ ಆಸರೆ

Thursday, 06.12.2018, 1:37 PM       No Comments

ಅಡಿಲೇಡ್​: ಬಾರ್ಡರ್​-ಗಾವಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯ ಪ್ರಥಮ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಚೇತೇಶ್ವರ್​ ಪೂಜಾರಾ (123 ರನ್​, 246 ಎಸೆತ, 7 ಬೌಂಡರಿ, 2 ಸಿಕ್ಸರ್​) ಗಳಿಸಿದ ಜವಾಬ್ದಾರಿಯುತ ಶತಕದ ನೆರವಿನಿಂದ ಟೀಂ ಇಂಡಿಯಾ ಮೊದಲ ದಿನ 9 ವಿಕೆಟ್​ ನಷ್ಟಕ್ಕೆ 250 ರನ್​ ಗಳಿಸಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ದುಕೊಂಡ ಟೀಂ ಇಂಡಿಯಾ ಆರಂಭದಲ್ಲೇ ಆಘಾತ ಎದುರಿಸಿತು, ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸಿದ್ದ ಮುರಳಿ ವಿಜಯ್​ ಕೇವಲ 11 ರನ್​ ಗಳಿಸಿ ಔಟಾದರು. ಕನ್ನಡಿಗ ಕೆ.ಎಲ್​. ರಾಹುಲ್​ 2 ರನ್​ ಗಳಿಸಿ ಔಟಾದರು. ನಾಯಕ ಕೊಹ್ಲಿ ಕೇವಲ 3 ರನ್​ ಗಳಿಸಿದರೆ, ಅಜಿಂಕ್ಯ ರಹಾನೆ 13 ರನ್​ ಗಳಿಸಿ ಔಟಾದರು. ಟೀಂ ಇಂಡಿಯಾ ಒಂದು ಹಂತದಲ್ಲಿ 41 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಈ ಹಂತದಲ್ಲಿ ಚೇತೇಶ್ವರ್​ ಪೂಜಾರ ಜತೆಗೂಡಿದ ರೋಹಿತ್​ ಶರ್ಮಾ (37) 5ನೇ ವಿಕೆಟ್​ಗೆ 45 ರನ್​ ಕಲೆ ಹಾಕಿದರು. ನಂತರ ಪೂಜಾರ ಜತೆಯಾದ ರಿಷಭ್​ ಪಂತ್​ (25) 6ನೇ ವಿಕೆಟ್​ಗೆ 41 ರನ್​ ಗಳಿಸಿದರು. ಪಂತ್​ ಔಟಾದ ನಂತರ ಕ್ರೀಸ್​ಗಿಳಿದ ಅಶ್ವಿನ್​ (25) ಮತ್ತು ಪೂಜಾರ 7ನೇ ವಿಕೆಟ್​ಗೆ 62 ರನ್​ ಗಳಿಸಿದರು. ಒಂದು ಕಡೆ ವಿಕೆಟ್​ ಬೀಳುತ್ತಿದ್ದರೂ ಕ್ರೀಸ್​ನಲ್ಲಿ ಗಟ್ಟಿಯಾಗಿ ಬೇರೂರಿದ್ದ ಪೂಜಾರ 9ನೇ ವಿಕೆಟ್​ ಮೊಹಮ್ಮದ್​ ಶಮಿ (6) ಜತೆಗೂಡಿ 40 ರನ್​ ಗಳಿಸಿದರು. ಅಂತಿಮವಾಗಿ ಪೂಜಾರ 123 ರನ್​ ಗಳಿಸಿದ್ದಾಗ ರನ್​ಔಟ್​ ಬಲೆಗೆ ಬಿದ್ದರು.

ಪೂಜಾರ ಈ ಪಂದ್ಯದಲ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ 5000 ರನ್​ ಪೂರೈಸಿದರು. ಟೀಂ ಇಂಡಿಯಾ ಮೊದಲ ದಿನದಾಟದಂತ್ಯಕ್ಕೆ 87.5 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 250 ರನ್​ ಗಳಿಸಿದೆ.

ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 63 ಕ್ಕೆ 2, ಜೋಶ್ ಹ್ಯಾಸಲ್​ವುಡ್ 52 ಕ್ಕೆ 2, ಪ್ಯಾಟ್ ಕಮ್ಮಿನ್ಸ್ 49 ಕ್ಕೆ 2 ಮತ್ತು ನಾಥನ್ ಲ್ಯಾನ್ 83 ಕ್ಕೆ 2 ವಿಕೆಟ್​ ಪಡೆದರು. (ಏಜೆನ್ಸೀಸ್​)

 

ಆಸೀಸ್ ನೆಲದಲ್ಲಿ ಹೊಸ ಇತಿಹಾಸದ ತವಕ

 

Leave a Reply

Your email address will not be published. Required fields are marked *

Back To Top