ವೇಗಿ ಜಸ್​ಪ್ರೀತ್ ಬುಮ್ರಾರೊಂದಿಗೆ ಇರುವುದು ನಟಸೌರ್ವಭೌಮನ ಚೆಲುವೆ ಅನುಪಮಾ ಪರಮೇಶ್ವರನ್‌? ಫೋಟೊ ವೈರಲ್‌

ನವದೆಹಲಿ: ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅಭಿನಯದ ‘ನಟಸಾರ್ವಭೌಮ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದ ಮಲಯಾಳಂನ ಪ್ರೇಮಂ ಖ್ಯಾತಿಯ ನಟಿ ಅನುಪಮಾ ಹಾಗೂ ಟೀಂ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ನಡುವೆ ಕುಚು ಕುಚು ಇರಬಹುದಾ ಎಂದು ಸಿನಿರಸಿಕರು ಶಂಕೆ ವ್ಯಕ್ತಪಡಿಸುತ್ತಿದ್ದ ಬೆನ್ನಲ್ಲೇ ಬುಮ್ರಾ ಟ್ವಿಟರ್‌ನಲ್ಲಿ ಹಾಕಿರುವ ಫೋಟೊ ವೈರಲ್‌ ಆಗಿದೆ.

ಜಸ್​ಪ್ರೀತ್ ಬುಮ್ರಾ ನಟಿ ಅನುಪಮಾ ಪರಮೇಶ್ವರನ್ ನಡುವೆ ಪ್ಯಾರ್‌ಗೆ ಆಗ್ಬಿಟ್ಟೈತೆ ಅಂತ ಕೆಲ ದಿನಗಳ ಹಿಂದಷ್ಟೇ ಸುದ್ದಿಯೊಂದು ಹರಿದಾಡಿತ್ತು. ಆದರೆ, ಅಷ್ಟಕ್ಕೆ ನಿಲ್ಲದ ಇವರಿಬ್ಬರ ಸುದ್ದಿ ಇದೀಗ ಮತ್ತೊಂದು ವಿಚಾರಕ್ಕೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣ ಟ್ವಿಟರ್‌ನಲ್ಲಿ ಜಸ್​ಪ್ರೀತ್ ಬುಮ್ರಾ​ ಹಾಕಿರುವ ಫೋಟೋ.

ಹೌದು, ನಿನ್ನೆಯಷ್ಟೇ ಬುಮ್ರಾ ಟ್ವಿಟರ್ ಖಾತೆಯಲ್ಲಿ ಫೋಟೋವೊಂದನ್ನು ಹಾಕಿದ್ದಾರೆ. ಅದರಲ್ಲಿ ಮಹಿಳೆಯೊಬ್ಬರ ಹೆಗಲ ಮೇಲೆ ಕೈ ಇಟ್ಟುಕೊಂಡು ಹೋಗುವ ದೃಶ್ಯವಿದೆ. ಏನೇ ಇರಲಿ, ಯಾವಾಗಲೂ ನನ್ನನ್ನು ಬೆಂಬಲಿಸುವ ಹೆಗಲು ಇದು ಎಂದು ಬರೆದುಕೊಂಡಿದ್ದರು. ಈ ಫೋಟೊ ಇದೀಗ ಅನುಪಮಾ ಮತ್ತು ಬುಮ್ರಾ ನಡುವೆ ಕುಚ್‌ ಕುಚ್‌ ಹೋತಾ ಹೈ ಎನ್ನುವುದಕ್ಕೆ ಪುಷ್ಟಿ ನೀಡಿದಂತಿದೆ.

ಫೋಟೋ ನೋಡಿದ ಅನೇಕರು ಇದು ಅನುಪಮಾ ಪರಮೇಶ್ವರನ್​ ಅವರೇನಾ ಎಂದು ಕೇಳಿದ್ದರೆ ಮತ್ತೆ ಕೆಲವರು ಇಲ್ಲ ಇದು ಬೂಮ್ರಾ ತಾಯಿ ಎಂದಿದ್ದಾರೆ. ಒಟ್ಟಿನಲ್ಲಿ ಬುಮ್ರಾ ಹಾಕಿರುವ ಫೋಟೊ ಇದೀಗ ಸಾಕಷ್ಟು ಊಹಾಪೋಹಗಳಿಗೆ ಎಡೆಯಾಗಿರುವುದಂತೂ ಸುಳ್ಳಲ್ಲ.

ಇಂತದ್ದೊಂದು ಊಹೆಗೆ ಕಾರಣವಾಗಿದ್ದು ಟೀಂ ಇಂಡಿಯಾದ ಕ್ರಿಕೆಟಿಗ ಜಸ್ಪ್ರೀತ್‌ ಬುಮ್ರಾ ಅವರ ಟ್ವಿಟರ್‌ ಖಾತೆ. ಅವರು ಫಾಲೋ ಮಾಡುತ್ತಿರುವುದು ಕೇವಲ 25 ಜನರನ್ನು ಅದರಲ್ಲಿ ನಟಿ ಅನುಪಮಾ ಅವರನ್ನು ಕೂಡ ಬುಮ್ರಾ ಫಾಲೋ ಮಾಡುತ್ತಿದ್ದಾರೆ. ಬಹುತೇಕ ಕ್ರಿಕೆಟಿಗರನ್ನೇ ಫಾಲೋ ಮಾಡುತ್ತಿರುವ ಬುಮ್ರಾ ಅವರು ಅನುಪಮಾ ಅವರನ್ನು ಮಾತ್ರ ಫಾಲೋ ಮಾಡುತ್ತಿರುವುದು ಇಬ್ಬರ ನಡುವೆ ಪ್ರೇಮಾಂಕುರವಾಗಿರಬಹುದಾ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಕೆಲ ದಿನಗಳ ಹಿಂದಷ್ಟೇ ಮಾತನಾಡಿದ್ದ ಅನುಪಮಾ ನಾವಿಬ್ಬರು ಉತ್ತಮ ಸ್ನೇಹಿತರು. ಈ ರೀತಿಯ ಸುದ್ದಿ ಹಬ್ಬಿರುವುದು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದರು. (ಏಜೆನ್ಸೀಸ್)

Leave a Reply

Your email address will not be published. Required fields are marked *